
ಮೈಸೂರು; ಮೈಸೂರು ಭಾರತದ ಪುರಾತನ ಸಾಂಸ್ಕೃತಿಕ ಕೇಂದ್ರವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಬಣ್ಣಿಸಿದರು.
ಶನಿವಾರ ಮೈಸೂರಿನ ನಾರಾಯಣಶಾಸ್ತಿç ರಸ್ತೆಯಲ್ಲಿ ರಾಮಕೃಷ್ಣ ಆಶ್ರಮದಿಂದ ಸುಮಾರು 45 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಿರುವ ವಿವೇಕ ಸ್ಮಾರಕವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡದಲ್ಲಿಯೇ ಮೊದಲಿಗೆ ಎಲ್ಲರಿಗೂ ನಮಸ್ಕಾರಗಳು ಎಂದು ಭಾಷಣ ಆರಂಭಿಸಿ, ನಾಡ ಶಕ್ತಿದೇವತೆಯಾದ ತಾಯಿ ಚಾಮುಂಡೇಶ್ವರಿಗೆ ನಮಿಸಿದರು. ಮೈಸ್ರರಿಗೆ ಬಂದಿರುವುದು ನನಗೆ ಸಂತೋಷವನ್ಮ್ನAಟು ಮಾಡಿದೆ. ಮೈಸೂರು ಭಾರತದ ಪುರಾತನ ವಿಶಿಷ್ಟವಾದ ಸಾಂಸ್ಕೃತಿಕ ಕೇಂದ್ರವಾಗಿದೆ. ಇಲ್ಲಿನ ಸಂಸ್ಕೃತಿ, ಪರಂಪರೆ, ದೇವಸ್ಥಾನಗಳು, ಅರಮನೆ, ವಿಶಿಷ್ಟವಾಗಿದ್ದು, ವಿಶ್ವವಿಖ್ಯಾತ ನಾಡ ಹಬ್ಬ ದಸರಾ ಇಡೀ ವಿಶ್ವದ ಗಮನವನ್ನು ಸೆಳೆಯುತ್ತಿದೆ. ತನ್ನ ಪುರಾತನ ಸಂಸ್ಕೃತಿ, ಪರಂಪರೆಯನ್ನು ಉಳಿಸಿಕೊಂಡು ಬರುತ್ತಿರುವ ಮೈಸೂರು ಸಾಂಸ್ಕೃತಿಕ ಚೈತನ್ಯ ಕೇಂದ್ರವಾಗಿದೆ. ಇಲ್ಲಿ ಸಂಗೀತ, ಸಾಹಿತ್ಯ, ಸಂಸ್ಕೃತಿ, ಪರಂಪರೆ ಎಲ್ಲರ ಕಣ, ಕಣದಲ್ಲಿಯೂ ಬೆರೆತುಹೋಗಿದೆ. ಮೈಸೂರು ಭಾರತದ ಪುರಾತನ ಸಾಂಸ್ಕೃತಿಕ ಕೇಂದ್ರವಾಗಿದೆ ಎಂದು ಬಣ್ಣಿಸಿದರು.
ಮೈಸೂರಿಗೆ ಸ್ವಾಮಿ ವಿವೇಕಾನಂದರು ಆಗಮಿಸಿ, ಇಲ್ಲಿ ಎರಡು ವಾರುಗಳ ಕಾಲ ತಂಗಿದ್ದರು. ಅವರಿಗೆ ಆಗ ಮೈಸೂರಿನ ಮಹಾರಾಜರು ಸಹಾಯ ಮಾಡಿದ್ದರು. ಇಲ್ಲಿಂದಲೇ ಸ್ವಾಮಿ ವಿವೇಕಾನಂದರು ಅಮೇರಿಕದ ಕಡೆ ಹೆಜ್ಜೆ ಹಾಕಿದ್ದರು. ಅಮೇರಿಕಾದಲ್ಲಿ ನಿಂತು ಮೈಸೂರು ತಮಗೆ ಸಹಾಯ ಮಾಡಿದ್ದನ್ನು ಸ್ಮರಿಸಿದ್ದರು. ಸ್ವಾಮಿ ವಿವೇಕಾನಂದರಿಗೆ ಮೈಸೂರು ಜೀವನದ ಒಂದು ಭಾಗವಾಗಿತ್ತು ಎಂದು ಹೇಳಿದರು.
ರಾಷ್ಟçಕವಿ ಕುವೆಂಪು ಅವರು ಮೈಸೂರಿನಲ್ಲಿಯೇ ನೆಲೆಸಿ, ಸಾಹಿತ್ಯ ಕೃಷಿಯನ್ನು ಮಾಡಿದ್ದಾರೆ. ಇಂತಹ ಪವಿತ್ರ ಭೂಮಿಗೆ ಬಂದು ನಿಂತಿರುವ ನನಗೆ ವಿಶೇಷ ಅನುಭವವಾಗಿದೆ. ಭಾರತದ ಪರಂಪರೆ ಈ ನಗರದ ಕಣ್ಣ, ಕಣದಲ್ಲೂ ಇದೆ ಎಂದು ತಿಳಿಸಿದರು.
ನನ್ನ ಜೀವನ ಯಾತ್ರೆಯಲ್ಲಿ ರಾಮಕೃಷ್ಣ ಆಶ್ರಮದ ಪಾತ್ರ ಬಹಳ ಮಹತ್ವದ್ದು, ಮೈಸೂರಿನಲ್ಲಿರುವ ರಾಮಕೃಷ್ಣ ಆಶ್ರಮಕ್ಕೆ ಭೇಟಿ ನೀಡಿ, ಇಲ್ಲಿರುವ ವಿವೇಕ ಸ್ಮಾರಕವನ್ನು ಉದ್ಘಾಟಿಸಿರುವುದು ನನ್ನ ಸೌಭಾಗ್ಯವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಇದೇ ವೇಳೆ ಬದುಕು ಬೆಳಕು ಪುಸ್ತಕವನ್ನು ಮೋದಿಯವರು ಬಿಡುಗಡೆ ಮಾಡಿದರು. ಶ್ರೀರಾಮಕೃಷ್ಣ ಆಶ್ರಮದ ಶತಮಾನೋತ್ಸವ ಕುರಿತ ಸಾಕ್ಷö್ಯ ಚಿತ್ರ ಪ್ರದರ್ಶನ, ವಾಲ್ಮೀಕಿ ರಾಮಾಯಣ ಗ್ರಂಥವನ್ನು ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ ಗೆಹ್ಲೋಟ್, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸಂಸದ ಯದುವೀರ್ ಕೃಷ್ಣದತ್ತಚಾಮರಾಜ ಒಡೆಯರ್, ಶಾಸಕ ಹರೀಶ್‌ಗೌಡ, ಕೊಲ್ಕತ್ತಾದ ಬೇಲೂರು ರಾಮಕೃಷ್ಣ ಮಠದ ಮತ್ತು ರಾಮಕೃಷ್ಣ ಮಿಷನ್ ನ ಪರಮಾಧ್ಯಕ್ಷರಾದ ಸ್ವಾಮಿ ಗೌತಮಾನಂದಜೀ ಮಹಾರಾಜ್ ಮತ್ತಿತರರು ಉಪಸ್ಥಿತರಿದ್ದರು.
ಇದಕ್ಕೂ ಮುನ್ನಾ ವಿಶೇಷ ವಿಮಾನದ ಮೂಲಕ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಬಳಿಕ ಹೆಲಿಕಾಪ್ಟರ್ ಮೂಲಕ ಮೈಸೂರು ವಿವಿಯ ಓವಲ್ ಮೈದಾನಕ್ಕೆ ಬಂದಿಳಿದಾಗ ಅವರಿಗೆ ರಾಜ್ಯಪಾಲರು, ಮುಖ್ಯಮಂತ್ರಿಗಳು ಆತ್ಮೀಯವಾಗಿ ಸ್ವಾಗತಿಸಿದರು. ಕಾರ್ಯಕ್ರಮ ಮುಗಿದ ಬಳಿಕ ದೆಹಲಿಗೆ ಹೊರಟ ಮೋದಿಯವರನ್ನು ಬಿಳ್ಕೋಟ್ಟರು. ಮೋದಿಯವರು ಮೈಸೂರಿನಲ್ಲಿ ಸಾಗುವ ರಸ್ತೆಗಳಲ್ಲಿ ಎಲ್ಲಾ ಬಗೆಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿತ್ತು. ಎಲ್ಲೆಡೆ ಬಿಗಿ ಪೊಲೀಸ್ ಬಂದೋ ಬಸ್ತ್ ಮಾಡಿ, ತೀವ್ರ ಕಟ್ಟೆಚ್ಚರ ವಹಿಸಲಾಗಿತ್ತು.
