Skip to main content

3Kaala News

ಸುಭಾಷಿತ 

ತನ್ನ ಕಣ್ಣೀರನ್ನು ತಾನೇ ಒರೆಸಿಕೊಳ್ಳುವ ವ್ಯಕ್ತಿ, ಇನ್ನೊಬ್ಬರ ಕಣ್ಣಲ್ಲಿ ಕಣ್ಣೀರು ಕಾಣಲು ಇಷ್ಟಪಡುವುದಿಲ್ಲ.
ಯಾಕೆಂದರೆ…
ನೋವಿನ ತೂಕ ಎಷ್ಟು ಭಾರವೆಂದು ಅವನು ಜೀವನದಿಂದಲೇ ಕಲಿತಿರುತ್ತಾನೆ. ಆದ್ದರಿಂದ ತಾನು ನೊಂದುಕೊಂಡರೂ, ಇತರರ ಸಂತೋಷಕ್ಕಾಗಿ ಪ್ರಾರ್ಥಿಸುತ್ತಿರುತ್ತಾನೆ.

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಮೈಸೂರಿನ ಮೂವರಿಗೆ ಎಕ್ಸಲೆನ್ಸ್ ಫೆಡರೇಶನ್ ಆಫ್ ಇಂಡಿಯನ್ ಫೋಟೋಗ್ರಫಿ ಪದನಾಮ


ಮೈಸೂರು; ವನ್ಯಜೀವಿ ಛಾಯಾಗ್ರಾಹಕರಾದ ಎಸ್ ಆರ್ ಮಧುಸೂದನ, ಶೇಷಾದ್ರಿ ವಿ ಹಾಗೂ ಭಾಸ್ಕರ್ ಎಂ ಆರ್ ಅವರಿಗೆ ಫೆಡರೇಶನ್ ಆಫ್ ಇಂಡಿಯನ್ ಫೋಟೋಗ್ರಾಫಿ ವತಿಯಿಂದ ಕೊಡ ಮಾಡುವ ಎಕ್ಸಲೆನ್ಸ್ ಫೆಡರೇಶನ್ ಆಫ್ ಇಂಡಿಯನ್ ಫೋಟೋಗ್ರಫಿ ಪದನಾಮ ವನ್ನು ಗಳಿಸಿದ್ದಾರೆ.
ಈ ಠಿಜನಾಮ ಗಳಿಸಲು 300ಕ್ಕೂ ಹೆಚ್ಚು ವಿವಿಧ ಛಾಯಾಚಿತ್ರಗಳಿಗೆ ಮಾನ್ಯತೆ ಪಡೆದಿರಬೇಕು. ಹಾಗೂ 50ಕ್ಕೂ ಹೆಚ್ಚು ಛಾಯಾಚಿತ್ರಗಳಿಗೆ ನ್ಯಾಷನಲ್ ಹಾಗೂ ಇಂಟರ್ನಾ್ಯಷನಲ್ ಪ್ರಶಸ್ತಿ ಪಡೆದಿರಬೇಕು. ಇದು ಭಾರತದ ಅತ್ಯಂತ ಪ್ರತಿಷ್ಠಿತ ಸಂಸ್ಥೆಯಾಗಿರುತ್ತದೆ. ಈ ಪದನಾಮ ಪಡೆಯಲು ಭಾರತ ಹಾಗೂ ವಿದೇಶಿ ಛಾಯಾಗ್ರಹಕರುಗಳು ಭಾಗವಹಿಸಿರುತ್ತಾರೆ. ಇದರಲ್ಲಿ ಮೈಸೂರಿನ ಮೂವರು ವನ್ಯಜೀವಿ ಛಾಯಾಗ್ರಾಹಕರುಗಳಾದ ಮಧುಸೂಧನ ಎಸ್‌ಆರ್, ಶೇಷಾದ್ರಿ ವಿ ಹಾಗೂ ಭಾಸ್ಕರ್ ಎಂ ಆರ್ ಅವರಿಗೆ ಲಭ್ಯವಾಗಿರುವುದು ಮೈಸೂರಿಗೆ ಹೆಮ್ಮೆಯ ವಿಷಯವಾಗಿದೆ.