Skip to main content

3Kaala News

ಸುಭಾಷಿತ 

ತನ್ನ ಕಣ್ಣೀರನ್ನು ತಾನೇ ಒರೆಸಿಕೊಳ್ಳುವ ವ್ಯಕ್ತಿ, ಇನ್ನೊಬ್ಬರ ಕಣ್ಣಲ್ಲಿ ಕಣ್ಣೀರು ಕಾಣಲು ಇಷ್ಟಪಡುವುದಿಲ್ಲ.
ಯಾಕೆಂದರೆ…
ನೋವಿನ ತೂಕ ಎಷ್ಟು ಭಾರವೆಂದು ಅವನು ಜೀವನದಿಂದಲೇ ಕಲಿತಿರುತ್ತಾನೆ. ಆದ್ದರಿಂದ ತಾನು ನೊಂದುಕೊಂಡರೂ, ಇತರರ ಸಂತೋಷಕ್ಕಾಗಿ ಪ್ರಾರ್ಥಿಸುತ್ತಿರುತ್ತಾನೆ.

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ


ಮೈಸೂರು: ವರುಣ ಉಪವಿಭಾಗದಲ್ಲಿ ತ್ರೆöÊಮಾಸಿಕ ನಿರ್ವಹಣಾ ಕಾಮಗಾರಿ ಹಾಗೂ ಚಾಮುಂಡಿಪುರA ಉಪವಿಭಾಗ ವ್ಯಾಪ್ತಿಯಲ್ಲಿ ಭೂಗತ ಕೇಬಲ್ ಕಾಮಗಾರಿ ಕೆಲಸದ ನಿಮಿತ್ತ ಆ.6 ರಂದು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಆಯರಹಳ್ಳಿ, ಹಡಜನ, ದೇವಲಾಪುರ, ರಾಯನಹುಂಡಿ, ಮರಿಗೌಡನಹುಂಡಿ, ಕುಂಬ್ರಹಳ್ಳಿ, ಸೋಮೇಶ್ವರಪುರ, ಬಸಳ್ಳಿಹುಂಡಿ, ಕಿರಾಳು, ಟಿ.ಎಂ ಹುಂಡಿ, ಮಾರಶೆಟ್ಟಿಹಳ್ಳಿ, ಸಜ್ಜೆಹುಂಡಿ, ಜಂತಗಳ್ಳಿ ಹಾಗೂ ಸುತ್ತ-ಮುತ್ತಲಿನ ಪ್ರದೇಶಗಳು, ಕಡವೆಕಟ್ಟೆಹುಂಡಿ, ದುದ್ದಗೆರೆ, ಮಹಾದೇವಿ ಕಾಲೋನಿ, ಲಕ್ಷಿö್ಮÃಪುರ ಹಾಗೂ ಸುತ್ತ-ಮುತ್ತಲಿನ ಪ್ರದೇಶಗಳು. ಎಲೆ ತೋಟ ವೃತ್ತ, ಗೌರಿಶಂಕರ ನಗರ, ದತ್ತನಗರ, ಮುನೇಶ್ವರನಗರ, ಹೋಯ್ಸಳನಗರ, ಗುಂಡುರಾವ್‌ನಗರ ಹಾಗೂ ಟೋಲ್‌ಗೇಟ್ ಸುತ್ತ-ಮುತ್ತಲಿನ ಪ್ರದೇಶಗಳು.
ಆಗಸ್ಟ್ 8 ರಂದು ಜಾಕಿ ಕ್ವಾಟರ‍್ಸ್ ಮತ್ತು ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಚಾ.ವಿ.ಸ.ನಿ.ನಿ. ನ.ರಾ.ಮೊಹಲ್ಲಾ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.