
ಮೈಸೂರು;
ಎಚ್.ವಿ.ರಾಜೀವ್ ಸ್ನೇಹ ಬಳಗದ ವತಿಯಿಂದ ಮನೆಗೆರಡು ಗಿಡ ಅಭಿಯಾನ ಆರಂಭಿಸಿದ್ದು, ಗುರು ಪೂರ್ಣಿಮೆ ಅಂಗವಾಗಿ ಬುಧವಾರ ಸುಮಾರು 3000 ಗಿಡಗಳನ್ನು ವಿತರಣೆ ಮಾಡಲಾಯಿತು.
ನಗರದ ಜೆ.ಪಿ.ನಗರದಲ್ಲಿರುವ ಪುಟ್ಟರಾಜ ಗವಾಯಿ ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಗಿಡ ವಿತರಣೆ ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ, ಕೆಪಿಸಿಸಿ ಸದಸ್ಯ ಎಚ್.ವಿ.ರಾಜೀವ್ ಅವರು ಸುಮಾರು 3000 ಗಿಡಗಳನ್ನು ವಿತರಣೆ ಮಾಡಿದರು.
ಬಳಿಕ ಮಾತನಾಡಿದ ಅವರು, ?ಹಸಿರು ಮೈಸೂರು- ಲಕ್ಷ ವೃಕ್ಷ ಆಂದೋಲನ? ಶೀರ್ಷಿಕೆಯಡಿ 2019ರಲ್ಲಿ ಅಭಿಯಾನ ಪ್ರಾರಂಭಿಸಲಾಯಿತು. ಇದರ ಮೂಲಕ ರಸ್ತೆ ವಿಭಜಕಗಳು, ಉದ್ಯಾನಗಳು ಹಾಗೂ ಬಡಾವಣೆ ರಸ್ತೆಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಇದುವರೆಗೆ ನಗರದಲ್ಲಿ ಬರೋಬ್ಬರಿ 1.20 ಲಕ್ಷ ಗಿಡಗಳನ್ನು ನೆಟ್ಟು ಪೋಷಣೆ ಮಾಡಲಾಗಿದೆ. ಇದೀಗ ಮನೆಯಂಗಳದಲ್ಲೂ ಗಿಡ ಬೆಳೆಸುವ ಮಹತ್ವಾಕಾಂಕ್ಷೆಯೊAದಿಗೆ ಪ್ರತಿ ಮನೆಗೆ ಎರಡು ಗಿಡಗಳನ್ನು ನೀಡುವ ವಿಶಿಷ್ಟ ಅಭಿಯಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಗುರು ಪೂರ್ಣಿಮೆಯನ್ನು ಅರ್ಥಪೂರ್ಣವಾಗಿ ಆಚರಿಸಬೇಕೆಂಬ ಸದುದ್ದೇಶದಿಂದ ಸಾಂಕೇತಿಕವಾಗಿ ಜೆ.ಪಿ.ನಗರದ ನಿವಾಸಿಗಳಿಗೆ 3000 ಗಿಡಗಳನ್ನು ವಿತರಣೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಪ್ರತಿ ವಾರ್ಡ್ ಹಂತದಲ್ಲೂ ಪ್ರತಿ ಮನೆಗೆ ಎರಡು ಗಿಡಗಳನ್ನು ವಿತರಣೆ ಮಾಡಲಾಗುವುದು. ಮನೆಯಂಗಳ, ಹಿತ್ತಲು, ಕಾಂಪೌAಡ್ ಒಳಭಾಗದಲ್ಲಿ ಬೆಳೆಸಬಹುದಾದ ತುಳಸಿ, ದಾಸವಾಳ, ದಾಳಿಂಬೆ, ಗುಲಾಬಿ, ಸೀಬೆ, ವೀಳ್ಯದೆಲೆ, ಕರಿಬೇವು ಮುಂತಾದ ಸಣ್ಣ ಸಸಿಗಳನ್ನು ಮಾತ್ರ ನೀಡುತ್ತಿದ್ದು, ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ ದೊರಕಿರುವುದು ಖುಷಿ ನೀಡಿದೆ ಎಂದರು.
ಜೆ.ಪಿ.ನಗರದ ಅಭ್ಯುದಯ ಮಹಿಳಾ ಸಮಾಜದ ಸಂಸ್ಥಾಪಕ ಅಧ್ಯಕ್ಷೆ ಡಾ.ಸುಶೀಲಾ ನಾಗರಾಜ್ ಮಾತನಾಡಿ, ಪ್ರತಿ ಮನೆಗೂ ಪರಿಸರ ಪ್ರಜ್ಞೆ ಮೂಡಿಸುವ ನಿಟ್ಟಿನಲ್ಲಿ ಎಚ್.ವಿ.ರಾಜೀವ್ ಸ್ನೇಹ ಬಳಗ ಕೈಗೊಂಡಿರುವ ಅಭಿಯಾನ ಮಹತ್ವದ ಪಾತ್ರ ವಹಿಸಲಿದೆ ಎಂದು ಅಭಿಪ್ರಾಯಪಟ್ಟರು.
ಅರಿವಿನ ಮಹಿಳಾ ಬಳಗ, ಲಯನ್ಸ್ ಕ್ಲಬ್ ಅಫ್ ಜೆ.ಪಿ.ನಗರ, ಒಕ್ಕಲಿಗರ ಸಂಘ, ಯೋಗ ಟ್ರಸ್ಟ್, ಬ್ರಾಹ್ಮಣರ ಸಂಘ, ವಿವಿಧ ಕ್ರೀಡಾ ತರಬೇತುದಾರರು ಸೇರಿದಂತೆ ಹಲವು ಸಂಘ-ಸAಸ್ಥೆಗಳ ಪ್ರಮುಖರು ಗಿಡಗಳನ್ನು ಸ್ವೀಕರಿಸಿದರು.
ಮಾಜಿ ಮೇಯರ್ ಬಿ.ಎಲ್.ಭೈರಪ್ಪ, ಪದಾಧಿಕಾರಿಗಳಾದ ನೀಲಾಂಬಿಕಾ, ಪುಟ್ಟರಾಜಪ್ಪ, ದೀಪಕ್, ಪ್ರೊ.ಕೃಷ್ಣ, ಹುಡ್ಕೋ ಕುಮಾರ್ ಮುಂತಾದವರಿದ್ದರು