Skip to main content

3Kaala News

ಸುಭಾಷಿತ 

ಯಾರಿಗಾದರೂ ಅವರು ಕೃತಜ್ಞತೆಯಿಂದ ಸ್ವೀಕರಿಸಲು ಸಾಧ್ಯವಾಗುವಷ್ಟು ಮಾತ್ರ ಸಹಾಯ ಮಾಡಿ. ನೀವು ಅವನಿಗೆ ಹೆಚ್ಚು ಸಹಾಯ ಮಾಡಿದರೆ, ಅವನು ಅದನ್ನು ತನ್ನ ಹಕ್ಕು ಎಂದು ಪರಿಗಣಿಸಲು ಪ್ರಾರಂಭಿಸುತ್ತಾನೆ. ಮತ್ತು ಅವನು ಅದನ್ನು ಪಡೆಯದಿದ್ದಾಗ, ಅದೇ ವ್ಯಕ್ತಿ ನಿಮ್ಮ ಶತ್ರುವಾಗುತ್ತಾನೆ.

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಹೊಸಗನ್ನಡದ ಸಿರಿತನಕ್ಕೆ ಹಳಗನ್ನಡವೇ ಬೇರು:ನಾಡೋಜ ಡಾ. ಹಂಪ ನಾಗರಾಜಯ್ಯ


ಮೈಸೂರು: ಹೊಸಗನ್ನಡದ ಹೂವುಗಳು ಕಂಗೊಳಿಸುತ್ತಿದ್ದರೆ, ಅದಕ್ಕೆ ಹಳಗನ್ನಡವೇ ಬೇರು ಕಾರಣ. ಹಳೆಗನ್ನಡ ಕಾವ್ಯಗಳು ಕಠಿಣವಾದವುಗಳಲ್ಲ, ಅವುಗಳನ್ನು ಓದುತ್ತಾ ಹೋದಂತೆ ವ್ಯಾಖ್ಯಾನಗಳು ಸುಲಭವಾಗಿ ಅರ್ಥವಾಗುತ್ತವೆ ಎಂದು ಹಿರಿಯ ವಿದ್ವಾಂಸ ನಾಡೋಜ ಡಾ. ಹಂಪ ನಾಗರಾಜಯ್ಯ ಹೇಳಿದರು.
ಮಂಗಳವಾರ ನಗರದ ಮಾನಸಗಂಗೋತ್ರಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬಿ.ಎಂ.ಶ್ರೀ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕöÈತಿ ಇಲಾಖೆ ಮತ್ತು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಾನಸಗಂಗೋತ್ರಿ, ಮೈಸೂರು ವಿಶ್ವವಿದ್ಯಾನಿಲಯ ಇವರ ಸಹಯೋಗದಲ್ಲಿ ಪದವಿ ಕಾಲೇಜುಗಳ ಕನ್ನಡ ಅಧ್ಯಾಪಕರಿಗೆ ಹಾಗೂ ಸಂಶೋಧನಾ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಹಳಗನ್ನಡ ಓದು ಮತ್ತು ವ್ಯಾಖ್ಯಾನ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಧ್ಯಾಪಕರು ವಿದ್ಯಾರ್ಥಿಗಳಿಗೆ ಪದ್ಯಗಳನ್ನು ಬೋಧಿಸುವಾಗ ಕವಿ ಬಳಸಿರುವ ಛಂದಸ್ಸು , ಚಂಪಕಮಾಲೆ, ಶಾರ್ದೂಲವಿಕ್ರೀಡಿತ, ಮತ್ತೇಭವಿಕ್ರೀಡಿತ, ಉತ್ಪಲಮಾಲೆ ಮತ್ತು ಭಾಷೆಯ ತಿಳಿವಳಿಕೆಯನ್ನು ಇಟ್ಟುಕೊಂಡು ಬೋಧಿಸಬೇಕು ಎಂದು ಸಲಹೆ ನೀಡಿದರು. ಇತ್ತೀಚಿನ ದಿನಗಳಲ್ಲಿ ಹಳಗನ್ನಡದ ಓದು, ಅಭ್ಯಾಸ ಮತ್ತು ಬೋಧನೆ ಕಡಿಮೆಯಾಗುತ್ತಿರುವುದು ಕಂಡುಬರುತ್ತಿದ್ದು, ಅದನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಾಗಾರಗಳು ಅತ್ಯಂತ ಅಗತ್ಯವಾಗಿವೆ ಎಂದರು.
ಮಾನವನ ಜೀವನದಲ್ಲಿ ವೈರಾಗ್ಯ ಹಾಗೂ ಮೋಕ್ಷದ ಹಾದಿ ತಲುಪುವ ಮುನ್ನ ಭೋಗ ಜೀವನ’ದ ಅನುಭವದ ಮಹತ್ವವನ್ನು ಕವಿ ಪಂಪ ತನ್ನ ಆದಿಪುರಾಣದಲ್ಲಿ ವರ್ಣಿಸಿರುವ ರೀತಿಯನ್ನು ತಿಳಿಸಿದರು . ಸಂಸ್ಕöÈತದ ಆದಿಪುರಾಣವನ್ನು ಕನ್ನಡಕ್ಕೆ ತಂದಾಗ ಪಂಪ ಅದನ್ನು ಅನುವಾದ ಮಾಡದೆ, ಕನ್ನಡದ ಜಾಯಮಾನಕ್ಕೆ ಮತ್ತು ದೇಶಿಯ ಬದುಕಿಗೆ ಅನುಗುಣವಾಗಿ ಮರುಸೃಷ್ಟಿ ಮಾಡಿದ್ದಾನೆ. ಹೀಗಾಗಿ ಪಂಪನ ಆದಿಪುರಾಮಣವು ವಿಕ್ರಮಾರ್ಜುನ ವಿಜಯಕ್ಕಿಂತ ಯಾವುದೇ ರೀತಿಯಲ್ಲೂ ಕಡಿಮೆಯಿಲ್ಲದ ಅಪೂರ್ವ ಕಾವ್ಯವಾಗಿದೆ ಎಂದು ತಿಳಿಸಿದರು.
ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎನ್.ಕೆ. ಲೋಕನಾಥ್ ಮಾತನಾಡಿ ,ಇಂದಿನ ದಿನಗಳಲ್ಲಿ ಅಧ್ಯಾಪಕರಾಗಿ ಪರೀಕ್ಷೆಗಾಗಿ ಪಾಠ ಮಾಡುತ್ತಿದ್ದಾರೆ, ವಿದ್ಯಾರ್ಥಿಗಳು ಪರೀಕ್ಷೆಗಾಗಿ ಓದುತ್ತಿದ್ದಾರೆ. ಪರಿಣಾಮವಾಗಿ ಭಾಷೆ, ವಿಷಯ ಹಾಗೂ ಸಾಹಿತ್ಯದ ಮೇಲಿರುವ ನೈಜ ಆಸಕ್ತಿ ಕಡಿಮೆಯಾಗುತ್ತಿರುವುದು ಬೇಸರದ ಸಂಗತಿ. ಇದಕ್ಕೆ ಕಾರಣರಾರು ಎಂಬುದನ್ನು ನಾವೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ತಿಳಿಸಿದರು.
ಕರ್ನಾಟಕದಲ್ಲಿ ಕನ್ನಡ ಬೆಳೆದಿದೆ ಎಂದರೆ ಅದಕ್ಕೆ ಉಪನ್ಯಾಸಕರು ಮತ್ತು ಶಿಕ್ಷಕರೇ ಪ್ರಮುಖ ಕಾರಣ. ಯಾರು ತರಗತಿಯಲ್ಲಿ ಆಸಕ್ತಿದಾಯಕವಾಗಿ ಬೋಧನೆ ಮಾಡುತ್ತಾರೋ, ವಿದ್ಯಾರ್ಥಿಗಳು ಸಹಜವಾಗಿಯೇ ಭಾಷೆಯತ್ತ ಆಕರ್ಷಿತರಾಗುತ್ತಾರೆ ಎಂದರು. ಡಿಜಿಟಲೀಕರಣ ಹಾಗೂ ತಾಳೆಗರಿಗಳ ಸಂರಕ್ಷಣೆ ನಡೆಯುತ್ತಿದ್ದರೂ, ಅವುಗಳನ್ನು ಓದಿ ಅರ್ಥೆÊಸಿಕೊಳ್ಳುವ ನಿಪುಣರ ಹಾಗೂ ಸಂಶೋಧಕರ ಕೊರತೆ ಇದೆ. ಮುಂದಿನ ಪೀಳಿಗೆಗೆ ಹಳಗನ್ನಡದ ಅರಿವು ಮೂಡಿಸದಿದ್ದರೆ ಸಾಹಿತ್ಯಕ್ಕೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ಹೇಳಿದರು.
ಎಲ್ಲ ವಿಚಾರಗಳನ್ನು ಸುದೀರ್ಘವಾಗಿ ಹೇಳುವ ಬದಲು ಒಂದೇ ವಾಕ್ಯದಲ್ಲಿ ಸಂಕ್ಷಿಪ್ತವಾಗಿ ಹಾಗೂ ಪರಿಣಾಮಕಾರಿಯಾಗಿ ತಿಳಿಸುವುದೇ ಹಳಗನ್ನಡದ ಶಕ್ತಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ. ಎಂ. ನಂಜಯ್ಯ ಹೊಂಗನೂರು,ಕುವೆAಪು ಕನ್ನಡ ಅಧ್ಯಯನ ಸಂಸ್ಥೆ ಪ್ರಾಧ್ಯಾಪಕರಾದ ಪ್ರೊ. ಎನ್.ಕೆ. ಲೋಲಾಕ್ಷಿ,ಪ್ರೊ. ಎಸ್.ಡಿ. ಶಶಿಕಲಾ,ಕನ್ನಡ ಮತ್ತು ಸಂಸ್ಕöÈತಿ ಇಲಾಖೆಯ ಜಂಟಿ ನಿರ್ದೇಶಕಿ ನಿರ್ಮಲಾ ಮಠಪತಿ, ಕನ್ನಡ ಮತ್ತು ಸಂಸ್ಕöÈತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಎಂ .ಡಿ. ಸುದರ್ಶನ್, ಪದವಿ ಕಾಲೇಜುಗಳ ಕನ್ನಡ ಅಧ್ಯಾಪಕರು ಹಾಗೂ ಸಂಶೋಧನ ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು.