Skip to main content

3Kaala News

ಸುಭಾಷಿತ 

ಯಾರಿಗಾದರೂ ಅವರು ಕೃತಜ್ಞತೆಯಿಂದ ಸ್ವೀಕರಿಸಲು ಸಾಧ್ಯವಾಗುವಷ್ಟು ಮಾತ್ರ ಸಹಾಯ ಮಾಡಿ. ನೀವು ಅವನಿಗೆ ಹೆಚ್ಚು ಸಹಾಯ ಮಾಡಿದರೆ, ಅವನು ಅದನ್ನು ತನ್ನ ಹಕ್ಕು ಎಂದು ಪರಿಗಣಿಸಲು ಪ್ರಾರಂಭಿಸುತ್ತಾನೆ. ಮತ್ತು ಅವನು ಅದನ್ನು ಪಡೆಯದಿದ್ದಾಗ, ಅದೇ ವ್ಯಕ್ತಿ ನಿಮ್ಮ ಶತ್ರುವಾಗುತ್ತಾನೆ.

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಕಬಿನಿ ಅಚ್ಚುಕಟ್ಟು  ನಾಲೆಗಳಿಗೆ ನೀರು  ಹರಿಸುವಂತೆ  ಒತ್ತಾಯಿಸಿ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ರಸ್ತೆ ತಡೆ ಚಳುವಳಿ 

ಹೆಚ್.ಡಿ.ಕೋಟೆ.  ಕಾವೇರಿ ಉಳಿಸಿ ಕಬಿನಿ ಅಚ್ಚುಕಟ್ಟು  ನಾಲೆಗಳಿಗೆ ನೀರು  ಹರಿಸುವಂತೆ  ಒತ್ತಾಯಿಸಿ ರಾಜ್ಯ ರೈತ ಸಂಘದ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ  ತಾಲೂಕಿನ ಹ್ಯಾಂಡ್ ಪೋಸ್ಟ್  ಸರ್ಕಲ್ ನಲ್ಲಿ  ರಸ್ತೆ ತಡೆ ಚಳುವಳಿ ನಡೆಸಲಾಯಿತು. 

ಮಳೆಯಿಲ್ಲದೆ  ಕಬಿನಿ  ಅಚ್ಚುಕಟ್ಟು ರೈತರು ಸಂಕಷ್ಟದಲ್ಲಿದ್ದಾರೆ.  ರೈತ ಸಂಕುಲಕ್ಕೆ ಜೀವನಾಡಿಯಾಗಿರುವ ದನ ಕರುಗಳಿಗೆ ಕುಡಿಯುವ ನೀರಿಗಾಗಿ ಅತೀವ ತೊಂದರೆಯಾಗಿದ್ದು ಕೆರೆಕಟ್ಟೆಗಳು ಒಣಗಿವೆ.   ಕೂಡಲೇ ಕಬಿನಿ ಅಚ್ಚುಕಟ್ಟು  ನಾಲೆಗಳಿಗೆ ನೀರು ಹರಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಲಾಯಿತು. 

ಕುರುಬೂರು ಶಾಂತಕುಮಾರ್ ಮಾತನಾಡಿ, ಕಾವೇರಿ ನೀರಿನ ಸಮಸ್ಯೆ ಬಗ್ಗೆ ಚರ್ಚಿಸಲು  ರಾಜ್ಯ ಸರ್ಕಾರ ಕೇವಲ ಸರ್ವ ಪಕ್ಷದ ಮುಖಂಡರನ್ನು ಕರೆದು ರಾಜಕಾರಣ ಮಾಡುತ್ತಿದೆ.  ನೈಜ ಸಮಸ್ಯೆಯನ್ನು ಅರಿತಿರುವ ಕಾವೇರಿ ವ್ಯಾಪ್ತಿಯ ರೈತ ಮುಖಂಡರನ್ನು ನಿರ್ಲಕ್ಷಿಸುತ್ತಿದ್ದು ಇದು ಸರಿಯಾದ ಕ್ರಮವಲ್ಲ.  ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿರೋಧ ಪಕ್ಷದಲ್ಲಿದ್ದಾಗ ಪಾದಯಾತ್ರೆ ನಡೆಸಿ  ಮೇಕೆದಾಟು ಜಲಾಶಯ ನಿರ್ಮಾಣಕ್ಕೆ ಒತ್ತಾಯ ಮಾಡಿದ್ದರು. ಆದರೆ  ಇದೀಗ ಅವರೇ ಮುಖ್ಯಮಂತ್ರಿ ಯಾ ಗಿದ್ದು ಕೂಡಲೇ ಮೇಕೆದಾಟು ಜಲಾಶಯ ಯೋಜನೆ  ನಿರ್ಮಿಸಬೇಕು ಈ ಬಗ್ಗೆ  ಕೂಡಲೇ ಕ್ರಮ ಕೈಗೊಳ್ಳುವಂತೆ  ಒತ್ತಾಯಸಿದ್ದರು. 

ಪ್ರತಿಭಟನೆಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್, ಕಬಿನಿ  ರೈತಹಿತರಕ್ಷಣಾ ಸಮಿತಿ ಜಿಲ್ಲಾಧ್ಯಕ್ಷ  ಗೌರಿಶಂಕರ್, ಹೆಚ್.ಡಿ.ಕೋಟೆ ತಾಲೂಕು ಅಧ್ಯಕ್ಷ ರಾಜೇಶ್, ಕೋಟೆ ಸುನೀಲ್, ಕೆಂಡಗಣ್ಣಸ್ವಾಮಿ, ಸುರೇಶ್ ಶೆಟ್ಟಿ, ನರಸೀಪುರ ತಾಲೂಕು ಅಧ್ಯಕ್ಷ ಕೆ. ಜಿ.ಗುರುಸ್ವಾಮಿ,  ಕೆಂಡಗಣಪ್ಪ, ಉಮೇಶ್, ಅಂಬಳೆ ಮಂಜುನಾಥ್, ಸಿದ್ಧರಾಮ, ಬಸವರಾಜು, ರಾಮಮೂರ್ತಿ, ಗಂಗಾಧರ್, ರಂಗಸ್ವಾಮಿ, ಸಿದ್ದರಾಜು, ಮುರುಳಿ, ಅಜಿತ್, ಕುಮಾರ್, ಸ್ವಾಮಿ, ಸಿದ್ದನಾಯಕ, ಬಿಜು, ಮಹದೇವಪ್ಪ, ದಾಸಪ್ಪ, ನಾಗರಾಜು, ಕೃಷ್ಣ, ಜಯರಾಮ ಸೇರಿದಂತೆ ರೈತ ಸಂಘಟನೆಯ ನೂರಾರು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.