
ಮೈಸೂರು; ಭಾರತ ಜಗತ್ತಿನ ಶ್ರೇಷ್ಠ ರಾಷ್ಟçವಾಗಿ ಬದಲಾಗುತ್ತಿದೆ. ಹೊರಗಿನ ಶತ್ರುಗಳನ್ನು ಎದುರಿಸುವುದು ಕಷ್ಟವಲ್ಲ, ಆದರೆ ದೇಶದ ಒಳಗಿನ ಶತ್ರುಗಳನ್ನು ನಿಯಂತ್ರಿಸುವುದು ದೊಡ್ಡ ಸವಾಲು’ ಎಂದು ಮೈಸೂರು ನಗರ ಪಾಲಿಕೆಯ ಮಾಜಿ ಸದಸ್ಯ ಮಾ.ವಿ.ರಾಮ್‌ಪ್ರಸಾದ್ ಹೇಳಿದರು.
ಶುಕ್ರವಾರ ನಗರದ ಚಾಮುಂಡಿಪುರAನಲ್ಲಿ ಸ್ನೇಹ ಬಳಗದ ವತಿಯಿಂದ 79ನೇ ಸ್ವಾತಂತ್ರೊ÷್ಯÃತ್ಸವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ತ್ರಿವರ್ಣ ಧ್ವಜ ವಿತರಿಸಿ ಮಾತನಾಡಿದ ಅವರು, ಹಲವಾರು ಮಹನೀಯರ ತ್ಯಾಗ, ಶ್ರಮ, ಶಾಂತಿಯುತ ಹೋರಾಟದ ಫಲವಾಗಿ ನಮಗೆ ಸ್ವಾತಂತ್ರ÷್ಯ ಸಿಕ್ಕಿದೆ. ಹಾಗಾಗಿ ಸ್ವಾತಂತ್ರö್ಯಕ್ಕಾಗಿ ಮಹನೀಚಿiÀÄರು ನಡೆಸಿದ ಹೋರಾಟದ ಇತಿಹಾಸವನ್ನು ಸದಾ ನೆನಪಿಸಿಕೊಳ್ಳಬೇಕು’ ಎಂದರು.ಇದೇ ಸಂದರ್ಭದಲ್ಲಿ ನಗರ ಪಾಲಿಕೆಯ ಮಾಜಿ ಸದಸ್ಯ ಜಗದೀಶ್, ಮುಖಂಡರುಗಳಾದ ಅಪೂರ್ವ ಸುರೇಶ್, ದೂರ ರಾಜಣ್ಣ, ಜತ್ತಿಪ್ರಸಾದ್, ಶಿವಲಿಂಗ ಸ್ವಾಮಿ, ನಿರೂಪಕ ಪುರುಷೋತ್ತಮ್, ದಯಾನಂದ ನಾಯಕ್, ಮಹೇಶ್, ನಿವೃತ್ತ ಶಿಕ್ಷಕ ಮಹದೇವಸ್ವಾಮಿ, ಮೈಲಾ ವಿಜಯ್ ಕುಮಾರ್ ಹಾಗೂ ಇನ್ನಿತರರು ಹಾಜರಿದ್ದರು.