Skip to main content

3Kaala News

ಸುಭಾಷಿತ 

ತನ್ನ ಕಣ್ಣೀರನ್ನು ತಾನೇ ಒರೆಸಿಕೊಳ್ಳುವ ವ್ಯಕ್ತಿ, ಇನ್ನೊಬ್ಬರ ಕಣ್ಣಲ್ಲಿ ಕಣ್ಣೀರು ಕಾಣಲು ಇಷ್ಟಪಡುವುದಿಲ್ಲ.
ಯಾಕೆಂದರೆ…
ನೋವಿನ ತೂಕ ಎಷ್ಟು ಭಾರವೆಂದು ಅವನು ಜೀವನದಿಂದಲೇ ಕಲಿತಿರುತ್ತಾನೆ. ಆದ್ದರಿಂದ ತಾನು ನೊಂದುಕೊಂಡರೂ, ಇತರರ ಸಂತೋಷಕ್ಕಾಗಿ ಪ್ರಾರ್ಥಿಸುತ್ತಿರುತ್ತಾನೆ.

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಪಂಡಿತ ಪ್ರಹ್ಲಾದಾಚಾರ್ಯ ಕಾನಡೆಗೆ ಭಂಡಾರಕೇರಿ ಮಠದ ಪ್ರಶಸ್ತಿ ಘೋಷಣೆ


ಮೈಸೂರು: ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಸಂಸ್ಕöÈತ ಪಾಠಶಾಲೆಯ ಉಪನ್ಯಾಸಕ, ಪಂಡಿತ ಪ್ರಹ್ಲಾದಾಚಾರ್ಯ ಕಾನಡೆ ಅವರು ಶ್ರೀ ಭಂಡಾರಕೇರಿ ಮಠ ಕೊಡಮಾಡುವ ಪ್ರತಿಷ್ಠಿತ `ಅಥರ್ವೋದ್ಘೋಷ ವಾಕ್ಪತಿ’ ರಾಷ್ಟಿçÃಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಸಮಗ್ರವಾಗಿ ಅಥರ್ವವೇದವನ್ನು ಅಧ್ಯಯನ ಮಾಡಿ ನೂರಾರು ವಿದ್ಯಾರ್ಥಿಗಳಿಗೆ ಅದನ್ನು ಕಂಠಪಾಠ ಮಾಡಿಸುವ ಮೂಲಕ ಬೋಧನಾ ಕ್ರಮದಲ್ಲಿ ವಿಭಿನ್ನ ಸಾಧನೆ ಮಾಡಿರುವ ಕಾನಡೆ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿಕೊಂಡಿರುವುದಾಗಿ ಮಠದ ಪೀಠಾಧಿಪತಿ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ಘೋಷಣೆ ಮಾಡಿದ್ದಾರೆ.
ಪ್ರಶಸ್ತಿಯು ಸನ್ಮಾನ ಪತ್ರ, ಸ್ಮರಣಿಕೆ, ನಗದು ಪುರಸ್ಕಾರ ಒಳಗೊಂಡಿದೆ. ಉಡುಪಿ ಸಮೀಪದ ಬಾರ್ಕೂರಿನ ಭಂಡಾರಕೇರಿ ಮೂಲ ಮಠದಲ್ಲಿ 47ನೇ ಚಾತುರ್ಮಾಸ ಮತ್ತು ಆದರ್ಶ ಕೀರ್ತಿಶೇಷ ಶ್ರೀವಿದ್ಯಾಮಾನ್ಯತೀರ್ಥರ ಪೀಠಾರೋಹಣ ಶತಮಾನೋತ್ಸವ ಸಂಭ್ರಮಾಚರಣೆ ಸಂದರ್ಭದ ಅಂಗವಾಗಿ ಆ. 7 ರ ಸಂಜೆ 6ಕ್ಕೆ ನಡೆಯಲಿರುವ ವಿದ್ವತ್ ಸಭೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಮೈಸೂರು ನಗರದ ಚಾಮರಾಜ ಜೋಡಿ ರಸ್ತೆಯಲ್ಲಿರುವ ಭಂಡಾರಕೇರಿ ಶಾಖಾ ಮಠ ಪ್ರಕಟಣೆ ತಿಳಿಸಿದೆ.