
ಮೈಸೂರು; ಅವ್ಶೆಜ್ಞಾನಿಕವಾಗಿ ಕರ್ನಾಟಕ ರಾಜ್ಯಕ್ಕೆ ಆದೇಶಗಳನ್ನು ನೀಡುತ್ತಿರುವ ಕಾವೇರಿ ನೀರು ನಿರ್ವಹಣಾ ಮಂಡಳಿಯನ್ನು ಕೂಡಲೇ ಕೇಂದ್ರ ಸರ್ಕಾರ, ಸುಪ್ರೀಂಕೋರ್ಟ್ ರದ್ದುಪಡಿಸಬೇಕು ಎಂದು ಕಾವೇರಿ ಕ್ರಿಯಾ ಸಮಿತಿಯ ಅಧ್ಯಕ್ಷ ಎಸ್.ಜಯಪ್ರಕಾಶ್ (ಜೆಪಿ) ಆಗ್ರಹಿಸಿದರು.
ನಗರದ ಪುರಭವನದ ಮುಂದೆ ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ, ಕಾವೇರಿ ಕ್ರಿಯಾಸಮಿತಿಯಿಂದ ನಡೆಸಿದ ಮೌನ ಪ್ರತಿಭಟನಾ ಧರಣಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,
ಕಾವೇರಿ ನೀರು ನಿರ್ವಹಣಾ ಮಂಡಳಿ ಪ್ರಾರಂಭ ಆದಾಗಿನಿಂದ ತಮಿಳುನಾಡಿನ ಪರ ಏಕ ಪಕ್ಷಿಯವಾಗಿ ಅವೈಜ್ಞಾನಿಕ ತೀರ್ಪನ್ನು ನೀಡುತ್ತಾ ಬಂದಿದೆ. ಹಾಗಾಗಿ ಕಾವೇರಿ ನೀರು ನಿರ್ವಹಣಾ ಮಂಡಳಿಯನ್ನು ಈ ಕೂಡಲೇ ವಿಸರ್ಜನೆ ಮಾಡಬೇಕು. ನೂತನವಾಗಿ ಕಾವೇರಿ ನ್ಯಾಯಪೀಠವನ್ನು ಈ ಕೂಡಲೇ ರಚಿಸಿ, ಕರ್ನಾಟಕಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕೆಂದು ಒತ್ತಾಯಿಸಿದರು.
ರಾಜ್ಯ ಸರ್ಕಾರ ಮತ್ತು ರಾಜ್ಯದ ಎಲ್ಲಾ ಸಂಸದರು ಕಾರ್ಯ ಪ್ರವೃತ್ತರಾಗಿ ರಾಜ್ಯಕ್ಕೆ ನ್ಯಾಯ ಸಿಗುವಂತೆ ಕೆಲಸ ಮಾಡಬೇಕೆಂದು ಆಗ್ರಹಿಸಿದರು. ಇಂದಿನ ಮೌನ ಧರಣಿಯಲ್ಲಿ ಸಮಿತಿಯ ಮುಖಂಡರುಗಳಾದ ಮೂಗೂರು ನಂಜುAಡಸ್ವಾಮಿ, ಮೆಲ್ಲಳ್ಳಿ ಮಾದೇವಸ್ವಾಮಿ, ಕೃಷ್ಣೆಗೌಡ, ನಾಗರಾಜು, ಸುರೇಶ್ ಗೌಡ, ಪದ್ಮ, ಸೋಮೇಗೌಡ, ಶಿವಕುಮಾರ್, ಹನುಮಂತೇಗೌಡ, ಮಹೇಶ್ ಗೌಡ, ಸಿದ್ದೇಗೌಡ, ಸೋಮೇಗೌಡ, ಕಿಶೋರ್, ಬಾಲಕೃಷ್ಣ, ಸೋಮು, ವಿದ್ಯಾರ್ಥಿ ಮುಖಂಡರುಗಳಾದ ಶ್ರೀಕಾಂತ್, ರಾಜು, ಮಂಜು, ಕಿರಣ್, ಸಚಿಜಯ್, ಕುಮಾರ್ ಗೌಡ ಮುಂತಾದವರು ಭಾಗವಹಿಸಿದ್ದರು.