
ಮೈಸೂರು; ದ್ವಂದ್ವಗಳ ನಡುವೆಯೇ ನಮ್ಮ ಬದುಕು ಸಾಗುತ್ತಿದೆ ಹಾಗೂ ಸಾಗುತ್ತಾ ಇರುತ್ತದೆ, ಈ ದ್ವಂದ್ವಗಳ ನಡುವೆ ನಾವು ಹೇಗೆ ಬದುಕಬೇಕು, ಬದುಕಿನ ಸಮತೋಲನವನ್ನು ಹೇಗೆ ಮಾಡಬೇಕು ಎನ್ನುವ ಜೀವನ ಪಾಠವನ್ನು ಕಲಿಸುವುದೇ ರಾಷ್ಟಿçÃಯ ಸೇವಾ ಯೋಜನೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯ ಭೂಗೋಳಶಾಸ್ತç ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ.ಬಿ. ಚಂದ್ರಶೇಖರ್ ತಿಳಿಸಿದರು.
ನಗರದ ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟಿçÃಯ ಸೇವಾ ಯೋಜನಾ ಘಟಕಗಳ ವತಿಯಿಂದ 2026-27ನೇ ಸಾಲಿನ ವಾರ್ಷಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭ ಹಾಗೂ “ಯುವಕರಲ್ಲಿ ಹೃದಯಘಾತ: ತಡೆಗಟ್ಟುವಿಕೆಯ ಮಾರ್ಗೋಪಾಯಗಳು” ಎಂಬ ವಿಷಯ ಕುರಿತು ಏರ್ಪಡಿಸಲಾಗಿದ್ದ ವಿಶೇಷ ಉಪನ್ಯಾಸವನ್ನು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,
ವ್ಯಕ್ತಿ ನಿರ್ಮಾಣ ಮಾಡುವುದು ಇತ್ತೀಚಿನ ದಿನಗಳಲ್ಲಿ ಬಹಳ ಕಷ್ಟಕರವಾಗಿದೆ. ಭಾರತವನ್ನು ಯಂಗೀಸ್ತಾನ, ಯುವಕರೇ ಇರುವಂತ ದೇಶ ಎಂದು ಕರೆಯುತ್ತೇವೆ. ಆದರೆ ಜನಸಂಖ್ಯೆಗೆ ಅನುಗುಣವಾಗಿ ಭಾರತ ಲಾಭವನ್ನು ಪಡೆಯುತ್ತಿಲ್ಲ. ಏಕೆಂದರೆ, ಉತ್ಪಾದಕತೆ ಮಾಡುವ ಸಾಮರ್ಥ್ಯ ಭಾರತದಲ್ಲಿ ಗರಿಷ್ಠ ಮಟ್ಟದಲ್ಲಿದೆ, ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು. ಎನ್.ಎಸ್.ಎಸ್. ಸಂಸ್ಕಾರಯುತ ಬದುಕನ್ನು ಕಟ್ಟಿಕೊಳ್ಳುವುದು ಹೇಗೆ ಎಂಬುದನ್ನು ರಾಷ್ಟಿçÃಯ ಸೇವಾ ಯೋಜನೆಯು ಕಲಿಸುತ್ತದೆ ಇದು ಕಲ್ಪವೃಕ್ಷವಿದ್ದಂತೆ ಎಂದರು.
ಸAಚಲನ ಆಸ್ಪತ್ರೆಯ ಹೃದ್ರೋಗ ತಜ್ಞರಾದ ಡಾ. ವೀನು ಜಿ ಅವರು “ಯುವಕರಲ್ಲಿ ಹೃದಯಘಾತ: ತಡೆಗಟ್ಟುವಿಕೆಯ ಮಾರ್ಗೋಪಾಯಗಳು” ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸವನ್ನು ನೀಡಿ, ಇತ್ತೀಚಿನ ದಿನಗಳಲ್ಲಿ ಯುವ ಜನತೆಯಲ್ಲಿ ವಿಶೇಷವಾಗಿ 20 ರಿಂದ 40 ವಯಸ್ಸಿನವರಲ್ಲಿ ಹೃದಯಘಾತ ಪ್ರಕರಣಗಳು ಆತಂಕಕಾರಿಯಾಗಿ ಹೆಚ್ಚುತ್ತಿವೆ. ಒಂದು ಕಾಲದಲ್ಲಿ ವೃದ್ಧರಿಗೆ ಮಾತ್ರ ಸೀಮಿತವಾಗಿದ್ದ ಈ ಆರೋಗ್ಯ ಸಮಸ್ಯೆ ಇಂದು ಯುವಕರನ್ನು ಬಲಿ ತೆಗೆದುಕೊಳ್ಳುತ್ತಿರುವುದು ಸಮಾಜಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ವಿಷಾಧ ವ್ಯಕ್ತಪಡಿಸಿದರು.
ಹೃದಯಘಾತಕ್ಕೆ ಜೀವನ ಶೈಲಿಯಲ್ಲಿನ ಬದಲಾವಣೆಗಳು, ಮಾನಸಿಕ ಒತ್ತಡ ಮತ್ತು ಅನಾರೋಗ್ಯಕರ ಅಭ್ಯಾಸಗಳು, ಅನಾರೋಗ್ಯಕರ ಆಹಾರ ಪದ್ಧತಿ, ತ್ವರಿತ ಆಹಾರಗಳು, ಎಣ್ಣೆ ಪದಾರ್ಥಗಳ ಬಳಕೆ, ಅತಿ ಹೆಚ್ಚು ಸಕ್ಕರೆ ಮತ್ತು ಉಪ್ಪಿನಾಂಶವಿರುವ ಆಹಾರ ಸೇವನೆ ಕೊಬ್ಬಿನಾಂಶ ಹೆಚ್ಚಾಗಲು ಕಾರಣವಾಗಿವೆ. ದೈಹಿಕ ಶ್ರಮದ ಕೊರತೆ, ವ್ಯಾಯಾಮ, ಕ್ರೀಡೆಗಳಿಂದ ದೂರ ಉಳಿಯುವುದು, ಮಾದಕ ವಸ್ತುಗಳ ಬಳಕೆ, ಧೂಮಪಾನ, ಮದ್ಯಪಾನ, ನಿದ್ರಾಹೀನತೆ ಮತ್ತು ಅನುವಂಶಿಯತೆ ಹೃದಯ ಸಂಬAಧಿ ಖಾಯಿಲೆಗಳಿಗೆ ಪ್ರಮುಖ ಕಾರಣಗಳಾಗಿವೆ ಎಂದು ತಿಳಿಸಿದರು.
ಹೃದಯಘಾತವನ್ನು ತಡೆಗಟ್ಟಲು ಸಮತೋಲಿತ ಆಹಾರ ಶೈಲಿ, ಪ್ರತಿದಿನ ಕನಿಷ್ಠ 30 ನಿಮಿಷಗಳ ಕಾಲ ನಿಯಮಿತ ವ್ಯಾಯಾಮ, ಯೋಗ, ತೂಕ ನಿರ್ವಹಣೆ, ಒತ್ತಡ ನಿರ್ವಹಣೆ, ತಂಬಾಕು ಸೇವನೆಯನ್ನು ಸಂಪೂರ್ಣ ತ್ಯಜಿಸುವುದು. 18 ವರ್ಷ ದಾಟಿದ ಪ್ರತಿಯೊಬ್ಬರು ವರ್ಷಕ್ಕೊಮ್ಮೆ ರಕ್ತದೊತ್ತಡ, ಸಕ್ಕರೆ ಖಾಯಿಲೆ ಮತ್ತು ಕೊಲೆಸ್ಟಾçಲ್ ಮಟ್ಟವನ್ನು ನಿಯಮಿತವಾಗಿ ವೈದ್ಯಕೀಯ ತಪಾಸಣೆ ಮಾಡಿಸುವುದು ಉತ್ತಮ ಎಂದು ಕಿವಿಮಾತು ಹೇಳಿದರು. ಆರೋಗ್ಯವೇ ಭಾಗ್ಯ ಎಂಬ ನಾಣ್ಣುಡಿಯಂತೆ ಯುವ ಜನತೆ ತಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷö್ಯತೋರದೆ ಎಚ್ಚೆತ್ತುಕೊಳ್ಳುವುದು ಇಂದಿನ ತುರ್ತು ಅವಶ್ಯಕತೆಯಾಗಿದೆ ಎಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು.
ಕನ್ನಡ ವಿಭಾಗದ ಮುಖ್ಯಸ್ಥರು ಹಾಗೂ ಎನ್.ಎಸ್.ಎಸ್. ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಡಾ. ಎಚ್.ಆರ್. ತಿಮ್ಮೇಗೌಡ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿ, ಎನ್ಎಸ್ಎಸ್ ವಿದ್ಯಾರ್ಥಿಗಳಲ್ಲಿ ದೇಶಭಕ್ತಿ, ನೈತಿಕತೆಯನ್ನು ರೂಪಿಸುವ ನಿಟ್ಟಿನಲ್ಲಿ ಗಾಂಧೀಜಿಯವರ ಆದರ್ಶವನ್ನು ಮೈದುಂಬಿಕೊAಡು ನಿರ್ಮಾಣವಾದ ಸಂಸ್ಥೆಯಾಗಿದೆ. ರಾಷ್ಟಿçÃಯ ಸೇವಾ ಯೋಜನೆಯು ಮಾನವೀಯತೆಯ ಬದುಕನ್ನು ಕಲಿಸುವ, ಜಾತ್ಯಾತೀತ ಮನಸ್ಸುಗಳನ್ನು ನಿರ್ಮಾಣ ಮಾಡುವ, ಭಾಂದವ್ಯವನ್ನು ಬೆಸೆಯುವ ಮಾನವೀಯವಾದ ಪ್ರಪಂಚಕ್ಕೆ ಪರಿಚಯಿಸುವಂತದ್ದಾಗಿದೆ. ಎಂದು ಸ್ವಯಂ ಸೇವಕರಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ.ಆರ್. ಜಯಕುಮಾರಿ, ರಾಷ್ಟಿçÃಯ ಸೇವಾ ಯೋಜನೆಯ ಕಾರ್ಯಾಕ್ರಮಾಧಿಕಾರಿ ಡಾ. ದೊಡ್ಡರಸಯ್ಯ ಜಿ, ಶ್ರೀ ನಿರಂಜನ್ ಎಲ್ ಮತ್ತು ಅಧ್ಯಾಪಕ ಹಾಗೂ ಅಧ್ಯಾಪಕೇತರರು, ಎನ್.ಎಸ್.ಎಸ್. ಸ್ವಯಂ ಸೇವಕ, ಸೇವಕಿಯರು ಹಾಜರಿದ್ದರು.