
ಮೈಸೂರು: ನಗರದ ಚಾಮುಂಡಿಪುರ0ನಲ್ಲಿರುವ ತಗಡೂರು ರಾಮಚಂದ್ರರಾವ್
ವೀರ ಸೇನಾನಿ ಚಂದ್ರಶೇಖರ ಆಜಾದ್ ಹಾಗೂ ಬಾಲಗಂಗಾಧರ ತಿಲಕ್ ಅವರ ಜನ್ಮದಿನಾಚರಣೆಯನ್ನು
ವಿವಿಧ ಜಾತಿಯ ಗಿಡಗಳನ್ನು ನೆಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು
ಸ್ವರಾಜ್ಯದ ಕನಸನ್ನು ಪ್ರತಿಯೊಬ್ಬ ಭಾರತೀಯನ ಎದೆಯಲ್ಲಿ ಬಿತ್ತಿ, ಅಖಂಡ ರಾಷ್ಟçಭಕ್ತಿಯ ಜಾಗೃತಿ ಮೂಡಿಸಿದ ಕ್ರಾಂತಿವೀರ ಲೋಕಮಾನ್ಯ ಬಾಲಗಂಗಾಧರ ತಿಲಕ್ ಹಾಗೂ ಬ್ರಿಟಿಷರ ಗುಲಾಮಗಿರಿಗೆ ಎಂದೂ ತಲೆಬಾಗದೆ, ಅಂತಿಮ ಉಸಿರಿನವರೆಗೂ ಚಂದ್ರಶೇಖರ ಆಜಾದ್’ಅವರ ಹೋರಾಟವನ್ನು ಈ ವೇಳೆ ಸ್ಮರಿಸಲಾಯಿತು.
ಈ ಸಂದರ್ಭದಲ್ಲಿ ನಗರ ಪಾಲಿಕೆಯ ಮಾಜಿ ಸದಸ್ಯ ಮಾ.ವಿ.ರಾಮ್ ಪ್ರಸಾದ್,ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕ ಪಡವಾರಹಳ್ಳಿ ಎಂ ರಾಮಕೃಷ್ಣ, ಜಗದೀಶ್, ಅಪೂರ್ವ ಸುರೇಶ್, ದೂರ ರಾಜಣ್ಣ, ಸಂದೀಪ್, ಬಸವರಾಜ್, ನಾಗೇಶ್ ಯಾದವ್, ದಯಾನಂದ ನಾಯಕ್, ಸುಚೇಂದ್ರ ,ಮಿರ್ಲೆ ಪನೀಷ, ಮಹದೇವಸ್ವಾಮಿ, ಹಾಗೂ ಇನ್ನಿತರರು ಹಾಜರಿದ್ದರು