Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ನಾಡ ಹಬ್ಬ ದಸರಾದಲ್ಲಿ ಕಂಬಳ ಕ್ರೀಡೆ ಆಯೋಜನೆ ಕೈಬಿಡಲು ಆಗ್ರಹಿಸಿ ಪ್ರತಿಭಟನೆ

ಮೈಸೂರು; ಈ ಸಾಲಿನ ವಿಶ್ವ ಪ್ರಸಿದ್ಧ ನಾಡ ಹಬ್ಬ ಮೈಸೂರು ದಸರಾದಲ್ಲಿ ಕಂಬಳ ಕ್ರೀಡೆ ಆಯೋಜನೆಯನ್ನು ಕೈ ಬಿಡಬೇಕೆಂದು ಆಗ್ರಹಿಸಿ ಗುರುವಾರ ನಗರದಲ್ಲಿ  ಕರ್ನಾಟಕ ಸೇನಾ ಪಡೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ನಗರದ  ಹಳೆ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಕೆಲಕಾಲ ನಾನಾ ಘೋಷಣೆಗಳನ್ನು ಕೂಗಿದರು.

 ವಿಶ್ವವಿಖ್ಯಾತ ಮೈಸೂರು ದಸರಾ ಸಂದರ್ಭದಲ್ಲಿ ಕಂಬಳ ಕ್ರೀಡೆಯನ್ನು ಮೈಸೂರಿಗೆ, ನಮ್ಮ ಭಾವನೆಗಳಿಗೆ ವಿರುದ್ಧವಾಗಿ ಆಯೋಜನೆ ಮಾಡಲು ಹೊರಟಿರುವುದು ಅತ್ಯಂತ ಖಂಡನೀಯ ಎಂದು ಕಿಡಿಕಾರಿದರು.

ಕಂಬಳ ಕ್ರೀಡೆಗೆ ನಮ್ಮ ಯಾವುದೇ ವಿರೋಧವಿಲ್ಲ. ಕಂಬಳ ತುಳುನಾಡಿನ ಕ್ರೀಡೆಗೆ, ಅಲ್ಲಿನ ಪ್ರಾದೇಶಿಕ ವೈಶಿಷ್ಟಗಳಿವೆ. ಅದು ದಕ್ಷಿಣ ಕನ್ನಡಕ್ಕೆ ಸರಿ. ಮೈಸೂರಿಗೆ ದಸರಾ ಸರಿ. ಆದ್ದರಿಂದ ದಸರಾದಲ್ಲಿ ಮೈಸೂರಿನ ಕ್ರೀಡೆ, ಪರಂಪರೆ ಸಂಸ್ಕöÈತಿಗಳಿಗೆ ಸರ್ಕಾರ ಆದ್ಯತೆ ನೀಡಬೇಕು. ಆದರೆ ಮೈಸೂರು ದಸರಾ ಸಮಯದಲ್ಲಿ ಇದನ್ನು ನಡೆಸಿದರೆ, ಮೈಸೂರಿನ ದಸರಾದ ಹಿರಿಮೆ, ವೈಭವ, ಜಂಬೂಸವಾರಿ, ಸಾಂಸ್ಕöÈತಿಕ ಹಾಗೂ ಪಾರಂಪರಿಕಗಳು ಹಿನ್ನೆಲೆಗೆ ಸರಿಯಬಹುದು. ಕಂಬಳ ಮೈಸೂರಿನ ಅಸ್ಮಿತೆ ಅಲ್ಲ, ಈ ಕ್ರೀಡೆಯನ್ನು ದಕ್ಷಿಣ ಕನ್ನಡದಲ್ಲಿ ತೋರಿಸಿ, ಆಯೋಜಿಸಿ ಎಂದು ಒತ್ತಾಯಿಸಿದರು.  

ಈಗ ರಾಜ್ಯದಲ್ಲಿ ಮಳೆಯ ಅಭಾವವಿದ್ದು, ಬರಗಾಲವನ್ನು ಸರ್ಕಾರವೇ ಘೋಷಣೆ ಮಾಡಿದೆ. ರಾಜ್ಯದಲ್ಲಿ ನೀರಿಗೆ ತೊಂದರೆ ಇದೆ. ಕೃತಕವಾಗಿ ನೀರನ್ನು ಸೃಷ್ಟಿ ಮಾಡಿ, ಗದ್ದೆ ಸೃಷ್ಟಿ ಮಾಡಿ, ಅಲ್ಲಿ ಕಂಬಳ ಮಾಡುತ್ತೇವೆ ಎನ್ನುತ್ತಿರುವುದು ಅತ್ಯಂತ ಅವೈಜ್ಞಾನಿಕವಾಗಿದೆ.

ಸುಮಾರು 8 ಕೋಟಿ ವೆಚ್ಚದಲ್ಲಿ ಕಂಬಳ ಆಯೋಜನೆ ಮಾಡುವ ಬದಲು, ರಾಜ್ಯ ಸರ್ಕಾರ, ಮೈಸೂರಿನ ಉಸ್ತುವಾರಿ ಮಂತ್ರಿಗಳು ಮೈಸೂರಿನ ಮೂಲಭೂತ ಸೌಕರ್ಯಗಳಿಗೆ ಆದ್ಯತೆ ನೀಡಿ. ಎಲ್ಲಕ್ಕಿಂತ ಮಿಗಿಲಾಗಿ ಮೈಸೂರಿನಾದ್ಯಂತ ಎಲ್ಲಾ ರಸ್ತೆಗಳಲ್ಲೂ, ಮೋರಿ-ಗುಂಡಿಗಳನ್ನು ತೆಗೆದು, ರಸ್ತೆಗಳು ಚರಂಡಿ ಗುಂಡಿಗಳಾಗಿವೆ. ಈ 8 ಕೋಟಿ ಹಣವನ್ನು ಈ ಕೂಡಲೇ ಮೈಸೂರಿನ ರಸ್ತೆಗಳನ್ನು ಸರಿ ಮಾಡಲು ಗುಂಡಿಗಳನ್ನು ಮುಚ್ಚಲು ಬಳಸಿ, ಮೈಸೂರಿನ ದಸರಾ ಗೆ ಆಗಮಿಸುವ ಪ್ರವಾಸಿಗರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ, ಜೊತೆಗೆ ದಸರಾ ಮಹೋತ್ಸವದಲ್ಲಿ ಭಾಗವಹಿಸುವ ಕಲಾವಿದರು ಗಳಿಗೆ ಸರಿಯಾದ ಸಮಯದಲ್ಲಿ, ವಿಳಂಬ ಮಾಡದೆ ಅವರಿಗೆ ಗೌರವ ಧನವನ್ನು ನೀಡಿ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಮೈಸೂರು ವಿಶ್ವವಿಖ್ಯಾತ, ದಸರಾ ಜಂಬೂ ಸವಾರಿಯನ್ನು ವೀಕ್ಷಿಸಲು ದೇಶ ವಿದೇಶಗಳಿಂದ ಮೈಸೂರಿಗೆ ಲಕ್ಷಾಂತರ ಜನರು ಬರುತ್ತಾರೆಯೇ ಹೊರತು ಕಂಬಳ ವೀಕ್ಷಿಸಲು ಅಲ್ಲ. ಸರ್ಕಾರ ಆಯಾ ಸ್ಥಳೀಯ ಜನರ ಭಾವನೆಗಳಿಗೆ ಧಕ್ಕೆ ತರುವಂತಹ ಕೆಲಸ ಮಾಡಬಾರದು, ಒತ್ತಡ ಹೇರಬಾರದು. ಈ ಕೂಡಲೇ ಕಂಬಳ ಆಯೋಜನೆಯನ್ನು ರಾಜ್ಯ ಸರ್ಕಾರ ಕೈ ಬಿಡಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸೇನಾಪಡೆಯ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ , ಮುಖಂಡರುಗಳಾದ ಪ್ರಜೀಶ್, ಗೋಲ್ಡನ್ ಸುರೇಶ್, ಪ್ರಭುಶಂಕರ್, ಸಿಂದುವಳ್ಳಿ ಶಿವಕುಮಾರ್, ಕೃಷ್ಣಪ್ಪ, ಗಿರೀಶ್ ಹೆಚ್, ನೇಹಾ, ಶಿವಲಿಂಗಯ್ಯ, ಮಂಜುಳಾ, ಮಧುವನ ಚಂದ್ರು, ಸೋಮೇಗೌಡ, ಡಾ . ಶಾಂತರಾಜೇಅರಸ್, ಡಾ . ನಾಗೇಂದ್ರ, ಸುಜಾತಾ, ಬೋಗಾದಿ ಸಿದ್ದೇಗೌಡ , ಅಂಬಳೆ ಶಿವಣ್ಣ, ಶೋಭಾ ರಾಣಿ ಗೌಡ, ಪ್ರದೀಪ್, ದರ್ಶನ್ ಗೌಡ, ಕೃಷ್ಣೇಗೌಡ, ಶ್ರೀನಿವಾಸ, ಹೊನ್ನೇ ಗೌಡ , ಕುಮಾರ್ ಗೌಡ, ವಿಜಯೇಂದ್ರ,  ರಾಧಾಕೃಷ್ಣ, ನಾರಾಯಣ ಗೌಡ, ನಂದಕುಮಾರ್, ವಿಕ್ರಂ, ಪರಿಸರ ಚಂದ್ರು, ಗಣೇಶ್ ಪ್ರಸಾದ್, ಹನುಮಂತೇ ಗೌಡ, ರಘು ಆಚಾರ್, ಬಸವರಾಜು, ಚಂದ್ರಶೇಖರ್, ನಾಗೇಶ್, ರವೀಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.