
*ಶ್ರೀಕೃಷ್ಣನಿಗೆ ವಿವಿಧ ಬಗೆಯ ಅಲಂಕಾರ; ದೇವಸ್ಥಾನಕ್ಕೆ ಹರಿದು ಬಂದ ಭಕ್ತ ಸಾಗರ
ಮೈಸೂರು: ಅರಮನೆ ನಗರಿ ಮೈಸೂರಿನಲ್ಲಿ ಶುಕ್ರವಾರ ಭಗವಾನ್ ಶ್ರೀಕೃಷ್ಣ ಜನ್ಮಾಷ್ಠಮಿಯನ್ನು ಎಲ್ಲೆಡೆ ಸಂಭ್ರಮ, ಸಡಗರಿಂದ ಆಚರಿಸಲಾಯಿತು.
ಶ್ರೀಕೃಷ್ಣ ಜನ್ಮಾಷ್ಠಮಿಯ ಹಿನ್ನಲೆಯಲ್ಲಿ ನಗರದ್ಯಾಂತರ ಇರುವ ಶ್ರೀಕೃಷ್ಣನ ದೇವಾಲಯಗಳಲ್ಲಿ ಮುಂಜಾನೆಯಿAದಲೇ ವಿಶೇಷ ಅಭಿಷೇಕಗಳು ನೆರವೇರಿದವು. ದೇವರಿಗೆ ವಿವಿಧ ಹೂವುಗಳಿಂದ ಆಕರ್ಷಕವಾದ ಅಲಂಕಾರವನ್ನು ನೆರವೇರಿಸಿದ ಬಳಿಕ ಮಹಾಮಂಗಳಾರತಿಯನ್ನು ಬೆಳಗಿ ಭಕ್ತರ ದರ್ಶನಕ್ಕೆ ಅವಕಾಶ ನೀಡಲಾಯಿತು.
ಮುಂಜಾನೆಯಿAದ ಶ್ರೀಕೃಷ್ಣರ ದೇವಸ್ಥಾನಗಳಿಗೆ ಭಕ್ತರ ದಂಡೇ ಹರಿದು ಬಂತು. ಎಲ್ಲರೂ ಶ್ರೀಕೃಷ್ಣನ ದರ್ಶನವನ್ನು ಪಡೆದು, ಪ್ರಾರ್ಥಿಸಿ, ಜನ್ಮ ದಿನದ ಶುಭಾಶಯಗಳನ್ನು ಕೋರಿದರು. ಹಲವು ದೇವಾಲಯಗಳಲ್ಲಿ ಪ್ರಸಾದ ವಿತರಣೆಯನ್ನು ಮಾಡಲಾಯಿತು.
ಶ್ರೀರಾಂಪುರದ ಮೂಕಾಂಬಿಕಾ ಸಮೃದ್ಧಿ ಬಡಾವಣೆಯಲ್ಲಿರುವ ಪೂರ್ಣ ಚೇತನ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಕೃಷ್ಣ ಜನ್ಮಾಷ್ಟಮಿಯನ್ನು ವಿಶಿಷ್ಟವಾಗಿ ಆಚರಿಸಿದರು.
ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಶಾಲೆಗೆ ತೆರಳಲು ವಾಹನಕ್ಕಾಗಿ ಕಾಯುತ್ತಿದ್ದ ಸಂದರ್ಭದಲ್ಲಿ ಬಡಾವಣೆಗೆ ಆಗಮಿಸಿದ ಗೋವುಗಳಿಗೆ ವಿದ್ಯಾರ್ಥಿಗಳು ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿ, ಗೋಗ್ರಾಸ ಹಾಗೂ ಬಾಳೆಹಣ್ಣುಗಳನ್ನು ಅರ್ಪಿಸಿದರು. ಮಕ್ಕಳ ಭಕ್ತಿಪೂರ್ವಕ ಪ್ರಾರ್ಥನೆಯನ್ನು ಆಲಿಸಿದ ಗೋವುಗಳು ಬಳಿಕ ಅಲ್ಲಿಂದ ಸಂಚರಿಸಿದವು.
ವೆAಕಟರಾಘವ ಅವರು ಗೋವುಗಳ ರಕ್ಷಣೆಯ ಅಗತ್ಯವನ್ನು ತಿಳಿಸಿದರು. ಧನ್ವಿನ್ ಶೇಖರ್ ಅವರು ಶ್ರೀಕೃಷ್ಣನು ಜಗತ್ತಿಗೆ ಗುರುವಾಗಿದ್ದು, ಆತನನ್ನು ಸ್ಮರಿಸುವುದು ನಮ್ಮ ಕರ್ತವ್ಯ ಎಂದರು. ಕರಣ್ ಕೀರ್ತಿ ಅವರು ನಮಗೆಲ್ಲ ಶ್ರೀಕೃಷ್ಣನೆಂದರೆ ತುಂಬಾ ಇಷ್ಟ ಎಂದು ಸಂತಸ ವ್ಯಕ್ತಪಡಿಸಿದರು. ಬಡಾವಣೆಯ ಪುಟಾಣಿ ಬಾಲಕಿ ಮಹಿಶ್ರೀ `ಹರೇ ರಾಮ, ಹರೇ ಕೃಷ್ಣ’ ಜಪಿಸುವ ಮೂಲಕ ಗಮನ ಸೆಳೆದಳು.
ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕಿ ಶ್ರೀಮತಿ ಶುಭಾ ಅರುಣ್, ವಿಶ್ವ ಹಿಂದೂ ಪರಿಷತ್ ಧರ್ಮ ಪ್ರಸಾರ ವಿಭಾಗದ ಮೈಸೂರು ಜಿಲ್ಲಾ ಅಧ್ಯಕ್ಷ ಪುನೀತ್ ಜಿ. ಕೂಡ್ಲೂರು, ಬಡಾವಣೆಯ ಕಾರ್ಯದರ್ಶಿ ನಾಗಭೂಷಣ ಆಚಾರಿ, ಉಪಾಧ್ಯಕ್ಷ ರಾಮಕೃಷ್ಣ, ಅಧ್ಯಕ್ಷ ಕೆ.ಆರ್. ಗಣೇಶ್, ಪುಟ್ಟರಾಜು, ಶ್ರೀಕಂಠ ಶೆಟ್ಟಿ, ನಾಗಶ್ಯಾಮಲ, ವರಲಕ್ಷಿ÷್ಮ ಸೇರಿದಂತೆ ನಿವಾಸಿಗಳು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕೆಆರ್ ಪೊಲೀಸ್ ಠಾಣೆಯಲ್ಲಿ ವಿಜೃಂಭಣೆಯಿAದ ಕೃಷ್ಣ ಜನ್ಮಾಷ್ಟಮಿ ಆಚರಣೆ;
ಮೈಸೂರಿನ ಅಗ್ರಹಾರದಲ್ಲಿರುವ ಕೃಷ್ಣರಾಜ (ಕೆಆರ್) ಪೊಲೀಸ್ ಠಾಣೆಯಲ್ಲಿ ಶ್ರೀಕೃಷ್ಣ ಜನ್ಮೋತ್ಸವವನ್ನು ಭಕ್ತಿಭಾವದಿಂದ ಹಾಗೂ ಸಂಭ್ರಮದಿAದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಠಾಣೆಯಲ್ಲಿರುವ ಶ್ರೀಕೃಷ್ಣನ ವಿಗ್ರಹಕ್ಕೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು. ಪೂಜಾ ಕಾರ್ಯಕ್ರಮದಲ್ಲಿ ಪೊಲೀಸ್ ಸಿಬ್ಬಂದಿಗಳು ಹಾಗೂ ಸ್ಥಳೀಯ ಮುಖಂಡರು ಭಾಗವಹಿಸಿ ಶ್ರೀಕೃಷ್ಣನ ಆಶೀರ್ವಾದ ಪಡೆದರು.
ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಠಾಣೆಗೆ ಆಗಮಿಸಿದ್ದ ಪುಟ್ಟ ಮಗುವಿಗೆ ಮಹಿಳಾ ಪೊಲೀಸ್ ಸಿಬ್ಬಂದಿಗಳು ಮುದ್ದು ಕೃಷ್ಣನ ಅಲಂಕಾರ ಮಾಡಿ ಸಂಭ್ರಮಿಸಿದರು. ಬಾಲಕೃಷ್ಣನ ವೇಷದಲ್ಲಿ ಕಂಗೊಳಿಸಿದ ಮಗುವಿನೊಂದಿಗೆ ಸಿಬ್ಬಂದಿಗಳು ಫೋಟೋ ತೆಗೆಸಿಕೊಂಡು ಹಬ್ಬದ ಸಂತಸವನ್ನು ಹಂಚಿಕೊAಡರು.
ಸ್ಥಳೀಯ ಮುಖಂಡ ಜಿ. ರಾಘವೇಂದ್ರ ಪೊಲೀಸ್ ಸಿಬ್ಬಂದಿಗಳಿಗೆ ಪ್ರಸಾದ ವಿತರಿಸಿದರು.
ಕಾರ್ಯಕ್ರಮದಲ್ಲಿ ಪಿಎಸ್‌ಐ ಪೂಜಾ, ಪಿಎಸ್‌ಐ ಸುಭಾಷ್ ಚಂದ್ರ ಎಲ್., ಎಎಸ್‌ಐ ಗೀತಾ, ಲೋಕೇಶ್, ಅರುಣ್ ಕುಮಾರ್, ನಟರಾಜು, ಶ್ರೀನಿವಾಸ ಪ್ರಸಾದ್, ಮನುಕುಮಾರ್, ರಾಜಶೇಖರ, ಮಂಜುನಾಥ್, ಶಶಿಕುಮಾರ್, ಶಿವಕುಮಾರ್, ಚೇತನ್ ಕುಮಾರ್, ಲೋಕೇಶ್ ಎಂ., ಅಶ್ವಿನಿ, ಲಕ್ಷಿ÷್ಮÃ, ಅಭಿಲಾಷ್, ರಾಧಾ, ನಂದಿನಿ, ಗಜಾಪುರದ ಮಹೇಶ್ ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ಭಾಗವಹಿಸಿದ್ದರು.
ಜೆ. ಎಸ್.ಎಸ್. ಪಬ್ಲಿಕ್ ಶಾಲೆಯಲ್ಲಿ ಆಚರಣೆ; ಮೈಸೂರಿನ ಜೆ.ಪಿ.ನಗರದ ಜೆ. ಎಸ್.ಎಸ್. ಪಬ್ಲಿಕ್À ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಅತ್ಯಂತ ಸಂಭ್ರಮ ಮತ್ತು ಭಕ್ತಿಭಾವದಿಂದ ಆಚರಿಸಲಾಯಿತು. ಶಾಲೆಯ ಪ್ರಾಂಶುಪಾಲೆ ಎಸ್.ಎನ್.ಅರ್ಚನಾರವರು ದೀಪ ಬೆಳಗಿಸಿ ಹಾಗೂ ಶ್ರೀ ಕೃಷ್ಣನ ವಿಗ್ರಹಕ್ಕೆ ಪೂಜೆ ಸಲ್ಲಿಸುವ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಿದರು.
ಶಾಲೆಯ ಪೂರ್ವಪ್ರಾಥಮಿಕ ವಿದ್ಯಾರ್ಥಿಗಳು ಕೃಷ್ಣ, ರಾಧೆ ಹಾಗೂ ಗೋಪಿಕೆಯರ ವೇಷಭೂಷಣ ಧರಿಸಿ ಕಾರ್ಯಕ್ರವiದ ಮೆರುಗನ್ನು ಹೆಚ್ಚಿಸಿದರು. ಪುಟ್ಟ ಮಕ್ಕಳ ವೇಷಭೂಷಣ ಹಾಗೂ ನೃತ್ಯ ಎಲ್ಲರ ಕಣ್ಮನ ಸೆಳೆಯಿತು. ಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿಯಾದ ಜೀವಿತಾ ಜಿ. ಎಸ್ ದಿನದ ಮಹತ್ವದ ಬಗ್ಗೆ ತಿಳಿಸಿಕೊಟ್ಟಳು. 6ನೇ ತರಗತಿಯ ವಿದ್ಯಾರ್ಥಿನಿಯರು ಕೃಷ್ಣನ ಕುರಿತಾದ ಹಾಡುಗಳನ್ನು ಹಾಡಿದರು. 10 ನೇ ತರಗತಿಯ ವಿದ್ಯಾರ್ಥಿನಿಯರು ಕೃಷ್ಣನ ಹಾಡಿಗೆ ನೃತ್ಯ ಮಾಡಿ ಎಲ್ಲರನ್ನು ರಂಜಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಶಿಕ್ಷಕರು ಹಾಗೂ ಶಾಲಾ ಸಿಬ್ಬಂದಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ಶ್ರೀ ಕೃಷ್ಣ ಜನ್ಮಾಷ್ಟಮಿಯ ಆಚರಣೆಯು ಶಾಲಾ ಆವರಣದಲ್ಲಿ ಭಕ್ತಿ ಮತ್ತು ಸಂಭ್ರಮದ ವಾತಾವರಣವನ್ನು ಮೂಡಿಸಿತು.
ಕೃಷ್ಣ ಜನ್ಮಾಷ್ಟಮಿ: ಶ್ರೀ ಕೃಷ್ಣನ ಪ್ರಿಯವಾದ ಗೋವುಗಳಿಗೆ ವಿಶೇಷ ಪೂಜೆ
ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ನಂಜುಮಳಿಗೆ ಸಮೀಪದ ಶ್ರೀ ಕೃಷ್ಣ ದೇವಸ್ಥಾನದ ಮುಂಭಾಗದಲ್ಲಿ ಸ್ನೇಹ ಬಳಗದ ವತಿಯಿಂದ ಗೋವುಗಳಿಗೆ ವಿಶೇಷ ಪೂಜೆ ಸಲ್ಲಿಸಿ, ನಂತರ ಮೇವು ವಿತರಿಸಲಾಯಿತು. ಭಗವಾನ್ ಶ್ರೀ ಕೃಷ್ಣನಿಗೆ ಗೋವುಗಳೊಂದಿಗೆ ಅವಿನಾಭಾವ ಸಂಬAಧವಿದ್ದು, ಗೋಮಾತೆಯ ಆರಾಧನೆಯು ಭಾರತೀಯ ಸಂಸ್ಕöÈತಿಯಲ್ಲಿ ವಿಶೇಷ ಸ್ಥಾನಮಾನ ಪಡೆದಿದೆ. ಈ ಹಿನ್ನೆಲೆಯಲ್ಲಿ ಗೋವುಗಳಿಗೆ ಪೂಜೆ ಸಲ್ಲಿಸಿ ಅವುಗಳ ಸೇವೆಯ ಮಹತ್ವವನ್ನು ಸಾರಲಾಯಿತು. ಕಾರ್ಯಕ್ರಮದಲ್ಲಿ ಸ್ನೇಹ ಬಳಗದ ಅಧ್ಯಕ್ಷ ಸುರೇಶ್, ಕೆಆರ್ ಬ್ಯಾಂಕ್ ಅಧ್ಯಕ್ಷ ಬಸವರಾಜ್, ರೇಖಾ ಶ್ರೀನಿವಾಸ್, ದಯಾನಂದ ನಾಯಕ್, ರಾಮಚಂದ್ರು, ಸುಚೇಂದ್ರ ತೀರ್ಥ, ಪುರುಷೋತ್ತಮ್ ಸೇರಿದಂತೆ ಹಲವರು ಭಾಗವಹಿಸಿ ಗೋವುಗಳಿಗೆ ಮೇವು ವಿತರಿಸಿದರು.
ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಮಕ್ಕಳಿಗೆ ಭಗವದ್ಗೀತಾ ಪುಸ್ತಕ ವಿತರಣೆ;
ಮೈಸೂರಿನ ಸರ್ದಾರ್ ವಲ್ಲಭಭಾಯಿ ಪಟೇಲ್ ನಗರದಲ್ಲಿರುವ ಪೆಟಲ್ಸ್ ಪ್ರೀ ನರ್ಸರಿ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಸಂಭ್ರಮದಿAದ ಆಚರಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಪುಟ್ಟ ಮಕ್ಕಳು ಕೃಷ್ಣ, ರಾಧೆ ಸೇರಿದಂತೆ ವಿವಿಧ ಪೌರಾಣಿಕ ಪಾತ್ರಗಳ ವೇಷಧಾರಣೆ ಮಾಡಿ ಎಲ್ಲರ ಗಮನ ಸೆಳೆದರು. ಈ ಸಂದರ್ಭದಲ್ಲಿ ಮಕ್ಕಳಿಗೆ ಶ್ರೀ ಕೃಷ್ಣ ಪರಮಾತ್ಮರು ಭಗವದ್ಗೀತೆಯಲ್ಲಿ ನೀಡಿರುವ ಜೀವನ ಮೌಲ್ಯಗಳು ಹಾಗೂ ಮಾರ್ಗದರ್ಶನದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಭಗವದ್ಗೀತಾ ಪುಸ್ತಕಗಳನ್ನು
ಬಡಾವಣೆಯ ಮುಖಂಡ ಗಗನ್ ವಿತರಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಂಶುಪಾಲರಾದ ನಿಫಿ, ರಜಿನಿ ಹಾಗೂ ಶಿಕ್ಷಕಿಯರಾದ ರಮ್ಯಾ, ಮಂಜು ಉಪಸ್ಥಿತರಿದ್ದರು.
ಸೆ. 5ರಂದು ವಿದುಷಿ ರೇಖಾ ಮತ್ತು ತಂಡದವರಿAದ “ಶ್ರೀ ಕೃಷ್ಣ ಗಾನಾಮೃತ”
ಮೈಸೂರು: ಶ್ರೀ ಕೃಷ್ಣ ಟ್ರಸ್ಟ್ ಹಾಗೂ ಶ್ರೀ ಕೃಷ್ಣ ಮಿತ್ರ ಮಂಡಳಿ ಹಾಗೂ ಚಾತುರ್ಮಾಸ್ಯ ಸಮಿತಿ
ವತಿಯಿಂದ ಉಡುಪಿ ಶ್ರೀ ಕಾಣಿಯೂರು ಮಠದ ಪೀಠಾಧಿಪತಿಗಳಾದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದಂಗಳವರ 35ನೇ ಚಾತುರ್ಮಾಸ್ಯ ಅಂಗವಾಗಿ ವಿದುಷಿ ರೇಖಾ ಮತ್ತು ತಂಡದವರಿAದ “ಶ್ರೀ ಕೃಷ್ಣ ಗಾನಾಮೃತ” ಕಾರ್ಯಕ್ರಮವನ್ನು ಮೈಸೂರಿನ ಸರಸ್ವತಿಪುರಂನಲ್ಲಿರುವ ಶ್ರೀ ಕೃಷ್ಣದಾಮದಲ್ಲಿ ಸೆಪ್ಟೆಂಬರ್ 5 ಗುರುವಾರದಂದು ಸಂಜೆ 7 ಗಂಟೆಗೆ ಏರ್ಪಡಿಸಲಾಗಿದೆ ಎಂದು ಶ್ರೀ ಕೃಷ್ಣ ಟ್ರಸ್ಟ್ ಚಾತುರ್ಮಾಸ್ಯ ಸಮಿತಿಯ ಉಪಾಧ್ಯಕ್ಷ ಶ್ರೀವತ್ಸ ರಾವ್ ತಿಳಿಸಿದ್ದಾರೆ.




