
ಮೈಸೂರು; ಉಪನ್ಯಾಸಕರಿಲ್ಲದ ಸರ್ಕಾರಿ ಕಾಲೇಜುಗಳಲ್ಲಿ ತಕ್ಷಣವೇ ಉಪನ್ಯಾಸಕರ ನೇಮಕಾತಿ ಮಾಡಬೇಕು ಎಂದು ರಾಜ್ಯ ಸರ್ಕಾರವನ್ನು ಎಬಿವಿಪಿ ಆಗ್ರಹಿಸಿದೆ.
ಮಂಗಳವಾರ ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪರಿಷತ್‌ನ ಮೈಸೂರು ಜಿಲ್ಲಾ ಸಂಚಾಲಕ ನಂದನ್ ಕುಮಾರ್ ಹೆಚ್, ರಾಜ್ಯದಲ್ಲಿ ಸುಮಾರು 430+ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿವೆ. ಅವುಗಳು ಇಂದು “ಶಿಕ್ಷಕರಿಲ್ಲದ ಶಿಕ್ಷಣ ಸಂಸ್ಥೆಗಳಾಗಿ” ಮಾರ್ಪಟ್ಟಿವೆ. ರಾಜ್ಯದ ಮೂಲೆ ಮೂಲೆಗಳ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳು ಅವಲಂಬಿಸಿರುವ ಈ ಕಾಲೇಜುಗಳಲ್ಲಿ , ಅತಿಥಿ ಉಪನ್ಯಾಸಕರ ನೇಮಕಾತಿ ವಿಳಂಬದಿAದಾಗಿ ಶೈಕ್ಷಣಿಕ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಇದನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿದರು.
ಪ್ರತಿ ವರ್ಷ ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ಅತ್ಯಂತ ಕಡಿಮೆ ಶುಲ್ಕದಲ್ಲಿ ಉನ್ನತ ಶಿಕ್ಷಣ ಪಡೆಯಲು ಪ್ರವೇಶ ಪಡೆಯುತ್ತಾರೆ. ಆದರೆ ಕಳೆದ ಹಲವಾರು ವರ್ಷಗಳಿಂದ ಈ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿಯ ವಿಳಂಬ ಮತ್ತು ಕೊರತೆ ತೀವ್ರವಾಗಿದೆ.
ಜೂನ್ ಜುಲೈನಲ್ಲಿ ಕಾಲೇಜು ಆರಂಭವಾಗಿ 1-2 ತಿಂಗಳು ಕಳೆದರೂ ಬಿ.ಕಾಂ, ಬಿಎ, ಬಿಸಿಎ, ಬಿಬಿಎ ವಿದ್ಯಾರ್ಥಿಗಳಿಗೆ ಪ್ರಮುಖ ವಿಷಯಗಳಿಗೆ ಬೋಧಕರೇ ಇಲ್ಲ. ಕಾಲೇಜುಗಳಲ್ಲಿ ಸಾವಿರಾರು ಸಹಾಯಕ ಪ್ರಾಧ್ಯಾಪಕರ ಹುದ್ದೆಗಳು ಖಾಲಿ ಇವೆ. ಇವುಗಳ ನೇಮಕಾತಿ ಕಳೆದ ಎರಡು ವರ್ಷಗಳಿಂದ ನಡೆದಿರುವುದಿಲ್ಲ ಎಂದು ದೂರಿದರು.
ಅತಿಥಿ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆ ವಿಳಂಬ: ಪ್ರತಿ ವರ್ಷ ಜೂನ್-ಜುಲೈನಲ್ಲಿ ಕಾಲೇಜು ಆರಂಭವಾದರೂ, ಅತಿಥಿ ಉಪನ್ಯಾಸಕರ ನೇಮಕಾತಿ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ನಡೆಯುತ್ತದೆ. ಇದರಿಂದ ಸರ್ಕಾರಿ ಕಾಲೇಜುಗಳಲ್ಲಿ ಫಲಿತಾಂಶ ಗಣನೀಯವಾಗಿ ಕಡಿಮೆಯಾಗುತ್ತಿದೆ. ಅಲ್ಲದೆ ವಿದ್ಯಾರ್ಥಿಗಳು ತರಗತಿಗಳಿಲ್ಲ ಎಂದು ಪ್ರವೇಶ ಪಡೆಯದೆ, ಪ್ರತಿ ವರ್ಷದ ದಾಖಲಾತಿಯು ಗಣನೀಯವಾಗಿ ಇಳಿಕೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಬಡ ವಿದ್ಯಾರ್ಥಿಗೆ ದ್ರೋಹ: ಖಾಸಗಿ ಕಾಲೇಜುಗಳಿಗೆ ಹಾಗೂ ಟ್ಯೂಷನ್‌ಗೆ ಅಧಿಕ ಡೊನೇಶನ್ ಕೊಟ್ಟು ಹೋಗಲು ಹಣವಿಲ್ಲದ ಗ್ರಾಮೀಣ, ಪ,ಜಾ, ಪಂಗಡ , ಹಿಂದುಳಿದ ವರ್ಗದ ವಿದ್ಯಾರ್ಥಿಗಳ ಶೈಕ್ಷಣಿಕ ಹಕ್ಕುಗಳನ್ನು ಸರ್ಕಾರ ಕಸಿದುಕೊಳ್ಳುತ್ತಿದೆ. ಅತಿಥಿ ಉಪನ್ಯಾಸಕರ ಸ್ಥಿತಿ: ಅತಿಥಿ ಉಪನ್ಯಾಸಕರು 10 ತಿಂಗಳು ಕೆಲಸ ಮಾಡಿ ಎರಡು ತಿಂಗಳು ಸಂಬಳವಿಲ್ಲದೆ ಮನೆಯಲ್ಲಿ ಕೂರಬೇಕು. ಸೇವಾ ಭದ್ರತೆ ಏನೂ ಇಲ್ಲ. ಕಡಿಮೆ ಗೌರವಧನ, ಹೆಚ್ಚು ಕೆಲಸ ಹಾಗೂ ಯಾವಾಗ ಬೇಕಾದರೂ ಕೆಲಸದಿಂದ ತೆಗೆಯುವ ಭಯ – ಇದೇ ಅವರ ಸ್ಥಿತಿ. ಇದಕ್ಕೆ ಸಂಪೂರ್ಣ ಕಾರಣ ರಾಜ್ಯ ಸರ್ಕಾರದ ನಿರ್ಲಕ್ಷ÷್ಯ ಮತ್ತು ಆಡಳಿತ ವೈಫಲ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
- ತಕ್ಷಣ ಅತಿಥಿ ಉಪನ್ಯಾಸಕರ ನೇಮಕಾತಿ: ಆಗಸ್ಟ್ 10 ರೊಳಗೆ ಎಲ್ಲಾ ಸರ್ಕಾರಿ ಕಾಲೇಜುಗಳಲ್ಲಿ ಆನ್‌ಲೈನ್ ಪಾರದರ್ಶಕ ಪ್ರಕ್ರಿಯೆ ಮೂಲಕ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಬೇಕು.
ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ನೀಡಬೇಕು, ಖಾಲಿ ಇರುವ ಎಲ್ಲಾ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳನ್ನು 6 ತಿಂಗಳ ಒಳಗೆ ಭರ್ತಿ ಮಾಡುವ ಕಾಲಮಿತಿ ಘೋಷಿಸಬೇಕು. ಎಲ್ಲಾ ಎಲ್ಲಾ ಸರ್ಕಾರಿ ಸರ್ಕಾರಿ ಕಾಲೇಜುಗಳಿಗೆ ದೂರದ ಊರಿನಿಂದ ಬರುವ ಬಡ ಹಾಗೂ ಗ್ರಾಮೀಣ ವಿದ್ಯಾರ್ಥಿಗಳೇ ಹೆಚ್ಚು. ಆದ್ದರಿಂದ ಅವರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಸರ್ಕಾರ ಕಲ್ಪಿಸಬೇಕು.
ಈ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ, ಂಃಗಿP ರಾಜ್ಯಾದ್ಯಂತ ಎಲ್ಲಾ ಸರ್ಕಾರಿ ಕಾಲೇಜುಗಳ ಮುಂದೆ ಬೃಹತ್ ಪ್ರತಿಭಟನೆ ಮತ್ತು ಕಾಲೇಜು ಬಂದ್ ಹಮ್ಮಿಕೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಮಹದೇವಸ್ವಾಮಿ ವಿ, ಜಿಲ್ಲಾ ವಿದ್ಯಾರ್ಥಿನಿ ಪ್ರಮುಖ್ ಲಕ್ಷಿö್ಮತಾ, ಚಂದ್ರು ಉಪಸ್ಥಿತರಿದ್ದರು.