
ಮೈಸೂರು: ಮೈಸೂರಿನ ಶಂಕರ ಮಠದ ರಸ್ತಯಲ್ಲಿರುವ ಹೊಸ ಮಠದ ಚಿದಾನಂದ ಸ್ವಾಮೀಜಿ (79) ಅವರು ಗುರುವಾರ ಲಿಂಗೈಕ್ಯರಾಗಿದ್ದಾರೆ. ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಮೈಸೂರಿನ ಜೆಎಸ್ಎಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ ಇಂದು ಬೆಳಗ್ಗೆ 10:30ಕ್ಕೆ ಹೃದಯಾಘಾತದಿಂದ ನಿಧನರಾದರು.
ಮೈಸೂರು ಜಿಲ್ಲೆಯ ತಿ.. ನರಸೀಪುರ ತಾಲೂಕಿನ ಮುಡುಕನಪುರ ಗ್ರಾಮದ ಸಿದ್ಧಬಸವದೇವರು ಮತ್ತು ಮರಿಲಿಂಗಮ್ಮ ದಂಪತಿಯ ಮಗನಾಗಿ 1950 ಫೆಬ್ರುವರಿ 1 ರಂದು ಜನಿಸಿದ್ದ ಚಿದಾನಂದಸ್ವಾಮಿಯವರ ಪೂರ್ವಾಶ್ರಮದ ಹೆಸರು ಎಸ್. ಚಂದ್ರಶೇಖರಸ್ವಾಮಿ. ತಂದೆ ಶ್ರೀ ಸಿದ್ದಬಸವದೇವರು, ಗುರುಶಾಂತಸ್ವಾಮಿಗಳ ಪೂರ್ವಾಶ್ರಮದ ಅಣ್ಣ.
ಗುರುಶಾಂತಸ್ವಾಮಿಗಳು ತಮ್ಮ ನಂತರದ ಉತ್ತರಾಧಿಕಾರಿಯನ್ನಾಗಿ ಮಾಡುವ ದೃಷ್ಟಿಯಿಂದಲೇ 1957ರಲ್ಲಿ ಸಹೋದರನನ್ನು ಮೈಸೂರಿನ ಮಠಕ್ಕೆ ಕರೆತಂದಿದ್ದರು.
ಶ್ರೀ ಹೊಸಮಠ ಪೀಠದ 19ನೇಯ ಗುರುವರ ಶ್ರೀ ಗುರುಶಾಂತಸ್ವಾಮಿಗಳು (1920-1995) ಇಂದಿನ ಸಾರ್ವಜನಿಕ ಯುಗದ ವಾಸ್ತವಕ್ಕೆ ತಕ್ಕಂತೆ ಶ್ರೀಮಠದ ಉದ್ದೇಶಿತ ಕಾರ್ಯ ಗೌರವಗಳೆಲ್ಲವು ಜರುಗುವಂತಾಗಲು ಭದ್ರ ಬುನಾದಿ ಹಾಕಿ ಅವುಗಳನ್ನು ಮುನ್ನಡೆಸುವ ಜವಾಬ್ದಾರಿಯನ್ನು 1982ರಲ್ಲಿ ತಮ್ಮ ಉತ್ತರಾಧಿಕಾರಿ ಪ್ರಸ್ತುತ ಪೀಠಾಧಿಪತಿ ಚಿದಾನಂದ ಸ್ವಾಮೀಜಿ ಅವರಿಗೆ ವಹಿಸಿದ್ದರು. 1982ರಲ್ಲಿ ಶ್ರೀ ಹೊಸಮಠದ ಜವಾಬ್ದಾರಿಯ ನೊಗಕ್ಕೆ ಶ್ರೀ ಚಿದಾನಂದ ಸ್ವಾಮೀಜಿ ಹೆಗಲು ಕೊಟ್ಟಿದ್ದರು.
ಚಿದಾನಂದ ಸ್ವಾಮಿಗಳು ಪ್ರಾಥಮಿಕ ವಿದ್ಯಾಭ್ಯಾಸವನ್ನು ದಳವಾಯಿ ವಿದ್ಯಾಸಂಸ್ಥೆಯಲ್ಲಿ, ಮಾಧ್ಯಮಿಕ ಶಾಲಾ ವಿದ್ಯಾಭ್ಯಾಸವನ್ನು ಶಾರದಾವಿಲಾಸ ಮಾಧ್ಯಮಿಕ ಶಾಲೆಯಲ್ಲಿ ಹಾಗೂ ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಜೆ.ಎಸ್.ಎಸ್ ಪ್ರೌಢಶಾಲೆಯಲ್ಲಿ ಪೂರ್ಣಗೊಳಿಸಿದರು. ನಂತರ ಮಹಾರಾಜ ಕಾಲೇಜಿನಲ್ಲಿ ಪಿಯುಸಿಯಿಂದ ಬಿ.ಎ.ವರೆಗೆ ವ್ಯಾಸಂಗ ಮಾಡಿದರು.
ಮನ್ಮಹಾರಾಜರವರ ಸಂಸ್ಕöÈತ ಕಾಲೇಜಿನಲ್ಲಿ ಮೂರು ವರ್ಷಗಳ ಸಾಹಿತ್ಯ ಪರೀಕ್ಷೆ ಓದಿ ಮುಗಿಸಿದರು. ಮುಂದೆ ತಮ್ಮ ಹಿರಿಯ ಗುರುಗಳ ಆಶಯದಂತೆ ಜೆ.ಎಸ್.ಎಸ್. ಸಂಸ್ಥೆಯಲ್ಲಿ ತೊಡಗಿಸಿಕೊಂಡಿದ್ದರು. ಈ ಅವಧಿಯಲ್ಲಿ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಯವರ ಮಾರ್ಗದರ್ಶನ ವಿದ್ಯಾರ್ಥಿ ನಿಲಯಗಳ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತ ಸ್ವಾಮೀಜಿ ಅವರನ್ನು ಸ್ಮರಿಸುತ್ತಿದ್ದರು.
ಶ್ರೀಮಠದ ಅಧಿಕಾರವನ್ನು ವಹಿಸಿಕೊಂಡ ಚಿದಾನಂದ ಸ್ವಾಮೀಜಿ ಅವರು ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಅರಮನೆ ಪಂಚಗವಿಮಠದ ಕಾರ್ಯಗಳಲ್ಲೂ ಕೆಲವು ವರ್ಷಗಳ ಕಾಲ ತೊಡಗಿಸಿಕೊಂಡರು. ಶ್ರೀ ಗೌರಿಶಂಕರ ವಿದ್ಯಾಸಂಸ್ಥೆಯನ್ನು ಸ್ಥಾಪಿಸಿ ಕೆಲ ಕಾಲ ಅದರ ಆರಂಭಿಕ ಕಾರ್ಯದರ್ಶಿಯಾಗಿಯೂ ಕಾರ್ಯ ನಿರ್ವಹಿಸಿದರು.
ಚಿದಾನಂದ ಸ್ವಾಮ್ಭಿಜಿಯವರು ಚಿಕ್ಕಂದಿನಿAದಲೂ ಕ್ರಿಯಾಶೀಲರು ಹಾಗೂ ಸದಾ ಸಕ್ರಿಯವಾಗಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರು. ಅವರ ಪಾದರಸದಂತಹ ಉತ್ಸಾಹವನ್ನು ಗಮನಿಸಿದ ಶ್ರೀ ಗುರುಶಾಂತ ಸ್ವಾಮಿಗಳು ಬಹಳ ಸಂತಸದಿAದ ಅವರಿಗೆ ಪಟ್ಟಾಧಿಕಾರ ನೆರವೇರಿಸಿದ ದಿನದಿಂದಲೇ ಶ್ರೀ ಮಠದ ಸಮಸ್ತ ಜವಾಬ್ದಾರಿಯನ್ನು ಅವರಿಗೆ ಒಪ್ಪಿಸಿ ಅಧ್ಯಯನ, ಅಧ್ಯಾಪನ ಹಾಗೂ ಆಧ್ಯಾತ್ಮ ಚಿಂತನೆಗಳಲ್ಲಿ ತೊಡಗಿಸಿಕೊಂಡರು.
ತಮ್ಮ ಗುರು ಪರಂಪರೆಯವರು ಸಮಷ್ಟಿ ಹಿತದೃಷ್ಟಿಯಿಂದೆಸಗಿದ್ದ ಕಾರ್ಯ ಸಾಧನೆಗಳೆಲ್ಲವನ್ನು ಸಮರ್ಥವಾಗಿ ಹಾಗೂ ಅರ್ಥಪೂರ್ಣವಾಗಿ ಮುನ್ನಡೆಸುವ ಸಲುವಾಗಿ ಗಂಭೀರ ಚಿಂತನೆ ನಡೆಸಿದ ಸ್ವಾಮೀಜಿ ಅವರು, ಅವುಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಟ್ರಸ್ಟ್ ಒಂದು ಅಗತ್ಯವಿರುವುದನ್ನು ಮನಗಂಡು 1984ರಲ್ಲಿ ಶ್ರೀ ನಟರಾಜ ಪ್ರತಿಷ್ಠಾನ ಎಂಬ ಅಂಗಸAಸ್ಥೆಯನ್ನು ಹುಟ್ಟುಹಾಕಿದರು.
ಪ್ರಸ್ತುತ ಶ್ರೀ ನಟರಾಜ ಪ್ರತಿಷ್ಠಾನದ ಆಶ್ರಯದಲ್ಲಿ ಧರ್ಮ ಸಂಸ್ಕöÈತಿ, ಶಿಕ್ಷಣ, ಸಾಮಾಜಿಕ ಕ್ಷೇತ್ರಗಳಿಗೆ ಸಂಬAಧಿಸಿದAತೆ 24ಕ್ಕೂ ಮಿಗಿಲು ಸಂಘ ಸಂಸ್ಥೆಗಳಿವೆ, ಶಿಶುವಿಹಾರಗಳು, ಕಿರಿಯ-ಹಿರಿಯ ಪ್ರಾಥಮಿಕ ಶಾಲೆಗಳು, ಪ್ರೌಢಶಾಲೆಗಳು, ಪಬ್ಲಿಕ್ ಸ್ಕೂಲ್ ನರ್ಸಿಂಗ್ ಸ್ಕೂಲ್, ಪದವಿ ಪೂರ್ವ ಹಾಗೂ ಪದವಿ ಕಾಲೇಜು, ಬಿ.ಇಡಿ ಕಾಲೇಜು, ಎಂ.ಕಾA. ಸ್ನಾತಕೋತ್ತರ ಕೇಂದ್ರ, ಪ್ಯಾರಾ ಮೆಡಿಕಲ್ ಸೈನ್ಸ್ ಕಾಲೇಜುಗಳು ಕಾರ್ಯ ನಿರ್ವಹಿಸುತ್ತಿವೆ.
ಶ್ರೀ ನಟರಾಜ ಕಲಾ ಸಂಘದ ಮೂಲಕ ರಂಗಚಟುವಟಿಕೆಗಳ ವಿದ್ಯಾರ್ಥಿಗಳ ಕಲಾ ಪ್ರತಿಭೆಗೆ ವೇದಿಕೆ ಒದಗಿಸಿದರು. ಶ್ರೀ ಹೊಸಮಠದ ಮೂಲಕ ಶ್ರೀ ನಟರಾಜ ಜನರಲ್ ಆಸ್ಪತ್ರೆ ಸ್ಥಾಪಿಸಿ, ಅತ್ಯಾಧುನಿಕ ಸೌಲಭ್ಯವನ್ನು ಜನರಿಗೆ ಒದಗಿಸುವಂತೆ ಮಾಡಿದರು.
ಸಾಹಿತ್ಯಕವಾಗಿ ಶ್ರೀ ನಟರಾಜ ಪ್ರಕಾಶನದ ಮುಖೇನ ಹಲವು ಮೌಲ್ವಿಕ ಕೃತಿಗಳನ್ನು ಪ್ರಕಟಿಸಿದ್ದಾರೆ.
ಶುಕ್ರವಾರ ಬೆಳಗ್ಗೆ ಅಂತಿಮ ದರ್ಶನ: ಶ್ರೀಚಿದಾನಂದ ಸ್ವಾಮೀಜಿ ಅವರ ಪಾರ್ಥಿವ ಶರೀರವನ್ನು ಮಠದ ಆವರಣದಲ್ಲಿ ಶುಕ್ರವಾರ ಬೆಳಗ್ಗೆ 9ಗಂಟೆವರೆಗೆ ಇಡಲಾಗುವುದು. ನಂತರ ಬಸವೇಶ್ವರ ಪುತ್ಥಳಿಯಿಂದ ಮೆರವಣಿಗೆ ಹೊರಟು ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಗುವುದು. ನಂತರ ಮಠದ ಆವರಣದಲ್ಲಿ ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ಲಿಂಗಾಯತ ಸಂಪ್ರದಾಯದAತೆ ಅಂತ್ಯಕ್ರಿಯೆಯ ಧಾರ್ಮಿಕ ಕಾರ್ಯ ನಡೆಯಲಿದೆ ಎಂದು ಮಠದ ಆಡಳಿತ ಮಂಡಳಿ ತಿಳಿಸಿದೆ.
ಸುತ್ತೂರು ಶ್ರೀಗಳಿಂದ ಅಂತಿಮ ದರ್ಶನ; ಶ್ರೀಚಿದಾನಂದ ಸ್ವಾಮೀಜಿ ಅವರ ನಿಧನ ವಿಷಯ ತಿಳಿಯುತ್ತಿದ್ದಂತೆ ಸುತ್ತೂರು ವ್ಮಠದ ಪೀಠಾಧಿಪತಿಗಳಾದ ಶ್ರೀಶಿವರಾತ್ರಿದೇಶಿಕೇಂದ್ರಸ್ವಾಮಿಯವರು ಮಠಕ್ಕೆ ಆಗಮಿಸಿ ಅಂತಿಮ ದರ್ಶನ ಪಡೆದರು.