Skip to main content

3Kaala News

ಸುಭಾಷಿತ 

ಯಾರಿಗಾದರೂ ಅವರು ಕೃತಜ್ಞತೆಯಿಂದ ಸ್ವೀಕರಿಸಲು ಸಾಧ್ಯವಾಗುವಷ್ಟು ಮಾತ್ರ ಸಹಾಯ ಮಾಡಿ. ನೀವು ಅವನಿಗೆ ಹೆಚ್ಚು ಸಹಾಯ ಮಾಡಿದರೆ, ಅವನು ಅದನ್ನು ತನ್ನ ಹಕ್ಕು ಎಂದು ಪರಿಗಣಿಸಲು ಪ್ರಾರಂಭಿಸುತ್ತಾನೆ. ಮತ್ತು ಅವನು ಅದನ್ನು ಪಡೆಯದಿದ್ದಾಗ, ಅದೇ ವ್ಯಕ್ತಿ ನಿಮ್ಮ ಶತ್ರುವಾಗುತ್ತಾನೆ.

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಮೈಸೂರು ಜಿಲ್ಲೆಯಲ್ಲಿ ಅನಧಿಕೃತ ಹೋಂ ಸ್ಟೇಗಳ ಕಾರ್ಯಾಚರಣೆ ಸ್ಥಗಿತ; ಕಡ್ಡಾಯ ನೋಂದಣಿಗೆ ಜಿಲ್ಲಾಧಿಕಾರಿ ಆದೇಶ

ಮೈಸೂರು: ಕೊಡಗು ಜಿಲ್ಲೆಯ ಹೋಂ ಸ್ಟೇಯೊಂದರಲ್ಲಿ ನಡೆದ ವಿದೇಶಿ ಪ್ರವಾಸಿ ಮಹಿಳೆಯ ಮೇಲಿನ ದೌರ್ಜನ್ಯದ ಘಟನೆಯು ಪ್ರವಾಸಿಗರ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಈ ಹಿನ್ನಲೆಯಲ್ಲಿ ಮೈಸೂರು ಜಿಲ್ಲೆಗೆ ಭೇಟಿ ನೀಡುವ ದೇಶ-ವಿದೇಶಿ ಪ್ರವಾಸಿಗರ ಹಿತದೃಷ್ಟಿಯಿಂದ ಹಾಗೂ ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮೈಸೂರು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದಾರೆ.ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಾಯಿಸಿಕೊಳ್ಳದೆ ಕಾನೂನುಬಾಹಿರವಾಗಿ ನಡೆಸಲ್ಪಡುತ್ತಿರುವ ಜಿಲ್ಲೆಯ ಎಲ್ಲಾ ಹೋಂ ಸ್ಟೇಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಗಿತಗೊಳಿಸಬೇಕು ಹಾಗೂ…

Read More

ಕಬಿನಿ ಜಲಾಶಯದಲ್ಲಿ ನೀರಿನ ಅಭಾವ: ಜಲಾಶಯ ನೀರಿಗೆ ಅವಲಂಬಿತರಾಗಿ ಬೆಳೆ ಬೆಳೆಯಬೇಡಿ

ಮೈಸೂರು; 2026-27 ನೇ ಸಾಲಿನ ಜೂನ್ 1 ರಿಂದ ಜುಲೈ 20 ರವರೆಗೆ ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯದ ಜಲಾನಯನ ಪ್ರದೇಶದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗದ ಹಿನ್ನೆಲೆಯಲ್ಲಿ, ಜಲಾಶಯಕ್ಕೆ ಹರಿದುಬರುತ್ತಿರುವ ನೀರಿನ ಪ್ರಮಾಣ ತೀವ್ರವಾಗಿ ಕುಸಿದಿದೆ. ಪ್ರಸ್ತುತ ಕಬಿನಿ ಜಲಾಶಯದಲ್ಲಿ ಕುಡಿಯುವ ನೀರಿಗಾಗಿ 9.83 ಟಿ.ಎಂ.ಸಿ ಹಾಗೂ ಕೃಷಿ ಚಟುವಟಿಕೆಗಳಿಗಾಗಿ 2.75 ಟಿ.ಎಂ.ಸಿ ನೀರು ಮಾತ್ರ ಬಳಕೆಗೆ ಲಭ್ಯವಿದೆ.ರಾಜ್ಯಾದ್ಯಂತ ಎಲ್ ನಿನೊ ಪರಿಣಾಮ ಹಾಗೂ ಜಲಾಶಯಗಳ ಒಳಹರಿವು ಶೂನ್ಯಕ್ಕೆ ಇಳಿದಿರುವ ಬರದ ಪರಿಸ್ಥಿತಿಯ ಕುರಿತು…

Read More

ಅಣಕು ಪರೀಕ್ಷೆಗಳು ಸ್ವಯಂ ಮೌಲ್ಯಮಾಪನ ಮಾಡಿಕೊಳ್ಳಲು ನೆರವಾಗುತ್ತವೆ

ಮೈಸೂರು: ಅಣಕು ಪರೀಕ್ಷೆಗಳು ಅಭ್ಯರ್ಥಿಗಳ ಶಕ್ತಿ ಹಾಗೂ ದೌರ್ಬಲ್ಯ ಎರಡನ್ನೂ ಎತ್ತಿ ತೋರಿಸುವುದರಿಂದ ಸ್ವಯಂ ಮೌಲ್ಯಮಾಪನ ಮಾಡಿಕೊಳ್ಳಲು ನೆರವಾಗುತ್ತವೆ ಎಂದು ಮೈಸೂರು ಉಪ ವಿಭಾಗಾಧಿಕಾರಿ ಆಶಪ್ಪ ಕೆ. ಹೇಳಿದರು.ಆಗಸ್ಟ್ 2 ರಂದು ರಾಜ್ಯ ಮಟ್ಟದಲ್ಲಿ ನಡೆಯಲಿರುವ ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಯ ಉದ್ಯೋಗಾಕಾಂಕ್ಷಿಗಳ ನೆರವಿಗಾಗಿ, ಮೈಸೂರು ನಗರ ಕೇಂದ್ರ ಗ್ರಂಥಾಲಯ ಹಾಗೂ ಬೆಂಗಳೂರಿನ ಜ್ಞಾನಗಂಗೋತ್ರಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ಸಹಯೋಗದೊಂದಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯಕ್ಕೆ ಸಂಬAಧಿಸಿದAತೆ ಆಯೋಜಿಸಲಾಗಿದ್ದ 06ನೇ ಉಚಿತ ಅಣಕು…

Read More

ರೈತರ ವಿಶ್ವಾಸದೊಂದಿಗೆ ವಿದ್ಯುತ್ ಮೂಲಸೌಕರ್ಯ ಯೋಜನೆಗೆ ಚಾಲನೆ

ಮೈಸೂರು: ರೈತರ ಮುಖದಲ್ಲಿ ಮಂದಹಾಸ ಮೂಡಿಸಿದ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ, ಮೈಸೂರು ಜಿಲ್ಲೆಯ ವಿದ್ಯುತ್ ಮೂಲಸೌಕರ್ಯ ಕಾಮಗಾರಿಗೆ ಚಾಲನೆ ನೀಡಲಾಯಿತು. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕವಿಪ್ರನಿನಿ), ಸ್ಥಳೀಯ ರೈತರು, ರೈತ ಸಂಘದ ಮುಖಂಡರು ಹಾಗೂ ಪೊಲೀಸ್ ಇಲಾಖೆ ಸಹಕಾರದೊಂದಿಗೆ ಭೂ ಮಾಲೀಕರಿಗೆ ಪರಿಹಾರದ ಡಿಡಿ ವಿತರಣೆ ಮಾಡಿ, ಸ್ಥಗಿತಗೊಂಡಿದ್ದ ಕಾಮಗಾರಿಗೆ ಗುರುವಾರ ಚಾಲನೆ ನೀಡಲಾಯಿತು. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕವಿಪ್ರನಿನಿ), ಮೈಸೂರು ಜಿಲ್ಲೆ ಮೂಲಕ ಮೈಸೂರು ತಾಲೂಕಿನ 220ಕೆವಿ…

Read More

ನರಸಿಂಹರಾಜ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಗಳ ಸ್ಥಳ ಪರಿಶೀಲನೆ

ಮೈಸೂರು; ಇಲ್ಲಿನ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ಪರಿಶೀಲನಾ ಕಾರ್ಯಗಳ ಪರಿಶೀಲನೆಗಾಗಿ ನೇಮಕಗೊಂಡಿರುವ ಪರಿಶೀಲನಾ ನೋಡಲ್ ಅಧಿಕಾರಿಯಾದ ಮೈಸೂರು ಜಿ.ಪಂಯ ಉಪಕಾರ್ಯದರ್ಶಿ ಭೀಮಪ್ಪ ಅಳಲಿ ಅವರು ಇಂದು ನರಸಿಂಹರಾಜ ವಿಧಾನಸಭಾ ಕ್ಷೇತ್ರದ ವಲಯ ಕಚೇರಿ-7, 8 ಹಾಗೂ ವಲಯ ಕಚೇರಿ-9 ವ್ಯಾಪ್ತಿಯ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ, ಇಈ ಫಾರಂಗಳ ಡಿಜಿಟಲೈಜೇಷನ್ ಹಾಗೂ ಪರಿಶೀಲನಾ ಕಾರ್ಯವನ್ನು ಸ್ಥಳದಲ್ಲೇ ವೀಕ್ಷಿಸಿ ಸಮಗ್ರ ಪರಿಶೀಲನೆ ನಡೆಸಿದರು.ಪರಿಶೀಲನೆ ಸಂದರ್ಭದಲ್ಲಿ ಡಿಜಿಟಲೈಜೇಷನ್ ಕಾರ್ಯದ ಪ್ರಗತಿ, ಪರಿಶೀಲನೆಯ ಗುಣಮಟ್ಟ, ದಾಖಲೆಗಳ…

Read More

ಗಿಡ ನೆಡುವ ಮೂಲಕ ಬಾಲಗಂಗಾಧರ ತಿಲಕ್ , ಚಂದ್ರಶೇಖರ ಆಜಾದ್ ಜನ್ಮ ದಿನಾಚರಣೆ

ಮೈಸೂರು: ನಗರದ ಚಾಮುಂಡಿಪುರ0ನಲ್ಲಿರುವ ತಗಡೂರು ರಾಮಚಂದ್ರರಾವ್ವೀರ ಸೇನಾನಿ ಚಂದ್ರಶೇಖರ ಆಜಾದ್ ಹಾಗೂ ಬಾಲಗಂಗಾಧರ ತಿಲಕ್ ಅವರ ಜನ್ಮದಿನಾಚರಣೆಯನ್ನುವಿವಿಧ ಜಾತಿಯ ಗಿಡಗಳನ್ನು ನೆಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತುಸ್ವರಾಜ್ಯದ ಕನಸನ್ನು ಪ್ರತಿಯೊಬ್ಬ ಭಾರತೀಯನ ಎದೆಯಲ್ಲಿ ಬಿತ್ತಿ, ಅಖಂಡ ರಾಷ್ಟçಭಕ್ತಿಯ ಜಾಗೃತಿ ಮೂಡಿಸಿದ ಕ್ರಾಂತಿವೀರ ಲೋಕಮಾನ್ಯ ಬಾಲಗಂಗಾಧರ ತಿಲಕ್ ಹಾಗೂ ಬ್ರಿಟಿಷರ ಗುಲಾಮಗಿರಿಗೆ ಎಂದೂ ತಲೆಬಾಗದೆ, ಅಂತಿಮ ಉಸಿರಿನವರೆಗೂ ಚಂದ್ರಶೇಖರ ಆಜಾದ್’ಅವರ ಹೋರಾಟವನ್ನು ಈ ವೇಳೆ ಸ್ಮರಿಸಲಾಯಿತು.ಈ ಸಂದರ್ಭದಲ್ಲಿ ನಗರ ಪಾಲಿಕೆಯ ಮಾಜಿ ಸದಸ್ಯ ಮಾ.ವಿ.ರಾಮ್ ಪ್ರಸಾದ್,ದಿ ಮೈಸೂರು ಕೋ ಆಪರೇಟಿವ್…

Read More