
ಮೈಸೂರು : ಅಂತರAಗದ ಶಕ್ತಿ ಅರಿತು ಕೆಲಸ ನಿರ್ವಹಿಸಿದರೆ ಸಾಧನೆ ಸಿದ್ಧಿಗೊಳ್ಳುತ್ತದೆ ಎಂದು ಪದ್ಮಶ್ರೀ ಪುರಸ್ಕöÈತ ಹಿರಿಯ ವಿಜ್ಞಾನಿ ಡಾ. ಪ್ರಹ್ಲಾದ ರಾಮರಾವ್ ಹೇಳಿದರು.
ಮೈಸೂರಿನ ತೊಣಚಿ ಕೊಪ್ಪಲು ( ಟಿ.ಕೆ.) ಬಡಾವಣೆಯ ಶ್ರೀ ರಾಯರ ಮಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶ್ರೀ ಗುರುರಾಘವೇಂದ್ರ ಸೇವಾ ಟ್ರಸ್ಟ್ನ ರಜತ ಸಂಭ್ರಮ ಮಹೋತ್ಸವದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಪ್ರಾಚೀನ ಭಾರತೀಯ ವೇದಗಳಲ್ಲಿ ವಿಜ್ಞಾನವಿದೆ. ಅದು ಇಂದಿನ ಕ್ಷಿಪಣಿ ತಂತ್ರಜ್ಞಾನ ಮತ್ತು ಏರೋ ಡೈನಮಿಕ್ಸ್ ಸಂಶೋಧನೆಗೆ ಪೂರಕವಾಗಿದೆ. ಯುವ ತಂತ್ರಜ್ಞರು ಈ ನಿಟ್ಟಿನಲ್ಲಿ ಹೆಚ್ಚಿನ ಅಧ್ಯಯನ ಮಾಡಲು ಮುಂದಾಗಬೇಕು. ದೇಶ ಮತ್ತು ಸತನಾತನ ಧರ್ಮಕ್ಕೆ ಮಹತ್ತರ ಕೊಡುಗೆ ನೀಡಿ ಭಾರತದ ಹಿರಿಮೆಗೆ ಕೊಡುಗೆ ನೀಡುವಂತಾಗಬೇಕು ಎಂದರು.
ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ವಿ. ಶ್ರೀಶಾನಂದ ಮಾತನಾಡಿ, ರಾಯರ ಮೃತ್ತಿಕಾ ವೃಂದಾವನ ಎಲ್ಲೇ ಪ್ರತಿಷ್ಠಾಪನೆಯಾದರೂ ಆ ಪ್ರದೇಶ ಅಭಿವೃದ್ಧಿ ಹೊಂದಿ ಭಕ್ತರ ಸಂಖ್ಯೆ ಹೆಚ್ಚಾಗುತ್ತದೆ. ಈ ನಿಟ್ಟಿನಲ್ಲಿ ಟಿ.ಕೆ. ಬಡಾವಣೆ ಸನ್ನಿಧಿಯಲ್ಲಿ 25 ವರ್ಷ ಧಾರ್ಮಿಕ ಮತ್ತು ಸಾಮಾಜಿಕ ಸೇವೆಗಳು ನಡೆದಿರುವುದು ಮಾದರಿಯಾಗಿದೆ ಎಂದರು.
ಜ್ಞಾನ ಮತ್ತು ಭಕ್ತಿಗೆ ಯಾವುದೇ ಸಮಯ, ಸಮುದಾಯಗಳ ಮಿತಿ ಇಲ್ಲ. ಹಾಗಾಗಿ ನಾವು ಮಕ್ಕಳಿಗೆ ಸಂಸ್ಕöÈತಿ, ಸಂಸ್ಕಾರಗಳನ್ನು ಕಲಿಸಬೇಕು. ಇದಕ್ಕೆ ಸಂಸ್ಕöÈತ ಭಾಷಾ ಕಲಿಕೆಯೂ ಬೇಕು. ಭಾರತದಂಥ ಅದ್ಭುತ ದೇಶದಲ್ಲಿ ಜನಿಸಿರುವೆ ಎಂಬ ಹೆಮ್ಮೆಯನ್ನು ಯುವಜನರಲ್ಲಿ ಮೂಡಿಸಬೇಕು. ರಾಷ್ಟçದ ಋಣ ತೀರಿಸುವ ನಿಟ್ಟಿನಲ್ಲಿ ಛಲ ಮತ್ತು ಬಲಗಳು ಎಲ್ಲರಲ್ಲೂ ವೃದ್ಧಿಯಾಗಬೇಕು ಎಂದರು.
ಹಿರಿಯ ವಕೀಲ ಕೆ.ಆರ್. ಶಿವಶಂಕರ್, ಟ್ರಸ್ಟ್ ಅಧ್ಯಕ್ಷ ಜಯರಾಂ ಮತ್ತು ಪದಾಧಿಕಾರಿಗಳು ಇದ್ದರು. ಮಾಜಿ ಅಧ್ಯಕ್ಷರು ಮತ್ತು ವಿಶೇಷ ಸೇವೆ ಸಲ್ಲಿಸಿದ ಕಾರ್ಯಕರ್ತರು, ದಾನಿಗಳನ್ನು ಸನ್ಮಾನ ಮಾಡಲಾಯಿತು. ಇದೇ ಸಂದರ್ಭ ಬ್ರಹ್ಮೋಸ್ ಸಂಶೋಧನೆ, ಪ್ರಯೋಗ ಮತ್ತು ಭಾರತದ ವಾಯು ಸೇನಾ ಸಾಮರ್ಥ್ಯಗಳ ವಿಡಿಯೋ ಪ್ರದರ್ಶನ ಏರ್ಪಡಿಸಿದ್ದು ಗಮನ ಸೆಳೆಯಿತು.