
ಇಬ್ಬರು ಬೈಕ್ ಕಳ್ಳರ ಸೆರೆ: ನಾಲ್ವರು ಡಕಾಯಿತರ ಬಂಧನ
ಮೈಸೂರು: ಗುತ್ತಿಗೆದಾರನನ್ನು ಅಪಹರಿಸಿ, ಬೆದರಿಕೆ ಹಾಕಿ ಆತನಿಂದ ಹಣ ಪಡೆದು ನಂತರ ಬಿಟ್ಟು ಕಳಿಸಿದ ಪ್ರಕರಣಕ್ಕೆ ಸಂಬAಧಿಸಿದAತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.
ಶನಿವಾರ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ಜುಲೈ 15 ರಂದು ಮೈಸೂರು ವರುಣ ಪೊಲೀಸ್ ಠಾಣಾ ವ್ಯಾಪ್ತಿಯ ಮುದ್ದೇಗೌಡನ ಹುಂಡಿ ಗ್ರಾಮದ ಗುತ್ತಿಗೆದಾರ ರಾಮು ಎಂಬುವರನ್ನು, ಅವರ ತೋಟದ ಮನೆಯ ಬಳಿ ಕಾರಿನಲ್ಲಿ ಬಂದ 4 ಜನ ದರೋಡೆಕೋರರು ಅಪಹರಿಸಿ, ಅವರ ಕತ್ತಿನಲ್ಲಿದ್ದ ಚಿನ್ನದ ಸರ, ಉಂಗುರ ಹಾಗೂ 50 ಸಾವಿರ ರೂಪಾಯಿ ಹಣ ಕಿತ್ತುಕೊಂಡಿದ್ದರು. ಬಳಿಕ ಬಿಡುಗಡೆ ಮಾಡಲು 40 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಕೊನೆಗೆ 16 ಲಕ್ಷ ರೂಪಾಯಿ ಪಡೆದು ಗುತ್ತಿಗೆದಾರ ರಾಮು ಅವರನ್ನು ಬಿಡುಗಡೆ ಮಾಡಿದ್ದರು. ತಮ್ಮ ಅಪಹರಣ ಮತ್ತು ದರೋಡೆ ಕುರಿತು ರಾಮು ವರುಣ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣದ ದಾಖಲಾದ ಬಳಿಕ ಆರೋಪಿಗಳ ಶೋಧ ಕಾರ್ಯಾಚರಣೆಗಾಗಿ ವಿಶೇಷ ತಂಡಗಳನ್ನು ರಚಿಸಲಾಯಿತು. ಕೆಲ ಖಚಿತ ಸುಳಿವಿನ ಆಧಾರದ ಮೇಲೆ ಆರೋಪಿಗಳಾದ ಕಾರ್ತಿಕ್, ಸಿದ್ದರಾಜು, ಪುರುಷೋತ್ತಮ ಮತ್ತು ಆನಂದ್ ಎಂಬುವರನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಇನ್ನೂ ನಾಲ್ವರು ಆರೋಪಿಗಳು ಭಾಗಿಯಾಗಿದ್ದಾರೆ. ಅವರ ಪತ್ತೆಗಾಗಿ ಕಾರ್ಯಾಚರಣೆ ಮುಂದುವರೆದಿದೆ. ಬಂಧಿತರಿAದ 4.30 ಲಕ್ಷ ರೂಪಾಯಿ ನಗದು, 1 ಕಾರು, 2 ಬೈಕ್ ಹಾಗೂ 5 ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಇಬ್ಬರು ಬೈಕ್ ಕಳ್ಳರ ಸೆರೆ: ಮತ್ತೊಂದು ಪ್ರಕರಣದಲ್ಲಿ ಮೈಸೂರು ಜಿಲ್ಲೆಯ ಕೆ.ಆರ್.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್‌ಗಳನ್ನು ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಕೆ.ಆರ್.ನಗರ ಪೊಲೀಸರು ಬಂಧಿಸಿದ್ದು, ಕದ್ದ 9 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಬೇರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೂ ಬೈಕ್ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ವಿವರಿಸಿದರು.
ನಾಲ್ವರು ಡಕಾಯಿತರ ಬಂಧನ: ಮತ್ತೊಂದು ದರೋಡೆ ಪ್ರಕರಣವನ್ನೂ ಭೇದಿಸಲಾಗಿದೆ. 4 ದಿನಗಳ ಹಿಂದೆ ಮೈಸೂರು ನಗರದ ಹೊರಭಾಗದ ಮಣಿಪಾಲ್ ಸಿಗ್ನಲ್‌ನಲ್ಲಿ ಡ್ರಾಪ್ ನೀಡುವಂತೆ ಒಬ್ಬ ಮಹಿಳೆ ಮತ್ತು ಒಬ್ಬ ಪುರುಷ ಕಾರು ಹತ್ತಿದ್ದಾರೆ. ಸ್ವಲ್ಪ ದೂರ ತೆರಳಿದ ನಂತರ ಕಾರು ನಿಲ್ಲಿಸಿ ಮಾಲೀಕನ ಚಿನ್ನ, ಮೊಬೈಲ್ ಹಾಗೂ ಹಣವನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ಘಟನೆ ಸಂಬAಧ 4 ಜನ ದರೋಡೆಕೋರರನ್ನು ಬಂಧಿಸಲಾಗಿದೆ. ಇದರಲ್ಲಿ ಓರ್ವ ಮಹಿಳೆಯೂ ಇದ್ದಾಳೆ ಎಂದು ವಿವರಿಸಿದರು.