
ಮೈಸೂರು: ಮಹಿಳಾ ಸೂಪರ್ ವೈಸರ್ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ಕೀಟನಾಶಕ ಸೇವಿಸಿ ಮಹಿಳಾ ನೌಕರಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನಲ್ಲಿ ಹಿನಕಲ್ ನಲ್ಲಿ ನಡೆದಿದೆ. ಡೆತ್ ನೋಟ್ ಬರೆದಿಟ್ಟು ನಾಗೇಶ್ವರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕAಪನಿಯೊAದರಲ್ಲಿ ನಾಗೇಶ್ವರಿ ಟಾಟಾ ಪ್ರಮೋಟರ್ ಆಗಿ ಕೆಲಸ ನಿರ್ವಹಣೆ ಮಾಡುತ್ತಿದ್ದರು. ಈ ಮಧ್ಯೆ ಕಳೆದ 4 ದಿನಗಳ ಹಿಂದೆ ಕಂಪನಿಗೆ ಸೂಪರ್ವೆÊಸರ್ ಆಗಿ ಡಾಲಿ ಎಂಬ ಮಹಿಳೆ ಬಂದಿದ್ದು, ನನ್ನದಲ್ಲದ ತಪ್ಪಿಗೆ ನನ್ನನ್ನು ಟಾರ್ಗೆಟ್ ಮಾಡಿ ಕಿರುಕುಳ ಕೊಟ್ಟಿದ್ದಾರೆ. ಕಳೆದ 4 ತಿಂಗಳಿನಿAದ ಒಂದು ವೀಕ್ ಆಫ್ ಕೂಡ ಕೊಟ್ಟಿಲ್ಲ. ಎಮರ್ಜೆನ್ಸಿ ರಜೆಗಳನ್ನು ಕೂಡ ಕೊಟ್ಟಿಲ್ಲ . ಪ್ರಶ್ನೆ ಮಾಡಿದರೆ ಕೆಲಸದಿಂದ ಕಿತ್ತು ಹಾಕಿದರು. ನೋಟಿಸ್ ಪಿರಿಯಡ್ ಕೂಡ ಮಾಡಿಸಿಲ್ಲ. ಡಾಲಿ ಮೇಡಂ ಕಿರುಕುಳಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ನ್ಯಾಯ ಕೊಡಿಸಿ ಎಂದು ಡೆತ್ ನೋಟ್ ನಲ್ಲಿ ನಾಗೇಶ್ವರಿ ಉಲ್ಲೇಖ ಮಾಡಿದ್ದಾರೆ. ಘಟನೆ ಸಂಬAಧ ಮೈಸೂರಿನ ವಿಜಯನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.