Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಡಾ.ಹೆಚ್.ಸಿ.ಮಹದೇವಪ್ಪರಿಗೆ ಸಚಿವ ಸ್ಥಾನ ನೀಡಲು ಆಗ್ರಹಿಸಿ ವಿವಿಧ ಪ್ರಗತಿಪರ, ದಲಿತ ಸಂಘಟನೆಗಳಿ0ದ ಬೃಹತ್ ಪ್ರತಿಭಟನೆ


ಮೈಸೂರು: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸಚಿವ ಸಂಪುಟದಲ್ಲಿ ಹಿರಿಯ ಶಾಸಕ ಡಾ.ಎಚ್.ಸಿ.ಮಹದೇವಪ್ಪ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿ ಪ್ರಗತಿಪರ ಸಂಘಟನೆಗಳು,ದಲಿತ ಸಂಘಟನೆಗಳು,ಡಾ.ಎಚ್.ಸಿ.ಮಹದೇವಪ್ಪ ಅಭಿಮಾನಿಗಳ ಬಳಗದಿಂದ ಗುರುವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಗರದ ಪುರಭವನ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಹಿರಿಯ ದಲಿತ ನಾಯಕರಾದ ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪಗೆ ಸಚಿವ ನೀಡಲು ಆಗ್ರಹಿಸಿ ನಾನಾ ಘೋಷಣೆಗಳನ್ನು ಕೂಗಿದರು. ನಂತರ,ಅಲ್ಲಿAದ ಹೊರಟು ಚಾಮರಾಜ ಒಡೆಯರ್‌ವೃತ್ತದಲ್ಲಿ ಕೆಲಕಾಲ ಮಾನವಸರಪಳಿ ನಿರ್ಮಿಸಿ ರಸ್ತೆತಡೆ ನಡೆಸಿದರು. ಇದರಿಂದಾಗಿ ಕೆಲಕಾಲ ಸಂಚಾರ ಅಸ್ತವ್ಯಸ್ತವಾಯಿತು. ದಲಿತಸಮುದಾಯಕ್ಕೆ ಸೇರಿದ ಡಾ.ಎಚ್.ಸಿ.ಮಹದೇವಪ್ಪ ದಲಿತ ಸಮುದಾಯದ ಹಿರಿಯ ನಾಯಕರು. 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಅತ್ಯಧಿಕ ಸ್ಥಾನಗಳ ಗೆಲುವಿಗೆ ಪ್ರಮುಖ ಕಾರಣಕರ್ತರಾಗಿದ್ದ ಅವರು ಮುಖ್ಯಮಂತ್ರಿ ಸ್ಥಾನ ಅಲಂಕರಿಸುವ ಸಾಮರ್ಥ್ಯ,ಪ್ರತಿಭೆ ಹೊಂದಿದ್ದರೂ ಸಂಪುಟದಲ್ಲಿ ಅವಕಾಶ ಕೊಡದೆ ಕಡೆಗಣಿಸಿರುವುದು ಖಂಡನೀಯ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಲೋಕೋಪಯೋಗಿ ಇಲಾಖೆ,ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿ ಮಾಡಿದ ಅಭಿವೃದ್ದಿ ಕಾರ್ಯಗಳು ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಎಸ್‌ಸಿಎಸ್‌ಪಿ-ಟಿಎಸ್‌ಪಿ ಅನುದಾನವನ್ನು ಸಮರ್ಪಕವಾಗಿ ಬಳಸಿ ದಲಿತರ ಕಲ್ಯಾಣಕ್ಕೆ ಕಾರಣಕರ್ತರಾಗಿದ್ದಾರೆ. ಹೀಗಿದ್ದರೂ, ಸಂಪುಟದಲ್ಲಿ ಪ್ರಾತಿನಿಧ್ಯ ನೀಡದೆ ಇರುವುದು ದಲಿತ ಸಮುದಾಯಕ್ಕೆ ಮಾಡಿದ ದೊಡ್ಡ ಅನ್ಯಾಯವಾಗಿದೆ ಎಂದು ಕಿಡಿಕಾರಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪುತ್ರ ವ್ಯಾಮೋಹದಿಂದಾಗಿ ತಮ್ಮ ಆಪ್ತರನ್ನು ಕೈ ಬಿಟ್ಟಿದ್ದಾರೆ. ಸಿದ್ದರಾಮಯ್ಯ ಅವರ ಹಿಂದೆ ದಲಿತ ಸಮುದಾಯ ಇರುವುದಕ್ಕೆ ಮಹದೇವಪ್ಪ ಕಾರಣ. ಇಂದು ಸ್ವಾರ್ಥಕ್ಕಾಗಿ ಸಿದ್ದರಾಮಯ್ಯ ಮೌನವಹಿಸಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿ, ಸರಿಯಾದ ತೀರ್ಮಾನ ಮಾಡದಿದ್ದಲ್ಲಿ, ಮುಂದೆ ದೊಡ್ಡ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸ್ವಾತಂತ್ರ÷್ಯ ಬಂದ ದಿನದಿಂದಲೂ ಕಾಂಗ್ರೆಸ್‌ನ್ನು ದಲಿತ ಸಮುದಾಯ ಬೆಂಬಲಿಸಿಕೊAಡು ಬರುತ್ತಿದೆ. ಮಲ್ಲಿಕಾರ್ಜುನ ಖರ್ಗೆ,ಡಾ.ಜಿ.ಪರಮೇಶ್ವರಗೆ ಮುಖ್ಯಮಂತ್ರಿ ಸ್ಥಾನ ತಪ್ಪಿಸಿತು. ವಿ.ಶ್ರೀನಿವಾಸಪ್ರಸಾದ್ ಅವರನ್ನ ಕೈಬಿಟ್ಟು ದಲಿತರಿಗೆ ಅನ್ಯಾಯ ಮಾಡಿತ್ತು.ಈಗ ಮಹದೇವಪ್ಪ ಅವರನ್ನು ಕೂಡ ಪರಿಗಣಿಸದೆ ಸಮಾಜವನ್ನು ಹತ್ತಿಕ್ಕುವ ಕೆಲಸ ಮಾಡಿದೆ ಎಂದು ದೂರಿದರು.
ದಲಿತ ಸಮುದಾಯಕ್ಕೆ ಅನ್ಯಾಯ ಮಾಡಿಕೊಂಡು ಬಂದಿದ್ದರೂ ಕಾಂಗ್ರೆಸ್ ಪಕ್ಷಕ್ಕೆ ದಲಿತರು ನಿಷ್ಠೆಯಿಂದ ಇದ್ದಾರೆ. ಈ ಸಮಾಜವನ್ನು ಮತಬ್ಯಾಂಕ್ ಆಗಿ ನೋಡದೆ ಅಧಿಕಾರವನ್ನು ನೀಡಬೇಕು.ಹಳೆಯ ಮೈಸೂರು ಪ್ರಾಂತ್ಯದ ಹಿರಿಯ ನಾಯಕರಾಗಿರುವ ಡಾ.ಎಚ್‌ಸಿಎಂಗೆ ಪ್ರಾತಿನಿಧ್ಯ ಕೊಡಲು ತೀರ್ಮಾನ ಮಾಡಿದ್ದರೆ ಚುನಾವಣೆಯಲ್ಲಿ ತಕ್ಕ ಶಾಸ್ತಿ ಮಾಡಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಮೈಮುಲ್ ಮಾಜಿ ಅಧ್ಯಕ್ಷ ಆರ್.ಚೆಲುವರಾಜು, ದೇವಲಾಪುರ ಸಿದ್ದರಾಜು, ಮರಿದೇವಯ್ಯ, ತುಂಬಸೋಗೆ ನಾಗಣ್ಣ, ಚಿನ್ನಣ್ಣ,ಜ್ಞಾನಪ್ರಕಾಶ್, ಬಸವರಾಜು, ಕುಮಾರ್ ಒಂಟಿಕೊಪ್ಪಲು, ರವಿಕೊಳಘಟ್ಟ, ನಂದೀಶ್,ಲೇಔಟ್ ರವಿ, ಎಚ್.ಎಸ್.ದಿನೇಶ್, ಕೆ.ಬಿ.ಸ್ವಾಮಿ, ಇಂದನ್‌ಬಾಬು, ಕೆಂಪಣ್ಣ, ನಾಡನಹಳ್ಳಿ ಪ್ರಕಾಶ್, ಶೇಖರ್,ಮಂಜು, ಸಂಪತ್, ಕುಕ್ಕೂರುಗಣೇಶ್, ಹೊನ್ನನಾಯಕ,ರಾಮಲಿಂಗ, ವೀಣಾ, ಚಂದ್ರೇಗೌಡ, ಸಾಗರ್,ಅನುಪ್, ಅಶೋಕಪುರಂ ರಾಮಸ್ವಾಮಿ, ಇಟ್ನಾರಾಜಣ್ಣ ಮತ್ತಿತರರು ಭಾಗವಹಿಸಿದ್ದರು.