
ಮೈಸೂರು; ನಗರದ ನಾರಾಯಣಶಾಸ್ತಿç ರಸ್ತೆಯಲ್ಲಿರುವ ಸುಬ್ಬರಾಯನಕೆರೆ,ಶ್ರೀ ರಾಘವೇಂದ್ರಸ್ವಾಮಿ ಸನ್ನಿಧಿಯಲ್ಲಿ ಶ್ರೀರಾಗ ಕಲಾತಂಡದಿAದ ವಿದೂಷಿ ಡಾ. ಅನುಸೂಯ ಸುದರ್ಶನ್ ಅವರ ಶಿಷ್ಯರಾದ ವಿದೂಷಿ ಕಾವ್ಯಶ್ರೀ ಆರ್ರಾವ್ಅವರು ಸುಪ್ರಸಿದ್ಧ “ದಾಸರ ಗೀತೆಗಳ ಗಾಯನ” ಕಾರ್ಯಕ್ರಮ ನಡೆಸಿಕೊಟ್ಟರು.
ಪಕವಾದ್ಯ ಸಹಕಾರ ವಿದ್ವಾನ್ ಶ್ರೀಕಾಂತ್ ಆರ್, ಪಿಟೀಲು ವಿದ್ವಾನ್ಕಿರಣ್ಕುಮಾರ್ಎಂ.ಜೆ ಮೃದಂಗ ಸಹಕಾರ ನೀಡಿದರು.ಗಾಯಕಿ ವಿದೂಷಿ ಕಾವ್ಯಶ್ರೀ ಆರ್ರಾವ್ ಅವರು ದಾಸರ ಸುಪ್ರಸಿದ್ಧ 20 ಕ್ಕೂ ಹೆಚ್ಚು ದೇವರನಾಮಗಳನ್ನು ಹಾಡಿ ಪ್ರೇಕ್ಷಕರನ್ನು ಭಕ್ತಿಸಾಗದರಲ್ಲಿ ತನ್ಮಯಗೊಳಿಸಿದರು.