ಅವ್ಶೆಜ್ಞಾನಿಕ ಆದೇಶ ನೀಡುತ್ತಿರುವ ಕಾವೇರಿ ನೀರು ನಿರ್ವಹಣಾ ಮಂಡಳಿಯನ್ನು ರದ್ದುಪಡಿಸಿ; ಎಸ್.ಜಯಪ್ರಕಾಶ್
ಮೈಸೂರು; ಅವ್ಶೆಜ್ಞಾನಿಕವಾಗಿ ಕರ್ನಾಟಕ ರಾಜ್ಯಕ್ಕೆ ಆದೇಶಗಳನ್ನು ನೀಡುತ್ತಿರುವ ಕಾವೇರಿ ನೀರು ನಿರ್ವಹಣಾ ಮಂಡಳಿಯನ್ನು ಕೂಡಲೇ ಕೇಂದ್ರ ಸರ್ಕಾರ, ಸುಪ್ರೀಂಕೋರ್ಟ್ ರದ್ದುಪಡಿಸಬೇಕು ಎಂದು ಕಾವೇರಿ ಕ್ರಿಯಾ ಸಮಿತಿಯ ಅಧ್ಯಕ್ಷ ಎಸ್.ಜಯಪ್ರಕಾಶ್ (ಜೆಪಿ) ಆಗ್ರಹಿಸಿದರು. ನಗರದ ಪುರಭವನದ ಮುಂದೆ ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ, ಕಾವೇರಿ ಕ್ರಿಯಾಸಮಿತಿಯಿಂದ ನಡೆಸಿದ ಮೌನ ಪ್ರತಿಭಟನಾ ಧರಣಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಾವೇರಿ ನೀರು ನಿರ್ವಹಣಾ ಮಂಡಳಿ ಪ್ರಾರಂಭ ಆದಾಗಿನಿಂದ ತಮಿಳುನಾಡಿನ ಪರ ಏಕ ಪಕ್ಷಿಯವಾಗಿ ಅವೈಜ್ಞಾನಿಕ ತೀರ್ಪನ್ನು ನೀಡುತ್ತಾ ಬಂದಿದೆ….