
ಮೈಸೂರು; ರಾಮ ರಾಜ್ಯದ ಕಲ್ಪನೆಯನ್ನು ಅಕ್ಷರಶಃ ಸಾಕಾರಗೊಳಿಸಿ ಮೈಸೂರು ಸಂಸ್ಥಾನದ ಅಭಿವೃದ್ಧಿಯಲ್ಲಿ ಶಾಶ್ವತ ನೆನಪುಗಳ ಕೊಡುಗೆಗಳನ್ನು ಕೊಟ್ಟು ಯುಗ ಪುರುಷ ಎನಿಸಿಕೊಂಡ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು, ಅಭಿವೃದ್ಧಿಯ ಯೋಧನಾಗಿ ‘ರಾಜರ್ಷಿ’ ಎಂದು ಕರೆಸಿಕೊಂಡರು ಎಂದು ವಿಧಾನ ಪರಿಷತ್ ಸದಸ್ಯ ಆರ್. ರಘು ಕೌಟಿಲ್ಯ ಸ್ಮರಿಸಿದರು.
ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆಯಿಂದ ನಾಲ್ವಡಿಯವರ ಪುಣ್ಯಸ್ಮರಣೆ ಅಂಗವಾಗಿ ಮೈಸೂರಿನ ನೀಲಗಿರಿ ರಸ್ತೆಯಲ್ಲಿರುವ ಮಧುವನದ ಅವರ ಐಕ್ಯ ಮಂದಿರದಲ್ಲಿ ನಮನ ಸಲ್ಲಿಸಿ ಮಾತನಾಡಿದ ಅವರು,
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕೊಟ್ಟ ಕೊಡುಗೆಗಳ ಫಲವಾಗಿ ಇಂದು, ಮೈಸೂರು ಸಂಸ್ಥಾನದಲ್ಲಿ ನಾವು ಉತ್ತಮ ನೀರು, ಉತ್ತಮ ಗಾಳಿ, ಉತ್ತಮ ಪರಿಸರವನ್ನು ಹೊಂದಿದ್ದೇವೆ. ಶಿಕ್ಷಣ, ಕೃಷಿ, ಆರೋಗ್ಯ ಹಾಗೂ ಸಾಂಸ್ಕöÈತಿಕವಾಗಿ
ಮಹಾನ್ ಯೋಜನೆಗಳನ್ನು ಕಾರ್ಯಗತ ಗೊಳಿಸಿ ವಿಶ್ವಮಟ್ಟದಲ್ಲಿ ಮೈಸೂರನ್ನು ಎತ್ತರಕ್ಕೆ ಬೆಳೆಸಿದ ಕೀರ್ತಿಯ ಭಾಗದಲ್ಲಿ ನಾಲ್ವಡಿಯವರ ಮಾತೃಶ್ರೀ ವಾಣಿವಿಲಾಸ ಕೆಂಪನAಜಮ್ಮಣ್ಣಿ ಅವರು ಹಾಗೂ ನಾಲ್ವಡಿ ಅವರ ಕೊಡುಗೆ ಎಂದಿಗೂ ಮರೆಯಲಾಗದು ಎಂದು ಹೇಳಿದರು.
ನಾಲ್ವಡಿಯವರ ಕೊಡುಗೆಗಳ ಫಲಾನುಭವಿಗಳಾದ ಮೈಸೂರು ಹಾಗೂ ಬೆಂಗಳೂರು ಸೇರಿದಂತೆ ಅಂದಿನ ಮೈಸೂರು ಸಂಸ್ಥಾನದ ಇಂದಿನ ಪೀಳಿಗೆಗೆ ಅವರ ಸ್ಮರಣೆ ನಿತ್ಯಮಂತ್ರವಾಗಬೇಕು ಎಂದು ತಿಳಿಸಿದರು.
ರಾಜ ವಂಶಸ್ಥರ ಸಮಾಧಿಗಳಿರುವ ಈ ಸ್ಥಳ ಪುಣ್ಯಕ್ಷೇತ್ರ ಎಂದು ಪರಿಭಾವಿಸಿ, ಈ ಮಧುವನ ಆವರಣವನ್ನು ಪ್ರವಾಸಿಗರು ಸಂದರ್ಶಿಸುವAತಾಗಲು ಇದನ್ನು ಪುಣ್ಯಕ್ಷೇತ್ರವನ್ನಾಗಿ ಅಭಿವೃದ್ಧಿಪಡಿಸಲು ಮೈಸೂರು ರಾಜಮನೆತನವನ್ನು ವಿನಂತಿಸುವುದಾಗಿ ಅವರು ಹೇಳಿದರು. ಕಾರ್ಯಕ್ರಮದಲ್ಲಿ ವೇದಿಕೆಯ ಅಧ್ಯಕ್ಷೆ ಹೆಚ್.ಎಲ್.ಯಮುನಾ, ಕೃಷಿ ಸಂಶೋಧಕ ಡಾ. ವಸಂತಕುಮಾರ ತಿಮಕಾಪುರ, ಗೋಲ್ಡ್ ಸುರೇಶ್ ಮೊದಲಾದವರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಆರ್ ರಘು ರವರಿಗೆ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು