Skip to main content

3Kaala News

ಸುಭಾಷಿತ 

ಯಾರಿಗಾದರೂ ಅವರು ಕೃತಜ್ಞತೆಯಿಂದ ಸ್ವೀಕರಿಸಲು ಸಾಧ್ಯವಾಗುವಷ್ಟು ಮಾತ್ರ ಸಹಾಯ ಮಾಡಿ. ನೀವು ಅವನಿಗೆ ಹೆಚ್ಚು ಸಹಾಯ ಮಾಡಿದರೆ, ಅವನು ಅದನ್ನು ತನ್ನ ಹಕ್ಕು ಎಂದು ಪರಿಗಣಿಸಲು ಪ್ರಾರಂಭಿಸುತ್ತಾನೆ. ಮತ್ತು ಅವನು ಅದನ್ನು ಪಡೆಯದಿದ್ದಾಗ, ಅದೇ ವ್ಯಕ್ತಿ ನಿಮ್ಮ ಶತ್ರುವಾಗುತ್ತಾನೆ.

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಮಾಜಿ ಸೈನಿಕರುಗಳ ಸತ್ಯ ಮೇವ ಜಯತೇ ಟೀಮ್ ವತಿಯಿಂದ 27ನೇ ಕಾರ್ಗಿಲ್ ವಿಜಯೋತ್ಸವ ಆಚರಣೆ

ಮೈಸೂರು: ನಗರದ ನಾರಾಯಣ ಶಾಸ್ತಿç ರಸ್ತೆಯಲ್ಲಿರುವ ಸ್ವಾತಂತ್ರ ಹೋರಾಟಗಾರರ ಉದ್ಯಾನವನ ಸುಬ್ಬರಾಯನಕೆರೆಯಲ್ಲಿ ಸತ್ಯ ಮೇವ ಜಯತೇ ತಂಡದಿAದ 27ನೇ ಕಾರ್ಗಿಲ್ ವಿಜಯೋತ್ಸವ ಆಚರಣೆ ಮಾಡಲಾಯಿತು.
ದೇಶದ ಗಡಿಯನ್ನು ಕಾಪಾಡಲು ತಮ್ಮ ಪ್ರಾಣವನ್ನು ಅರ್ಪಿಸಿದ ಅಮರ ವೀರಯೋಧರಾದ ಕ್ಯಾಪ್ಟನ್ ವಿಕ್ರಂ ಭತ್ರ,ಕ್ಯಾಪ್ಟನ್ ಸೌರಭ ಕಾಲಿಯ, ಲೆಫ್ಟಿನೆಂಟ್ ಮನೋಜ್ ಕುಮಾರ್ ಪಾಂಡೆ ರವರ ಭಾವಚಿತ್ರಕ್ಕೆ ಗಣ್ಯರಿಂದ ತುಪ್ಪದ ದೀಪವನ್ನು ಹಚ್ಚಿ, ಭಾರತ್ ಮಾತಾ ಕೀ ಜೈ, ಅಮರ ವೀರ ಯೋಧರುಗಳಿಗೆ ಜೈ ಎಂಬ ಜೈಕಾರಗಳನ್ನು ಕೂಗುತ್ತಾ ಪುಷ್ಪಾರ್ಚನೆ ಮಾಡಲಾಯಿತು.
ಈ ವೇಳೆ ಮಾತನಾಡಿದ ಮಾಜಿ ಸೈನಿಕ ಮಹೇಶ್ ವಿ, ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಅಮರ ಯೋಧರುಗಳ ತ್ಯಾಗ, ಶೌರ್ಯ ಮತ್ತು ದೇಶಭಕ್ತಿಯ ನಮ್ಮೆಲ್ಲರಿಗೂ ಸದಾ ಪ್ರೇರಣೆಯಾಗಿದೆ ಎಂದರು. ವೀರ ಯೋಧರನ್ನು ಸ್ಮರಿಸುವುದು ನಮ್ಮ ಕರ್ತವ್ಯ, ಅವರ ಆದರ್ಶಗಳನ್ನು ಪಾಲಿಸುವುದು ನಮ್ಮ ಜವಾಬ್ದಾರಿ. ಸರ್ಕಾರ ಮುಂದಿನ ದಿನಗಳಲ್ಲಿ ಆದ್ರೂ ಕಾರ್ಗಿಲ್ ಯುದ್ಧದ ಬಗ್ಗೆ ಪಠ್ಯಪುಸ್ತಕಗಳಲ್ಲಿ ಪ್ರಕಟಿಸಬೇಕು. ಆಗ ಮಾತ್ರ ನಮ್ಮ ಮುಂದಿನ ಪೀಳಿಗೆಗೆ ಗೊತ್ತಾಗುತೆಂದು ಹೇಳಿದ್ದರು.
ಮೈಸೂರು ನಗರ ಪಾಲಿಕೆ ಮಾಜಿ ಸದಸ್ಯ ಪ್ರಶಾಂತ್ ಗೌಡ ಮಾತನಾಡಿ, ಕಾರ್ಗಿಲ್ ವಿಜಯ ದಿನವನ್ನು ನಾವುಗಳು ಮುಂದಿನ ವರ್ಷ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಇಡೀ ಮೈಸೂರಿನಲ್ಲೇ ಮಾದರಿಯಾಗುವಂತೆ ಮಾಡುತ್ತೇವೆಂದು ತಿಳಿಸಿದ್ದರು.
ನಗರ ಪಾಲಿಕೆ ಮಾಜಿ ಸದಸ್ಯರಾದ ಪ್ರಮೀಳಾ ಭರತ್ ಮಾತನಾಡಿ, ದೇಶಕ್ಕಾಗಿ ಮಡಿದ ಅಮರ ಯೋಧರುಗಳನ್ನು ನಾವುಗಳು ಯಾವಾಗಲೂ ಮರೆಯಬಾರದು ಮತ್ತು ಅವರ ಕುಟುಂಬದವರು ಎಷ್ಟೊಂದು ದುಃಖ ಅನುಭವಿಸುತ್ತಿರುತ್ತಾರೆ, ಇಂತಹ ಕಾರ್ಯಕ್ರಮಗಳನ್ನು ಮಾಡಿ ಅವರ ಆತ್ಮಕ್ಕೆ ಶಾಂತಿ ಕೋರಬೇಕೆಂದು ತಿಳಿಸಿದ್ದರು.
ಅಂತಿಮವಾಗಿ ಕಾರ್ಗಿಲ್ ವಿಜಯದ ಸಂಕೇತವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ನೂರಾರು ದೇಶಾಭಿಮಾನಿಗಳಿಗೆ ಸತ್ಯಮೇವ ಜಯತೆ ಟೀಮ್ ನಿಂದ ಸಿಹಿ ಹಂಚಲಾಯಿತು.
ಕಾರ್ಯಕ್ರಮದಲ;ಲಿ ಯುವ ಮುಖಂಡರುಗಳಾದ ಜಿ ರಾಘವೇಂದ್ರ,ಸತ್ಯ ಮೇವ ಜಯತೇ ಟೀಮ್ ನ ಸದಸ್ಯರಾದ ಶ್ರೀನಿವಾಸ್, ಪುರುಷೋತ್ತಮ,ಅನಂತ್ ಕುಮಾರ್,ಮಹದೇವ್, ಪ್ರಸನ್ನ, ಮಂದಣ್ಣ, ನಾಗೇಶ್, ರಾಮಣ್ಣ, ನಿತಿನ್, ಬಾಲಕೃಷ್ಣ,ಅನಿಲ್ S, ಅನಿಲ್ ಂಉ, ಮಹೇಶ್ ಊಐ, ಕಾರಿಯಪ್ಪ, ಜಯಕುಮಾರ್, ಪದ್ಮನಾಭ, ಹಾಲಿ ಸೈನಿಕರಾದ ಹರೀಶ್ ಮತ್ತಿತರ 30ಕ್ಕಿಂತಲೂ ಹೆಚ್ಚು ಮ್ಯಾಜಿಸೈನಿಕರುಗಳು ಅವರ ಕುಟುಂಬ ವರ್ಗದವರು, ಮಕ್ಕಳು, ನೂರಾರು ಸಾರ್ವಜನಿಕರೂ ಭಾಗವಹಿಸಿದ್ದರು.