Skip to main content

3Kaala News

ಸುಭಾಷಿತ 

ತನ್ನ ಕಣ್ಣೀರನ್ನು ತಾನೇ ಒರೆಸಿಕೊಳ್ಳುವ ವ್ಯಕ್ತಿ, ಇನ್ನೊಬ್ಬರ ಕಣ್ಣಲ್ಲಿ ಕಣ್ಣೀರು ಕಾಣಲು ಇಷ್ಟಪಡುವುದಿಲ್ಲ.
ಯಾಕೆಂದರೆ…
ನೋವಿನ ತೂಕ ಎಷ್ಟು ಭಾರವೆಂದು ಅವನು ಜೀವನದಿಂದಲೇ ಕಲಿತಿರುತ್ತಾನೆ. ಆದ್ದರಿಂದ ತಾನು ನೊಂದುಕೊಂಡರೂ, ಇತರರ ಸಂತೋಷಕ್ಕಾಗಿ ಪ್ರಾರ್ಥಿಸುತ್ತಿರುತ್ತಾನೆ.

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಸ್ನೇಹ ಮತ್ತು ಸೌಹಾರ್ದತೆಗೆ ಮಾದರಿಯಾದ ಜೆ.ಪಿ.ನಗರದ ನಿವಾಸಿಗಳು

ಮೈಸೂರು: ಸಮಾಜದಲ್ಲಿ ಸ್ನೇಹ, ಸೌಹಾರ್ದತೆ ಹಾಗೂ ಸಹಬಾಳ್ವೆಯ ಮೌಲ್ಯಗಳನ್ನು ಬೆಳೆಸುವ ನಿಟ್ಟಿನಲ್ಲಿ ಮೈಸೂರಿನ ಜೆ.ಪಿ.ನಗರ 2ನೇ ಹಂತದ 18ನೇ ಕ್ರಾಸ್, 24ನೇ ಮುಖ್ಯ ರಸ್ತೆಯ ನಿವಾಸಿಗಳು ಸ್ನೇಹ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು.
ಕಾರ್ಯಕ್ರಮದಲ್ಲಿ ಬಡಾವಣೆಯ ಹಿರಿಯರು, ಮಹಿಳೆಯರು, ಯುವಕರು ಹಾಗೂ ಮಕ್ಕಳು ಉತ್ಸಾಹದಿಂದ ಭಾಗವಹಿಸಿ, ಪರಸ್ಪರ ಸ್ನೇಹದ ಕಂಕಣ ಕಟ್ಟಿಕೊಂಡು ಒಗ್ಗಟ್ಟು, ವಿಶ್ವಾಸ ಹಾಗೂ ಮಾನವೀಯ ಸಂಬAಧಗಳ ಮಹತ್ವವನ್ನು ಸಾರಿದರು. ವಿವಿಧ ವಯೋಮಾನದ ನಿವಾಸಿಗಳು ಒಂದೇ ವೇದಿಕೆಯಲ್ಲಿ ಸೇರಿ, ಸ್ನೇಹದ ಮೂಲಕ ಸಮಾಜದಲ್ಲಿ ಶಾಂತಿ, ಸಹಕಾರ ಮತ್ತು ಸೌಹಾರ್ದತೆಯನ್ನು ಬೆಳೆಸುವ ಸಂಕಲ್ಪ ಕೈಗೊಂಡರು.
ಮಹಿಳೆಯರು ಸ್ನೇಹದ ಸಂಕೇತವಾಗಿ ಕೈಜೋಡಿಸಿ ಪರಸ್ಪರ ಬಾಂಧವ್ಯವನ್ನು ಗಟ್ಟಿಗೊಳಿಸಿದರೆ, ಮಕ್ಕಳು ಮತ್ತು ಯುವಕರು ಸ್ನೇಹದ ಕಂಕಣ ಧರಿಸಿ “ಸ್ನೇಹವೇ ಸಮಾಜದ ಶಕ್ತಿ” ಎಂಬ ಸಂದೇಶವನ್ನು ಸಾರಿದರು. ಹಿರಿಯರು ತಮ್ಮ ಜೀವನಾನುಭವಗಳನ್ನು ಹಂಚಿಕೊಳ್ಳುವ ಮೂಲಕ ನೆರೆಹೊರೆಯವರೊಂದಿಗೆ ಉತ್ತಮ ಬಾಂಧವ್ಯ ಬೆಳೆಸುವ ಅಗತ್ಯವನ್ನು ಒತ್ತಿ ಹೇಳಿದರು.
ಇಂತಹ ಕಾರ್ಯಕ್ರಮಗಳು ಕೇವಲ ಹಬ್ಬದ ಆಚರಣೆಗೆ ಸೀಮಿತವಾಗದೆ, ಸಮಾಜದಲ್ಲಿ ಪರಸ್ಪರ ಗೌರವ, ಸಹಕಾರ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ನಿವಾಸಿಗಳು ಅಭಿಪ್ರಾಯಪಟ್ಟರು.
ಜೆ.ಪಿ.ನಗರ 2ನೇ ಹಂತದ ನಿವಾಸಿಗಳ ಈ ವಿಶಿಷ್ಟ ಸ್ನೇಹ ದಿನಾಚರಣೆ ಇತರ ಬಡಾವಣೆಗಳಿಗೂ ಮಾದರಿಯಾಗಿದ್ದು, “ಸ್ನೇಹದಿಂದ ಸಮಾಜದ ಸೌಹಾರ್ದತೆ ಅರಳುತ್ತದೆ” ಎಂಬ ಸಂದೇಶವನ್ನು ಪರಿಣಾಮಕಾರಿಯಾಗಿ ಸಾರಿತು.