
ಮೈಸೂರು; ಇಲ್ಲಿನ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ಪರಿಶೀಲನಾ ಕಾರ್ಯಗಳ ಪರಿಶೀಲನೆಗಾಗಿ ನೇಮಕಗೊಂಡಿರುವ ಪರಿಶೀಲನಾ ನೋಡಲ್ ಅಧಿಕಾರಿಯಾದ ಮೈಸೂರು ಜಿ.ಪಂಯ ಉಪಕಾರ್ಯದರ್ಶಿ ಭೀಮಪ್ಪ ಅಳಲಿ ಅವರು ಇಂದು ನರಸಿಂಹರಾಜ ವಿಧಾನಸಭಾ ಕ್ಷೇತ್ರದ ವಲಯ ಕಚೇರಿ-7, 8 ಹಾಗೂ ವಲಯ ಕಚೇರಿ-9 ವ್ಯಾಪ್ತಿಯ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ, ಇಈ ಫಾರಂಗಳ ಡಿಜಿಟಲೈಜೇಷನ್ ಹಾಗೂ ಪರಿಶೀಲನಾ ಕಾರ್ಯವನ್ನು ಸ್ಥಳದಲ್ಲೇ ವೀಕ್ಷಿಸಿ ಸಮಗ್ರ ಪರಿಶೀಲನೆ ನಡೆಸಿದರು.
ಪರಿಶೀಲನೆ ಸಂದರ್ಭದಲ್ಲಿ ಡಿಜಿಟಲೈಜೇಷನ್ ಕಾರ್ಯದ ಪ್ರಗತಿ, ಪರಿಶೀಲನೆಯ ಗುಣಮಟ್ಟ, ದಾಖಲೆಗಳ ನಿರ್ವಹಣೆ ಹಾಗೂ ಭಾರತ ಚುನಾವಣಾ ಆಯೋಗದ ಮಾರ್ಗಸೂಚಿಗಳ ಅನುಸರಣೆಯನ್ನು ಅವಲೋಕಿಸಲಾಯಿತು. ಇದೇ ವೇಳೆ, ನಿಗದಿತ ಅವಧಿಯೊಳಗೆ ಗುಣಮಟ್ಟದೊಂದಿಗೆ ಕಾರ್ಯವನ್ನು ಪೂರ್ಣಗೊಳಿಸುವಂತೆ ಸಂಬAಧಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಅಗತ್ಯ ಮಾರ್ಗದರ್ಶನ ನೀಡಲಾಯಿತು.
ಈ ಸ್ಥಳ ಪರಿಶೀಲನೆ ವೇಳೆ ಚುನಾವಣಾ ನೋಂದಣಾಧಿಕಾರಿ ವೆಂಕಟೇಶ್ ಸಿ ಅವರು ಸ್ಥಳ ಪರಿಶೀಲನೆಯಲ್ಲಿ ಭಾಗವಹಿಸಿ, ಡಿಜಿಟಲೈಜೇಷನ್ ಹಾಗೂ ಪರಿಶೀಲನಾ ಕಾರ್ಯದ ಪ್ರಗತಿಯನ್ನು ಅವಲೋಕಿಸಿದರು.
ಈ ಸಂದರ್ಭದಲ್ಲಿ ವಲಯ ಕಚೇರಿ-7ರ ಸಹಾಯಕ ಮತದಾರರ ನೋಂದಣಾಧಿಕಾರಿ ರತ್ನಾಂಬಿಕೆ, ವಲಯ ಕಚೇರಿ-8ರ ಸಹಾಯಕ ಮತದಾರರ ನೋಂದಣಾಧಿಕಾರಿ ಸೋಮಶೇಖರ್ ಎಂ, ವಲಯ ಕಚೇರಿ-9ರ ಸಹಾಯಕ ಮತದಾರರ ನೋಂದಣಾಧಿಕಾರಿ ಧನುಷ್, ಚುನಾವಣಾ ಸಿಬ್ಬಂದಿಗಳಾದ ಕಂದಾಯಾಧಿಕಾರಿಗಳು, ಸಹಾಯಕ ಕಂದಾಯಾಧಿಕಾರಿಗಳು, ಬಿ ಎಲ್ ಓ ಸೂಪರ್ವೆÊಸರ್ಸ್ ಗಳು ಹಾಗೂ ಸಂಬAಧಪಟ್ಟ ಬಿ ಎಲ್ ಓ ಗಳು ಉಪಸ್ಥಿತರಿದ್ದು, ಪರಿಶೀಲನಾ ಕಾರ್ಯಕ್ಕೆ ಅಗತ್ಯ ಮಾಹಿತಿ ಹಾಗೂ ದಾಖಲೆಗಳನ್ನು ಒದಗಿಸಿದರು