Skip to main content

3Kaala News

ಸುಭಾಷಿತ 

ತನ್ನ ಕಣ್ಣೀರನ್ನು ತಾನೇ ಒರೆಸಿಕೊಳ್ಳುವ ವ್ಯಕ್ತಿ, ಇನ್ನೊಬ್ಬರ ಕಣ್ಣಲ್ಲಿ ಕಣ್ಣೀರು ಕಾಣಲು ಇಷ್ಟಪಡುವುದಿಲ್ಲ.
ಯಾಕೆಂದರೆ…
ನೋವಿನ ತೂಕ ಎಷ್ಟು ಭಾರವೆಂದು ಅವನು ಜೀವನದಿಂದಲೇ ಕಲಿತಿರುತ್ತಾನೆ. ಆದ್ದರಿಂದ ತಾನು ನೊಂದುಕೊಂಡರೂ, ಇತರರ ಸಂತೋಷಕ್ಕಾಗಿ ಪ್ರಾರ್ಥಿಸುತ್ತಿರುತ್ತಾನೆ.

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಕನ್ನಡ ವ್ಯಾಕರಣವು ಸಂಸ್ಕೃತ ವನ್ನು ಅವಲಂಬಿಸಿದೆ ಎಂಬುದು ತಪ್ಪು ಗ್ರಹಿಕೆ.


ಕನ್ನಡ ನಾಡು ಮತ್ತು ಹೊರನಾಡಿನ ಕನ್ನಡ ಶಾಸನಗಳು' ರಾಜ್ಯ ಮಟ್ಟದ ಕಾರ್ಯಾಗಾರ ಉದ್ಘಾಟನೆ

ಮೈಸೂರು: ಪ್ರಾಚೀನ ಕರ್ನಾಟಕವು ನೆರೆ ರಾಜ್ಯಗಳೊಂದಿಗೆ ಹೊಂದಿದ್ದ ಸಾಂಸ್ಕöÈತಿಕ ಸಂಬAಧ, ಕಲೆ, ವಾಸ್ತುಶಿಲ್ಪ ಹಾಗೂ ಪ್ರಾಂತ್ಯಗಳ ವಿಚಾರಗಳನ್ನು ಅರ್ಥೆÊಸಿಕೊಳ್ಳಲು ಆಂಧ್ರಪ್ರದೇಶ, ತಮಿಳುನಾಡು ಮತ್ತು ಕೇರಳದ ಶಾಸನಗಳು ಅತ್ಯಂತ ಮಹತ್ವಪೂರ್ಣವಾಗಿವೆ ಎಂದು ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಡಿ.ವಿ. ಪರಮಶಿವಮೂರ್ತಿ ಹೇಳಿದರು. ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದ ಉನ್ನತ ಶಿಕ್ಷಣ ಇಲಾಖೆಯ ಶಾಸ್ತಿçÃಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ವತಿಯಿಂದ ಆಯೋಜಿಸಲಾಗಿದ್ದಕನ್ನಡ ನಾಡು ಮತ್ತು ಹೊರನಾಡಿನ ಕನ್ನಡ ಶಾಸನಗಳು’ ಕುರಿತ ಎರಡು ದಿನಗಳ ರಾಜ್ಯ ಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ನಾಡು ಹಾಗೂ ಹೊರನಾಡುಗಳ ಸಾಂಸ್ಕöÈತಿಕ ಮತ್ತು ಐತಿಹಾಸಿಕ ಸಂಬAಧವನ್ನು ತೌಲನಿಕವಾಗಿ ಅಧ್ಯಯನ ಮಾಡಲು ಈ ಕಾರ್ಯಾಗಾರ ಸಹಕಾರಿಯಾಗಲಿದೆ ಎಂದರು.ಕನ್ನಡ ನಾಡಿನಲ್ಲಿ ದೊರೆಯುವ ಬಹುತೇಕ ಶಾಸನಗಳು ದಾನ ಶಾಸನಗಳಾಗಿವೆ. ದಾನ ಎಂಬುದು ಕೇವಲ ಶಾಸ್ತçಕ್ಕಾಗಿ ಅಲ್ಲದೆ, ಅಶಕ್ತ ಜನರನ್ನು ಕೈಹಿಡಿದು ಎತ್ತಿದ ವಿಚಾರಕ್ಕೆ ಶಾಸನಗಳು ಪುರಾವೆ ಒದಗಿಸುತ್ತವೆ. ಇಂತಹ ದಾನ ಶಾಸನಗಳು ಹೊರರಾಜ್ಯಗಳಲ್ಲಿಯೂ ಇವೆಯೇ ಎಂಬುದನ್ನು ಕುಲಂಕಷವಾಗಿ ಅಧ್ಯಯನ ಮಾಡಬೇಕಿದೆ ಎಂದು ತಿಳಿಸಿದರು.
ಕನ್ನಡಿಗರ ತ್ಯಾಗಗುಣ, ವೀರತ್ವ, ಬೇಟೆ, ರಾಜಕೀಯ ಹಾಗೂ ಧಾರ್ಮಿಕ ವಿಚಾರಗಳು ಹೊರನಾಡಿನ ಶಾಸನಗಳಲ್ಲಿ ಯಾವ ರೀತಿ ಅಭಿವ್ಯಕ್ತಗೊಂಡಿವೆ ಎಂಬುದನ್ನು ಪರಿಶೀಲಿಸಬೇಕಿದೆ. ಅಲ್ಲದೆ ಅಂದಿನ ಧರ್ಮಗಳು, ಧಾರ್ಮಿಕ ಸಂಘರ್ಷಗಳ ಕುರಿತು ತಿಳಿಯಲು ಶಾಸನ ಪಠ್ಯಗಳು ನೆರವಾಗಲಿದ್ದು, ತಮಿಳುನಾಡಿನ ಧಾರ್ಮಿಕ ಸಂಘರ್ಷಗಳೊAದಿಗೆ ಕರ್ನಾಟಕದ ಸಂಘರ್ಷಗಳನ್ನು ತುಲನೆ ಮಾಡಿ ನೋಡಬಹುದಾಗಿದೆ. ಈ ನಿಟ್ಟಿನಲ್ಲಿ ದಕ್ಷಿಣ ಭಾರತದ ಪ್ರಮುಖ ಶಾಸನ ತಜ್ಞರನ್ನು ಒಂದೆಡೆ ಸೇರಿಸಿ ಹೊಸ ಸಂಶೋಧನೆಗೆ ಈ ಕೇಂದ್ರ ಮುನ್ನುಡಿ ಬರೆದಿದೆ” ಎಂದು ಶ್ಲಾಘಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಧಾರವಾಡದ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಶ್ರೀನಿವಾಸ ಪಾಡಿಗಾರ್ ಮಾತನಾಡಿ, ಆಂಧ್ರಪ್ರದೇಶದ ಆಲಂಪುರದ ಕೂಡವೇಲಿ ಸಂಗಮೇಶ್ವರ ದೇವಾಲಯದ ಶ್ರೀ ಉತ್ಪಾತಿ ಪಿಡುಗು' ಶಾಸನಗಳು, ಬೀದರಿನ ಜಲಸಂಗಿ ಕಲ್ಲೇಶ್ವರ ದೇವಾಲಯ, ಮಹಾರಾಷ್ಟçದ ಧರ್ಮಪುರಿ ಕೇದಾರೇಶ್ವರ ದೇವಾಲಯ ಹಾಗೂ ಕಂಚಿಯ ಕೈಲಾಸನಾಥ ದೇವಾಲಯಗಳಲ್ಲಿನ ಶಾಸನಗಳ ಪ್ರಾತ್ಯಕ್ಷಿಕೆಯನ್ನು ಪ್ರದರ್ಶಿಸಿದರು. ಹಂಪಿಯ ಕನ್ನಡ ವಿಶ್ವವಿದ್ಯಾಲಯವು ಈಗಾಗಲೇ ಪ್ರಕಟಿಸಿರುವಆಂಧ್ರಪ್ರದೇಶದ ಕನ್ನಡ ಶಾಸನಗಳು’ ಸಂಪುಟಗಳಲ್ಲಿ ಕೆಲವು ದೋಷಗಳಿದ್ದು, ಅವುಗಳನ್ನು ಸರಿಪಡಿಸುವ ಅಗತ್ಯವಿದೆ ಎಂದು ತಿಳಿಸಿದರು.
ಭಾರತೀಯ ಭಾಷಾ ಸಂಸ್ಥಾನದ ನಿರ್ದೇಶಕ ಪ್ರೊ. ಬಸವರಾಜ ಕೊಡಗುಂಟಿ ಮಾತನಾಡಿ, ವಿಜ್ಞಾನ ವಿಷಯಕ್ಕೆ ಸಂಬAಧಿಸಿದAತೆ ಶಾಸನಗಳ ಅಧ್ಯಯನ ಕಡಿಮೆಯಿದ್ದು, 8ನೇ ಶತಮಾನದ ರಾಷ್ಟçಕೂಟರ ಶಾಸನದಲ್ಲಿ ಸಮಯದ ಉಲ್ಲೇಖವಿರುವುದನ್ನು ಕಾಣಬಹುದು. ಶಾಸನಗಳನ್ನು ಸೈದ್ಧಾಂತಿಕ ನೆಲೆಯಲ್ಲಿ ಗ್ರಹಿಸುವ ಕೆಲಸವಾಗಬೇಕಿದೆ” ಎಂದರು.
ಕನ್ನಡ ವ್ಯಾಕರಣವು ಸಂಸ್ಕöÈತವನ್ನು ಅವಲಂಬಿಸಿದೆ ಎಂಬುದು ತಪುö್ಪ ಗ್ರಹಿಕೆ. ಕದಂಬರ ಶಾಸನಗಳಲ್ಲಿ ವ್ಯಾಕರಣವನ್ನು ಅತ್ಯಂತ ವೈಜ್ಞಾನಿಕವಾಗಿ ಮತ್ತು ಕ್ರಮಬದ್ಧವಾಗಿ ಬಳಸಲಾಗಿದೆ. ಅಶೋಕನ ಶಾಸನಗಳು ಪ್ರಕಟವಾದ ಸನ್ನತಿ ಮತ್ತು ಕನಗನಹಳ್ಳಿ ಭಾಗದ ಜನರೇ ನಿಜವಾದ ಕನ್ನಡ ಲಿಪಿ ಸಂಯೋಜನೆ ಮಾಡಿದ್ದಾರೆ. ಪ್ರಸ್ತುತ `ಧರ್ಮ' ಎಂಬ ಅಂತರಜಾಲದ ಮೂಲಕ ವಿದೇಶಿಯರು ದಕ್ಷಿಣ ಭಾರತದ ಶಾಸನಗಳನ್ನು ಡಿಜಿಟಲೀಕರಣಗೊಳಿಸುತ್ತಿದ್ದು, ಈ ನಿಟ್ಟಿನಲ್ಲಿ ಶಾಸ್ತಿçÃಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರವೂ ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕಿದೆ'' ಎಂದು ಹೇಳಿದರು. ಶಾಸ್ತಿçÃಯ ಭಾಷೆಗಳ ಸಂಯೋಜಕ ಡಾ. ಎಲ್.ಆರ್. ಪ್ರೇಮ್ ಕುಮಾರ್ ಮಾತನಾಡಿ,ಸಾವಿರಾರು ವರ್ಷಗಳ ಲಿಖಿತ ಇತಿಹಾಸವಿರುವ ಕನ್ನಡದ ಚರಿತ್ರೆ, ಸಂಸ್ಕöÈತಿ ಮತ್ತು ಸಾಹಿತ್ಯವನ್ನು ಕಟ್ಟಿಕೊಡುವಲ್ಲಿ ಶಾಸನಗಳ ಪಾತ್ರ ಹಿರಿದಾದುದು. ಕ್ರಿ.ಶ. 450ರ ಹಲ್ಮಿಡಿ ಶಾಸನದಿಂದ ಹಿಡಿದು ತಾಳಗುಂದ, ಬಾದಾಮಿ, ಆತಕೂರು ಮತ್ತು ದೇಕಬ್ಬೆಯ ಶಾಸನಗಳವರೆಗೆ ಕನ್ನಡದ ಲಿಪಿ, ಭಾಷೆ ಹಾಗೂ ಕಾವ್ಯಬಂಧದ ವಿಕಾಸವನ್ನು ಕಾಣಬಹುದು” ಎಂದರು.
`ಕಾವೇರಿಯಿAದA ಗೋದಾವರಿವರಂ’ ವಿಸ್ತರಿಸಿದ್ದ ಕನ್ನಡದ ಪ್ರಭಾವವು ಕೇವಲ ಇಂದಿನ ಕರ್ನಾಟಕದ ಗಡಿಗೆ ಸೀಮಿತವಾಗಿರಲಿಲ್ಲ. ಚಾಲುಕ್ಯ, ರಾಷ್ಟçಕೂಟ, ಹೊಯ್ಸಳ ಮತ್ತು ವಿಜಯನಗರ ಅರಸರ ಆಳ್ವಿಕೆಯಲ್ಲಿ ತೆಲಂಗಾಣದ ಕುರ್ಕಾ್ಯಲ, ತಮಿಳುನಾಡಿನ ತಂಜಾವೂರು, ಮಹಾರಾಷ್ಟç, ಗೋವಾ, ಮಧ್ಯಪ್ರದೇಶ ಹಾಗೂ ದೂರದ ನೇಪಾಳದವರೆಗೂ ಕನ್ನಡ ಶಾಸನಗಳು ದೊರೆತಿವೆ. ಇಂತಹ ವಿಶಿಷ್ಟ ಹೊರನಾಡ ಶಾಸನಗಳ ಚಾರಿತ್ರಿಕ ಕೊಂಡಿಗಳನ್ನು ಪುನಃ ಜೋಡಿಸುವ ಹಾಗೂ ನಮ್ಮ ಭಾಷಿಕ ವಿಸ್ತಾರವನ್ನು ಪುನರ್ ಶೋಧಿಸಿಕೊಳ್ಳುವ ಮಹತ್ವದ ಹೆಜ್ಜೆಯೇ ಈ ಕಾರ್ಯಾಗಾರ ಎಂದು ಅವರು ಪ್ರಸ್ತಾವಿಕವಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಸ್ತಿçÃಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕರಾದ ಪ್ರೊ. ಎನ್.ಎಂ. ತಳವಾರ ಮತ್ತು ಶಾಸ್ತಿçÃಯ ಕನ್ನಡ ಸಂಸ್ಥೆಯ ಸಿಬ್ಬಂದಿಗಳು, ಶಾಸನಾಭ್ಯಾಸಕ್ತರು, ವಿದ್ವಾಂಸರು ಹಾಜರಿದ್ದರು.