
ಮೈಸೂರು; ಭಾರತವು ದೀರ್ಘಕಾಲಿನ ಆಹಾರಭದ್ರತೆಗಾಗಿ ಸುಸ್ಥಿರ ಅಭಿವೃದ್ಧಿ ಗುರಿ ಹೊಂದಬೇಕು ಎಂದು ನ್ಯಾಷನಲ್ ರೆಫರಲ್ ಸೆಂಟರ್ ಫಾರ್ ಲೀಡ್ ಪ್ರಾಜೆಕ್ಟ್ಸ್ ಇನ್ ಇಂಡಿಯಾ’ ಸಂಸ್ಥೆಯ ನಿರ್ದೇಶಕ ಡಾ. ತುಪ್ಪಿಲ್ ವೆಂಕಟೇಶ್ ಹೇಳಿದರು.
ಮೈಸೂರಿನ ಸರಸ್ವತಿಪುರಂನಲ್ಲಿರುವ ಜೆಎಸ್ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಜೈವಿಕ ತಂತ್ರಜ್ಞಾನ ವಿಭಾಗದ ವತಿಯಿಂದ 6.8.2026ರಂದು ಆಯೋಜಿಸಿದ್ದ “ಮಾನವ ಕಲ್ಯಾಣಕ್ಕಾಗಿ ತಂತ್ರಜ್ಞಾನದ ಮೂಲಕ ಸುರಕ್ಷಿತ, ಪೌಷ್ಟಿಕ ಮತ್ತು ಸುಸ್ಥಿರ ಆಹಾರ” ವಿಷಯ ಕುರಿತಂತೆ ಒಂದು ದಿನದ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, “ಸಾಂಪ್ರದಾಯಿಕ ಆಹಾರ ಪದ್ಧತಿ ಹಾಗೂ ಪರಿಸರವು ಈ ಹಿಂದೆ ನೈಸರ್ಗಿಕವಾಗಿಯೇ ಸುರಕ್ಷಿತವಾಗಿದ್ದವು, ಆದರೆ ಆಧುನಿಕ ಜಗತ್ತಿನ ಸವಾಲುಗಳನ್ನು ಎದುರಿಸಲು ತಂತ್ರಜ್ಞಾನ ಆಧಾರಿತ ಪರಿಹಾರಗಳ ಅಗತ್ಯವಿದೆ” ಎಂದರು. ವಿದ್ಯಾರ್ಥಿಗಳು ಯಾವುದೇ ತೀರ್ಮಾನಕ್ಕೆ ಬರುವ ಮೊದಲು ಸಂಶೋಧನೆ ನಡೆಸಿ, ಸತ್ಯಾಸತ್ಯತೆಯನ್ನು ವಿಮರ್ಶಾತ್ಮಕವಾಗಿ ಪರಿಶೀಲಿಸಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷೀಯ ಭಾಷಣ ಮಾಡಿದ ಮೈಸೂರು ವಿಶ್ವವಿದ್ಯಾನಿಲಯದ ಜೈವಿಕ ತಂತ್ರಜ್ಞಾನ ವಿಭಾಗದ ಅಧ್ಯಕ್ಷ ಡಾ. ಕೆ. ರಾಮಚಂದ್ರ ಕಿಣಿ ಮಾತನಾಡಿ, “ಮಾನವ ಜೀವನದಲ್ಲಿ ಆಹಾರವು ಅತ್ಯಂತ ಮೂಲಭೂತ ಪಾತ್ರವನ್ನು ವಹಿಸುತ್ತದೆ. ದೇಶದ ಶಾಂತಿ ಮತ್ತು ನೆಮ್ಮದಿಗೆ ಆಹಾರ ಭದ್ರತೆಯೇ ಅಡಿಪಾಯ ಎಂದು ಪ್ರತಿಪಾದಿಸಿದರು. ಆಹಾರದ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಗಳು ಪ್ರಮುಖ ಪಾತ್ರ ವಹಿಸುತ್ತವೆ ಹಾಗೂ ತಾಂತ್ರಿಕ ಆವಿಷ್ಕಾರಗಳ ಮೂಲಕವೇ ದೀರ್ಘಕಾಲೀನ ಸುಸ್ಥಿರತೆಯನ್ನು ಸಾಧಿಸಲು ಸಾಧ್ಯ ಎಂದು ತಿಳಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಚಿತ್ರದುರ್ಗದ ಎಸ್.ಜೆ.ಎಮ್. ಫಾರ್ಮಸಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ. ಎಚ್. ಎಸ್. ಕೆ. ಸ್ವಾಮಿ, ಡಾ. ತಿಪ್ಪೇಸ್ವಾಮಿ, ನಿವೃತ್ತ ವಿಜ್ಞಾನಿ, ಕೇಂದ್ರ ರೇಷ್ಮೆ ಸಂಶೋಧನಾ ಮತ್ತು ತರಬೇತಿ ಸಂಸ್ಥೆ, ಪ್ರಾಂಶುಪಾಲ ಡಾ. ರೇಚಣ್ಣ, ಜೈವಿಕ ತಂತ್ರಜ್ಞಾನವಿಭಾಗದ ಮುಖ್ಯಸ್ಥ ಡಾ ಅಭಿಜಿತ್ ಸಿಂಗ್ ಹಾಗೂ ಐ.ಕ್ಯೂ.ಎ.ಸಿ. ಸಂಯೋಜಕ ಆರ್. ಮಲ್ಲೇಶ್ , ಧಾತ್ರಿ , ಚರಿಷ್ಮ ಕೆ. ಜಿ , ವೈಷ್ಣವಿ ಎಸ್ , ವಂದನಾ ವಿವೇಕ್ ಉಪಸ್ಥಿತರಿದ್ದರು. ಉದ್ಘಾಟನಾ ಸಮಾರಂಭದ ನಂತರ ಮೂರು ಪ್ರಮುಖ ತಾಂತ್ರಿಕ ಗೋಷ್ಠಿಗಳು ಜರುಗಿದವು:
ಮೊದಲನೇ ತಾಂತ್ರಿಕ ಗೋಷ್ಠಿ: ಡಾ. ತುಪ್ಪಿಲ್ ವೆಂಕಟೇಶ್ (ಸಿ.ಇ.ಒ. ಮತ್ತು ನಿರ್ದೇಶಕರು, ಫೌಂಡೇಶನ್ ಫಾರ್ ಕ್ವಾಲಿಟಿ ಇಂಡಿಯಾ) ಅವರು ವ್ಯಕ್ತಿಯ ಆರೋಗ್ಯದ ಭವಿಷ್ಯ” ಕುರಿತು ಉಪನ್ಯಾಸ ನೀಡಿದರು.
ಎರಡನೇ ತಾಂತ್ರಿಕ ಗೋಷ್ಠಿ: ಡಾ. ಎಚ್. ಎಸ್. ಕೆ. ಸ್ವಾಮಿ, ನಿವೃತ್ತ ಪ್ರಾಂಶುಪಾಲರು, ಎಸ್.ಜೆ.ಎಮ್. ಫಾರ್ಮಸಿ ಕಾಲೇಜು, ಚಿತ್ರದುರ್ಗ ಅವರು “ಆಹಾರ ಮತ್ತು ಪರಿಸರ” ವಿಷಯ ಕುರಿತು ಮಾತನಾಡಿದರು.
ಅಂತಿಮ ತಾಂತ್ರಿಕ ಗೋಷ್ಠಿ: ಡಾ. ಆರ್. ಶೇಖರ್ ನಾಯಕ್ (ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಆಹಾರ ವಿಜ್ಞಾನ ಮತ್ತು ಪೋಷಣೆ ವಿಭಾಗ, ಯುವರಾಜ ಕಾಲೇಜು, ಮೈಸೂರು ಅವರು “ಉತ್ತಮ ಪೋಷಣೆ ಮತ್ತು ಆರೋಗ್ಯಕ್ಕಾಗಿ ಸುಸ್ಥಿರ ಆಹಾರ ಉತ್ಪಾದನೆ” ವಿಷಂiÀ Äಕುರಿತು ಉಪನ್ಯಾಸ ನೀಡಿದರು.