Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಹಿಂದೂ ಜಾಗರಣ ವೇದಿಕೆ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನ


ಮೈಸೂರು: ಹಿಂದೂ ಜಾಗರಣ ವೇದಿಕೆ ವತಿಯಿಂದ 79ನೇ ಭಾರತ ಸ್ವಾತಂತ್ರೊ÷್ಯÃತ್ಸವದ ಹಾಗೂ ಅಖಂಡ ಭಾರತ ಸಂಕಲ್ಪ ದಿನ ಅಂಗವಾಗಿ ಆಗಸ್ಟ್ 14ರಂದು ಸಂಜೆ 6 ಗಂಟೆಗೆ
ಜಿಲ್ಲಾ ಮಟ್ಟದ ಪಂಜಿನ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ನಗರದ ಬಸ್ ನಿಲ್ದಾಣ ಮುಂಭಾಗ ಹಾಗೂ ಜಗಮೋಹನ ಅರಮನೆಯ ಸುತ್ತಮುತ್ತ ಯುವಕರಿಗೆ ಕರಪತ್ರ ನೀಡಿ ಆಹ್ವಾನ ನೀಡಲಾಯಿತು.
ಆ. 14 ರಂದು ಸಂಜೆ 6 ಗಂಟೆಗೆ ಹಳೆ ಆರ್‌ಎಂಸಿ ವೃತ್ತದಲ್ಲಿರುವ ಮಹಾ ಗಣಪತಿ ದೇವಸ್ಥಾನದಿಂದ ಮೆರವಣಿಗೆಪ್ರಾರಂಭಗೊAಡು ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ವರೆಗೂ ಬೃಹತ್ ಪಂಜಿನ ಮೆರವಣಿಗೆ ಮುಕ್ತಾಯಗೊಳ್ಳುವುದು
ನಂತರ ನಡೆಯುವ ಸಭಾ ಕಾರ್ಯಕ್ರಮದ ದಿಕ್ಸೂಚಿ ಭಾಷಣಕಾರರಾಗಿ ಹಿಂದೂ ಜಾಗರಣ ವೇದಿಕೆಯ ಪ್ರಾಂತ ಸಂಚಾಲಕರಾದ ದೋ. ಕೇಶವಮೂರ್ತಿ ನೆರವೇರಿಸಲಿದ್ದಾರೆ.
ಪ್ರತಿಯೊಬ್ಬರು ಪಾಲ್ಗೊಂಡು ಅಖಂಡ ಭಾರತ ನಿರ್ಮಾಣದ ಸಂಕಲ್ಪ ಮಾಡೋಣ ಬಲಿಷ್ಠ ಹಿಂದೂ ರಾಷ್ಟç ನಿರ್ಮಾಣದ ಸಂಕಲ್ಪ ಮಾಡೋಣ ಎಂದು ಸಂಘಟನೆಯ ಸಹ ಸಂಯೋಜಕ ಸಂದೇಶ್ ತಿಳಿಸಿದರು
ಈ ಸಂದರ್ಭದಲ್ಲಿ ನಗರ ಪಾಲಿಕೆಯ ಮಾಜಿ ಸದಸ್ಯ ಜಗದೀಶ್, ಮುಖಂಡರುಗಳಾದ ಪ್ರಮೋದ್ ಗೌಡ, ವಕೀಲ ಶಿವರಾಜ್, ಅಭಿಷೇಕ್ ಗೌಡ, ವಸಂತ್ ಕುಮಾರ್, ಚಂದ ಸ್ವಾಮಿ, ಶ್ರೀನಿಧಿ, ಅಜಯ್ ಹಾಗೂ ಇನ್ನಿತರರು ಹಾಜರಿದ್ದರು.