Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಶಾಸಕರಿಂದ 2.54 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಚಾಲನೆ


ಮೈಸೂರು; ಇಲ್ಲಿನ ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕ ಕೆ. ಹರೀಶ್ ಗೌಡ ಅವರು ಗುರುವಾರ ಕ್ಷೇತ್ರದ ಎರಡು ವಾರ್ಡ್ಗಳಲ್ಲಿ ಒಟ್ಟು 2 ಕೋಟಿ 54 ಲಕ್ಷ ರೂ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.
ಮೈಸೂರು ಮಹಾನಗರ ಪಾಲಿಕೆಯ ವಲಯ ಕಚೇರಿ-4 ವ್ಯಾಪ್ತಿಯ ಗೋಕುಲಂ ವಾರ್ಡ್ನಲ್ಲಿ ನಗರಪಾಲಿಕೆ ಅನುದಾನದಡಿ 2 ಕೋಟಿ ರೂವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ, ಗೋಕುಲಂ ಕಾಂಟೂರ್ ರಸ್ತೆಯ ಸಿದ್ದಲಿಂಗೇಶ್ವರ ಗ್ಯಾಸ್ ಏಜೆನ್ಸಿಯಿಂದ 1ನೇ ಮುಖ್ಯ ರಸ್ತೆಯ ಡಾ. ಪುನೀತ್ ರಾಜ್‌ಕುಮಾರ್ ವೃತ್ತದವರೆಗೆ Uಉಆ ಕಾಮಗಾರಿಯಿಂದ ಹಾಳಾಗಿರುವ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕರು ತಿಳಿಸಿದರು. ಬಳಿಕ
ವಲಯ ಕಚೇರಿ-4 ವ್ಯಾಪ್ತಿಯ ವಿ.ವಿ. ಮೊಹಲ್ಲಾ ವಾರ್ಡ್ನಲ್ಲಿ Sಈಅ ವಿಶೇಷ ಅನುದಾನದಡಿ 54 ಲಕ್ಷ ರೂ ವೆಚ್ಚದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಯಿತು.
ಕಾಮಗಾರಿ ವಿವರ ವಿ.ವಿ. ಮೊಹಲ್ಲಾದ ನಳಪಾಕ್ ಹೋಟೆಲ್‌ನಿಂದ ಆದಿಪಂಪ ರಸ್ತೆವರೆಗೆ ಹಾಗೂ ಅಡ್ಡರಸ್ತೆಗಳಿಗೆ ಚರಂಡಿ ಮತ್ತು ಫುಟ್‌ಪಾತ್ ಅಭಿವೃದ್ಧಿ ಕಾಮಗಾರಿ ನಡೆಯಲಿದೆ.
ಚಾಮರಾಜ ಕ್ಷೇತ್ರದ ಪ್ರತಿ ರಸ್ತೆಯೂ ಉತ್ತಮವಾಗಬೇಕು. ಜನರ ಮೂಲಭೂತ ಸೌಕರ್ಯವೇ ನನ್ನ ಆದ್ಯತೆ. ಶೀಘ್ರವಾಗಿ ಗುಣಮಟ್ಟದ ಕಾಮಗಾರಿ ಪೂರ್ಣಗೊಳಿಸಲಾಗುವುದುಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಇಂದಿರಾ ಗಾಂಧಿ ಬ್ಲಾಕ್ ಅಧ್ಯಕ್ಷ ರವಿ ಮಂಚೇಗೌಡನ ಕೊಪ್ಪಲು, ಮಾಯಮ್ಮ,ವಾರ್ಡ್ ಅಧ್ಯಕ್ಷ ದಿನೇಶ್, ಜಯಪ್ರಕಾಶ್ , ಗಿರಿಜಾಂಬ,ಗಾಯತ್ರಿ ನಾರಾಯಣಗೌಡ, ಯುವ ಕಾಂಗ್ರೆಸ್ ಅಧ್ಯಕ್ಷ ನಿಶಾಂತ್ ಪಟೇಲ್,ಮುಖಂಡರಾದ ಸುಶೀಲ ಮರೀಗೌಡ ,ಲಾಯರ್ ಶ್ರೀನಿವಾಸ್, ಟೆಂಟ್ ಶ್ರೀನಿವಾಸ್, ಬಸವರಾಜು, ರೇಖಾಮ್ಮ , ಲಕ್ಷಿ÷್ಮÃ ಶಿವರಾಜು, ಇಮಾಂಶು, ಮಾಜಿ ನಗರ ಪಾಲಿಕೆ ಸದಸ್ಯರಾದ ರಮೇಶ್, ಮೋಹನ್,ತೇಜಸ್ ಗೌಡ, ಸೇರಿದಂತೆ ಕಾರ್ಯಕರ್ತರು ಮತ್ತು ಸ್ಥಳೀಯರು ಹಾಜರಿದ್ದರು.