Skip to main content

3Kaala News

ಸುಭಾಷಿತ 

ತನ್ನ ಕಣ್ಣೀರನ್ನು ತಾನೇ ಒರೆಸಿಕೊಳ್ಳುವ ವ್ಯಕ್ತಿ, ಇನ್ನೊಬ್ಬರ ಕಣ್ಣಲ್ಲಿ ಕಣ್ಣೀರು ಕಾಣಲು ಇಷ್ಟಪಡುವುದಿಲ್ಲ.
ಯಾಕೆಂದರೆ…
ನೋವಿನ ತೂಕ ಎಷ್ಟು ಭಾರವೆಂದು ಅವನು ಜೀವನದಿಂದಲೇ ಕಲಿತಿರುತ್ತಾನೆ. ಆದ್ದರಿಂದ ತಾನು ನೊಂದುಕೊಂಡರೂ, ಇತರರ ಸಂತೋಷಕ್ಕಾಗಿ ಪ್ರಾರ್ಥಿಸುತ್ತಿರುತ್ತಾನೆ.

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಚಾಮುಂಡಿಪುರ0ನಲ್ಲಿ ಶ್ರೀ ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ ಮಹೋತ್ಸವ

ಮೈಸೂರು: ನಗರದ ಚಾಮುಂಡಿಪುರAನ ಬಸವ ಬಳಗ ಸಂಘದ ವತಿಯಿಂದ ಶ್ರೀ ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ (ಜನ್ಮೋತ್ಸವ) ಮಹೋತ್ಸವವನ್ನು ಅತ್ಯಂತ ವಿಜೃಂಭಣೆಯಿAದ ಆಚರಿಸಲಾಯಿತು.
ಚಾಮುಂಡಿಪುರA ವೃತ್ತದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಯ ವಿಗ್ರಹಕ್ಕೆ ವಿಶೇಷ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಪೂಜಾ ಕಾರ್ಯಕ್ರಮದ ನಂತರ ಆಗಮಿಸಿದ್ದ ನೂರಾರು ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.
ಈ ಸಂದರ್ಭದಲ್ಲಿ ಬಸವ ಬಳಗ ಸಂಘದ ಅಧ್ಯಕ್ಷ ಸಂದೀಪ್ ಸಿ., ಗೌರವಾಧ್ಯಕ್ಷ ಅಂಬಳೆ ಶಿವಣ್ಣ, ಉಪಾಧ್ಯಕ್ಷ ಎಂ. ಬಸವರಾಜು, ಪ್ರಮುಖರಾದ ಮರಿಸ್ವಾಮಿ, ಮಹೇಶ್ ಅರಸ್, ಜೋಗಿ ಮಂಜು, ಗಣೇಶ, ವಿಕ್ರಮ್ ಐಯ್ಯಂಗಾರ್, ಅಡುಗೆ ಕಾಂಟ್ರಾಕ್ಟರ್ ಕುಮಾರ್, ಬಸವರಾಜು, ಪ್ರಭು, ಪಾನಿಪುರಿ ಚಿಕ್ಕಣ್ಣ, ಚುರುಮುರಿ ರಾಜು, ಗೋಪಾಲ್ ಅರಸ್, ಪುರುಷೋತ್ತಮ್, ವಸಂತ್, ರವೀಂದ್ರ, ಭಾನುಕುಮಾರ್, ಆನಂದ್, ಶಂಕರ್, ಶೇಖರ್, ನಾಗೇಂದ್ರ, ದಿವಾಕರ್, ನರೇಂದ್ರ ರಾವ್, ಮಂಜುಳಾ, ವಿಜಯಾ, ದೇವೇಂದ್ರ ಸ್ವಾಮಿ, ದೀಪಕ್, ಸಂದೇಶ್, ಅಜ್ಗರ್, ವಿನಯ್, ಧನುಷ್, ಚೇತನ್, ರಾಜೇಂದ್ರ, ಮೋಹನ್, ಪ್ರಶಾಂತ್, ಮಧು, ರಾಕೇಶ್, ಶಿವಪ್ರಸಾದ್, ರಾಮಸ್ವಾಮಿ, ಗಿರೀಶ್ , ಶಿವಲಿಂಗಚಾರ್, ಅನೂಪ್, ಕಿಶೋರ್, ಮಂಜು, ಲತಾ, ಪಾರ್ವತಿ, ಸುರೇಶ್, ಮಧುರಾ, ಗಾಯತ್ರಿ, ರಿಂಕು ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.