Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಅರಮನೆ ನಗರಿ ಮೈಸೂರಿನೆಲ್ಲೆಡೆ ಸಂಭ್ರಮದಿ0ದ ನಡೆದ ಶ್ರೀಕೃಷ್ಣ ಜನ್ಮಾಷ್ಠಮಿ

*ಶ್ರೀಕೃಷ್ಣನಿಗೆ ವಿವಿಧ ಬಗೆಯ ಅಲಂಕಾರ; ದೇವಸ್ಥಾನಕ್ಕೆ ಹರಿದು ಬಂದ ಭಕ್ತ ಸಾಗರ ಮೈಸೂರು: ಅರಮನೆ ನಗರಿ ಮೈಸೂರಿನಲ್ಲಿ ಶುಕ್ರವಾರ ಭಗವಾನ್ ಶ್ರೀಕೃಷ್ಣ ಜನ್ಮಾಷ್ಠಮಿಯನ್ನು ಎಲ್ಲೆಡೆ ಸಂಭ್ರಮ, ಸಡಗರಿಂದ ಆಚರಿಸಲಾಯಿತು.ಶ್ರೀಕೃಷ್ಣ ಜನ್ಮಾಷ್ಠಮಿಯ ಹಿನ್ನಲೆಯಲ್ಲಿ ನಗರದ್ಯಾಂತರ ಇರುವ ಶ್ರೀಕೃಷ್ಣನ ದೇವಾಲಯಗಳಲ್ಲಿ ಮುಂಜಾನೆಯಿAದಲೇ ವಿಶೇಷ ಅಭಿಷೇಕಗಳು ನೆರವೇರಿದವು. ದೇವರಿಗೆ ವಿವಿಧ ಹೂವುಗಳಿಂದ ಆಕರ್ಷಕವಾದ ಅಲಂಕಾರವನ್ನು ನೆರವೇರಿಸಿದ ಬಳಿಕ ಮಹಾಮಂಗಳಾರತಿಯನ್ನು ಬೆಳಗಿ ಭಕ್ತರ ದರ್ಶನಕ್ಕೆ ಅವಕಾಶ ನೀಡಲಾಯಿತು.ಮುಂಜಾನೆಯಿAದ ಶ್ರೀಕೃಷ್ಣರ ದೇವಸ್ಥಾನಗಳಿಗೆ ಭಕ್ತರ ದಂಡೇ ಹರಿದು ಬಂತು. ಎಲ್ಲರೂ ಶ್ರೀಕೃಷ್ಣನ ದರ್ಶನವನ್ನು ಪಡೆದು, ಪ್ರಾರ್ಥಿಸಿ,…

Read More

ವಿದ್ಯಾರ್ಥಿನಿಯರು ಮುಖ್ಯ ವಾಹಿನಿಗೆ ಬನ್ನಿ ; ಡಾ. ಎಂ ಪ್ರಭು

ಚಾಮರಾಜನಗರ ; ವಿದ್ಯಾರ್ಥಿನಿಯರು ವಿದ್ಯಾಭ್ಯಾಸದ ಜೊತೆಗೆ ಕ್ರೀಡೆಗೆ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ಜೆಎಸ್ಎಸ್ ಮಹಿಳಾ ಕಾಲೇಜು ಪ್ರಾಂಶುಪಾಲ ಡಾ ಎಂ ಪ್ರಭು ಕರೆ ನೀಡಿದರುನಗರದ ಜೋಡಿ ರಸ್ತೆಯಲ್ಲಿರುವ ಜೆಎಸ್ಎಸ್ ಮಹಿಳಾ ಕಾಲೇಜು ದೈಹಿಕ ಶಿಕ್ಷಣ ವಿಭಾಗ ಶುಕ್ರವಾರ ರ‍್ಪಡಿಸಿದ ರಾಷ್ಟ್ರೀಯ ಕ್ರೀಡಾ ದಿನಚರಣೆ ಕರ‍್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಜಗದ್ಗುರು ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಆಶರ‍್ವಾದದೊಂದಿಗೆ ಶಿಕ್ಷಣ ಸಂಸ್ಥೆ ವಿದ್ಯರ‍್ಥಿಗಳು ಮುಖ್ಯ ವಾಹಿನಿಗೆ ಬರಲು ವಿದ್ಯಾಭ್ಯಾಸದ ಜೊತೆಗೆ ಸಾಂಸ್ಕೃತಿಕ ,ಕ್ರೀಡೆ, ಎನ್ಎಸ್ಎಸ್ ಹಾಗೂ ಧರ‍್ಮಿಕ….

Read More

ಎನ್.ಐ.ಇ ನಲ್ಲಿ ನಡೆದ ಬೃಹತ್ ರಕ್ತದಾನ ಶಿಬಿರ; 465 ಯುನಿಟ್ ರಕ್ತ ಸಂಗ್ರಹ

ಮೈಸೂರು ; ನಗರದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿAಗ್, ಎನ್.ಎಸ್.ಎಸ್, ಯೂತ್ ರೆಡ್ ಕ್ರಾಸ್ ಮತ್ತು ರೋಟರಿ ಕ್ಲಬ್ ಮೈಸೂರು ಸಹಯೋಗದೊಂದಿಗೆ ಸಂಸ್ಥೆಯ ದಕ್ಷಿಣ ಮತ್ತು ಉತ್ತರ ಎರಡೂ ಕ್ಯಾಂಪಸ್‌ಗಳಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.ವಿದ್ಯಾರ್ಥಿಗಳು ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ಸಕ್ರಿಯ ಭಾಗವಹಿಸುವಿಕೆಯೊಂದಿಗೆ ಒಟ್ಟು 465 ಯುನಿಟ್ ರಕ್ತ ಸಂಗ್ರಹವಾಗಿದೆ.ದಕ್ಷಿಣ ಕ್ಯಾಂಪಸ್‌ನಲ್ಲಿ ಪ್ರಾಂಶುಪಾಲ ಡಾ. ನಾಗೇಂದ್ರ ಪರಾಶರ್ ಹಾಗೂ ಉತ್ತರ ಕ್ಯಾಂಪಸ್‌ನಲ್ಲಿ ಉಪ ಪ್ರಾಂಶುಪಾಲ ಡಾ. ಲಿಖಿತ್ ಕುಮಾರ್ ಎಂ.ವಿ ಸಿಬ್ಬಂದಿ ಸಂಯೋಜಕರು ಮತ್ತು…

Read More

ಶ್ರೀರಾಗ ಕಲಾತಂಡದಿ0ದ ದಾಸರ ಗೀತಗಾಯನ

ಮೈಸೂರು; ನಗರದ ನಾರಾಯಣಶಾಸ್ತಿç ರಸ್ತೆಯಲ್ಲಿರುವ ಸುಬ್ಬರಾಯನಕೆರೆ,ಶ್ರೀ ರಾಘವೇಂದ್ರಸ್ವಾಮಿ ಸನ್ನಿಧಿಯಲ್ಲಿ ಶ್ರೀರಾಗ ಕಲಾತಂಡದಿAದ ವಿದೂಷಿ ಡಾ. ಅನುಸೂಯ ಸುದರ್ಶನ್ ಅವರ ಶಿಷ್ಯರಾದ ವಿದೂಷಿ ಕಾವ್ಯಶ್ರೀ ಆರ್‌ರಾವ್‌ಅವರು ಸುಪ್ರಸಿದ್ಧ “ದಾಸರ ಗೀತೆಗಳ ಗಾಯನ” ಕಾರ್ಯಕ್ರಮ ನಡೆಸಿಕೊಟ್ಟರು.ಪಕವಾದ್ಯ ಸಹಕಾರ ವಿದ್ವಾನ್ ಶ್ರೀಕಾಂತ್ ಆರ್, ಪಿಟೀಲು ವಿದ್ವಾನ್‌ಕಿರಣ್‌ಕುಮಾರ್‌ಎಂ.ಜೆ ಮೃದಂಗ ಸಹಕಾರ ನೀಡಿದರು.ಗಾಯಕಿ ವಿದೂಷಿ ಕಾವ್ಯಶ್ರೀ ಆರ್‌ರಾವ್ ಅವರು ದಾಸರ ಸುಪ್ರಸಿದ್ಧ 20 ಕ್ಕೂ ಹೆಚ್ಚು ದೇವರನಾಮಗಳನ್ನು ಹಾಡಿ ಪ್ರೇಕ್ಷಕರನ್ನು ಭಕ್ತಿಸಾಗದರಲ್ಲಿ ತನ್ಮಯಗೊಳಿಸಿದರು.

Read More

ನೀರಿನ ಮಹತ್ವ ಹಾಗೂ ನೀರನ್ನು ಸಂರಕ್ಷಣೆ ಕುರಿತು ಯೋಗದ ಮೂಲಕ ಸಂದೇಶ ಸಾರಿ ದಾಖಲೆ ಮಾಡಿದ ಯೋಗಪಟುಗಳು

ಮೈಸೂರು: ನೀರಿನ ಮಹತ್ವ ಹಾಗೂ ನೀರನ್ನು ಸಂರಕ್ಷಣೆ ಮಾಡಬೇಕಾಗಿರುವ ಮಹತ್ವದ ಸಂದೇಶವನ್ನು ಸಾರುವ ಯೋಗಾಸನಗಳನ್ನು ಮಾಡಿದ ಮೈಸೂರಿನ 37 ಯೋಗ ಪಟುಗಳು ‘ಆಸ್ಕರ್ ಬುಕ್ ಆಫ್ ರೆಕಾರ್ಡ್’ ಮಾಡಿದ್ದಾರೆ.ಮೈಸೂರಿನ ವಿವೇಕಾನಂದ ಯೋಗ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ಸಹಯೋಗದೊಂದಿಗೆ ನೀರಿನ ಸಂರಕ್ಷಣೆಯ ಸಂದೇಶದ ಮೂಲಕ ನೀರಿನ ಮಹತ್ವ ಸಾರುವ ವಿಶಿಷ್ಟ ಯೋಗದ ಮೂಲಕ ‘ಆಸ್ಕರ್ ಬುಕ್ ಆಫ್ ರೆಕಾರ್ಡ್’ ಗೌರವ ಪಡೆದಿದ್ದಾರೆ. ಯೋಗ ಶಿಸ್ತು ಮತ್ತು ಏಕಾಗ್ರತೆ ಸಮತೋಲನದ ಪ್ರದರ್ಶನದ ಮೂಲಕ ಈ ಸಾಧನೆ ಮಾಡಿರುವ ಯೋಗ…

Read More

ಶ್ರೀ ಕೃಷ್ಣ ಅಧರ್ಮದ ನಾಶ, ಧರ್ಮದ ಮರು ಸ್ಥಾಪನೆಗೆ ಅವತರಿಸಿದ ಮಾನವತಾವಾದಿ: ಹೆಚ್ ಎನ್ ಸುಧಾಕರ್ 

ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಪಿರಿಯಾಪಟ್ಟಣ: ಭೂಮಿ ಮೇಲೆ ಅಧರ್ಮ ನಾಶ ಮತ್ತು ಧರ್ಮದ ಸ್ಥಾಪನೆಗಾಗಿ ಜನ್ಮ ತಾಳಿದವನೇ ಶ್ರೀಕೃಷ್ಣ ಪರಮಾತ್ಮ ಎಂದು ಪಿರಿಯಾಪಟ್ಟಣ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ಹೆಚ್ ಎನ್ ಸುಧಾಕರ್ ತಿಳಿಸಿದರು. ಪಟ್ಟಣದ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು  ಧರ್ಮದ ಅವನತಿ ಕಾಲದಲ್ಲಿ ಪುನಃ ಧರ್ಮ ಸ್ಥಾಪನೆಗಾಗಿ ದೇವರೇ ಅವತಾರ ಪುರುಷನಾಗಿ ಆಗಮಿಸಿ ಧರ್ಮ ಸಂಸ್ಥಾಪನೆಗೆ ಮುಂದಾಗುತ್ತಾರೆ ಎಂಬುದಕ್ಕೆ ಶ್ರೀಕೃಷ್ಣ ಅವತಾರ ಒಂದಾಗಿದೆ….

Read More

ಕಲಿಯುಗದಲ್ಲಿ ಮಹಾಭಾರತದ ಜ್ಞಾನ ಅಗತ್ಯ ; ವಿಧಾನಪರಿಷತ್ ಸದಸ್ಯ ಆರ್.ರಘು ಕೌಟಿಲ್ಯ

ಮೈಸೂರು: ಧರ್ಮ ಮತ್ತು ಅಧರ್ಮದ ನಡುವಿನ ಸಂಘರ್ಷವನ್ನು ಅರ್ಥೈಸಿಕೊಳ್ಳಲು ಕಲಿಯುಗದಲ್ಲಿರುವ ಪ್ರತಿಯೊಬ್ಬರೂ ಮಹಾಭಾರತವನ್ನು ತಿಳಿಯುವುದು ಅಗತ್ಯವಾಗಿದೆ ಎಂದು ವಿಧಾನಪರಿಷತ್ ಸದಸ್ಯ ಆರ್.ರಘು ಕೌಟಿಲ್ಯ ಹೇಳಿದರು.ಶುಕ್ರವಾರ ನಗರದ ಕಲಾಮಂದಿರದ ಕಿರುರಂಗಮAದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮೈಸೂರು ಮಹಾನಗರ ಪಾಲಿಕೆ ಹಾಗೂ ಶ್ರೀ ಕೃಷ್ಣ ಜಯಂತ್ಯೋತ್ಸವ ಸಮಿತಿ ವತಿಯಿಂದ ಶ್ರೀ ಕೃಷ್ಣ ಜಯಂತಿಯ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು,ಭಗವಂತನ ಸ್ವರೂಪಿಯಾಗಿ ಅವತರಿಸಿದ ಶ್ರೀಕೃಷ್ಣನು ತಾಯಿಯ ಗರ್ಭದಲ್ಲಿದ್ದಾಗಲೇ ಜಗತ್ತಿಗೆ ತನ್ನ ಸಂದೇಶ ನೀಡಲು ಪ್ರಾರಂಭಿಸಿದನು. ಬಾಲ್ಯದಲ್ಲಿಯೇ ತನ್ನ ಬಾಯಿ…

Read More

ಜೆಎಸ್‌ಎಸ್ ಅರ್ಬನ್ ಹಾತ್‌ನಲ್ಲಿ ಕಣ್ಮನ ಸೆಳೆಯುತ್ತಿದೆ ರಾಜ್ಯ ಕೈಮಗ್ಗ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ

ಗೌರಿ-ಗಣೇಶ ಹಬ್ಬಕ್ಕೆ ಕೈಮಗ್ಗದ ಮೆರುಗು ಮೈಸೂರು: ಗೌರಿ-ಗಣೇಶ ಹಬ್ಬದ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡುವಂತೆ ಮೈಸೂರಿನ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿರುವ ಜೆಎಸ್‌ಎಸ್ ಮೈಸೂರು ಅರ್ಬನ್ ಹಾತ್‌ನಲ್ಲಿ ಆಯೋಜಿಸಲಾಗಿರುವ “ಹಾತ್ ಕರ್ಗ್ 2026, ನನ್ನ ಕೈಮಗ್ಗ ನನ್ನ ಹೆಮ್ಮೆ” ರಾಜ್ಯ ಕೈಮಗ್ಗ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಎಲ್ಲರನ್ನು ಕೈಬೀಸಿ ಕರೆದು ಕಣ್ಮನ ಸೆಳೆಯುತ್ತಿದೆ.ನವದೆಹಲಿಯ ಅಭಿವೃದ್ಧಿ ಆಯುಕ್ತರು (ಕೈಮಗ್ಗ), ಜವಳಿ ಸಚಿವಾಲಯದ ಸಹಯೋಗದಲ್ಲಿ, ಜವಳಿ ಅಭಿವೃದ್ಧಿ ಆಯುಕ್ತರು ಹಾಗೂ ಕೈಮಗ್ಗ ಮತ್ತು ಜವಳಿ ಇಲಾಖೆ, ಬೆಂಗಳೂರು, ಕರ್ನಾಟಕ…

Read More

ಯುವ ದಸರಾ ಉದ್ಘಾಟನೆಗೆ ಖ್ಯಾತ ನಟ, ನೃತ್ಯ ನಿರ್ದೇಶಕ ಪ್ರಭುದೇವ ಅವರಿಗೆ ಅಧಿಕೃತ ಆಹ್ವಾನ

ಮೈಸೂರು: ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾದ ಪ್ರಮುಖ ಆಕರ್ಷಣೆಯಲ್ಲಿ ಒಂದಾದ ಯುವ ದಸರಾ 2026ರ ಉದ್ಘಾಟನಾ ಕಾರ್ಯಕ್ರಮಕ್ಕೆ ಭಾರತದ ಖ್ಯಾತ ನೃತ್ಯಗಾರ, ನೃತ್ಯ ನಿರ್ದೇಶಕ, ನಟ ಹಾಗೂ ಚಿತ್ರ ನಿರ್ದೇಶಕರಾದ ಪ್ರಭುದೇವ ಅವರನ್ನು ಅಧಿಕೃತವಾಗಿ ಆಹ್ವಾನಿಸಲಾಗಿದೆ.ಯುವ ದಸರಾ ಸಮಿತಿಯ ಕಾರ್ಯಧ್ಯಕ್ಷ ಸೋಮಶೇಖರ್, ಕಾರ್ಯದರ್ಶಿಗಳಾದ ಅರುಣ್ ಹಾಗೂ ಸತ್ಯಮೂರ್ತಿ ಅವರು ಚೆನ್ನೆöÊನಲ್ಲಿರುವ ಪ್ರಭುದೇವ ಅವರ ನಿವಾಸಕ್ಕೆ ತೆರಳಿ, ಮೈಸೂರು ದಸರಾದಲ್ಲಿ ನಡೆಯುವ ಯುವ ದಸರಾ ಕಾರ್ಯಕ್ರಮಕ್ಕೆ ಆಗಮಿಸುವಂತೆ ಅಧಿಕೃತವಾಗಿ ಆಹ್ವಾನಿಸಿದರು.ಆಹ್ವಾನವನ್ನು ಸಂತೋಷದಿAದ ಸ್ವೀಕರಿಸಿದ ಪ್ರಭುದೇವ ಅವರು, ಯುವ…

Read More

ರಾಜವಂಶಸ್ಥರ ಖಾಸಗಿ ದಸರಾ ಆಚರಣೆಗೆ ಪಟ್ಟದ ಆನೆಯಾಗಿ ಶ್ರೀಕಂಠ ಹಾಗೂ ನಿಶಾನೆ ಆನೆಯಾಗಿ ಏಕಲವ್ಯ ಆಯ್ಕೆ

*ಆನೆಗಳನ್ನು ಆಯ್ಕೆ ಮಾಡಿದ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ಮೈಸೂರು: ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾಗೆ ಒಚಿದೆಡೆ ಜಿಲ್ಲಾಡಳಿತ ಭರ್ಜರಿ ಸಿದ್ಧತೆಯನ್ನು ನಡೆಸುತ್ತಿದ್ದರೆ, ಮತ್ತೊಂದೆಡೆ ಯದುವಂಶದ ರಾಜ ವಂಶಸ್ಥರು ಖಾಸಗಿಯಾಗಿ ದಸರಾದ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವುದಕ್ಕಾಗಿ ಸಿದ್ಧತೆ ಆರಂಭಿಸಿದ್ದಾರೆ. ಅವರ ಧಾರ್ಮಿಕ ಆಚರಣೆಯ ಪಟ್ಟದ ಆನೆಯಾಗಿ ಶ್ರೀಕಂಠ ಹಾಗೂ ನಿಶಾನೆ ಆನೆಯಾಗಿ ಏಕಲವ್ಯ ಆನೆಯನ್ನು ರಾಜಮಾತೆ ಪ್ರಮೋದದೇವಿ ಒಡೆಯರು ಇದೀಗ ಆಯ್ಕೆಮಾಡಿದ್ದಾರೆ.ರಾಜ ವಂಶಸ್ಥರಾದ ಯದುವೀರ್ ಶ್ರೀಕಂಠದ ದತ್ತ ನರಸಿಂಹರಾಜ ಒಡೆಯರ್ ಅವರು ದಸರಾದ ನವರಾತ್ರಿ ಸಂದರ್ಭದಲ್ಲಿ ಧಾರ್ಮಿಕ ಮಹತ್ವವುಳ್ಳ…

Read More