
ಹನೂರು ; ತಾಲೂಕಿನ ಕಾವೇರಿ ವನ್ಯಜೀವಿಧಾಮದ ಶಾಗ್ಯ ವಲಯದಲ್ಲಿ ಅರಣ್ಯ ಸಿಬ್ಬಂದಿಯ ಗುಂಡಿನ ದಾಳಿಗೆ ಮೂವರು ಬಲಿಯಾದ ಘಟನೆಗೆ ಸಂಬ0ಧಿಸಿದ0ತೆ ಅರಣ್ಯಾಧಿಕಾರಿಗಳ ವಿರುದ್ಧ ಹನೂರು ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಎಫ್ಐಆರ್ ದಾಖಲಾಗಿದೆ.
ಹನೂರು ತಾಲೂಕಿನ ತೋಮಿಯಾರ್ ಪಾಳ್ಯದ ಮೃತ ಆಂತೋಣಿಸ್ವಾಮಿ ಪತ್ನಿ ಲೂರ್ದಾಮೇರಿ ದೂರು ಕೊಟ್ಟಿದ್ದು, ರಾತ್ರಿ ಬಂಡೆ ಬಳಿ ಮಲಗಿದ್ದವರ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ಗುಂಡು ಹಾರಿಸಿ ಕೊಂದಿದ್ದಾರೆAದು ತಿಳಿಸಿದ್ದಾರೆ. ಆ.14ರಂದು ಕಾಡಿಗೆ ಮೇಯಲು ಬಿಟ್ಟಿದ್ದ ಜಾನುವಾರುಗಳ ಪೈಕಿ ಎರಡು ಹಸುಗಳು ಮನೆಗೆ ವಾಪಸ್ ಬಂದಿರಲಿಲ್ಲ, ಹುಡುಕಿಕೊಂಡು ಬರುವುದಾಗಿ ಪತಿ ಆಂತೋಣಿಸ್ವಾಮಿ, ತಮ್ಮ ಸೆಬಾಸ್ಟಿಯನ್ ಡೇವಿಡ್ ಕುಮಾರ್, ಮೈದುನನಾದ ಜಾನ್ ರೋಸ್ ಪೀಟರ್ ಹಾಗೂ ದೊಡ್ಡಪ್ಪನ ಮಗನಾದ ಮಹಿಮಾದಾಸ್ ಸಂಜೆ ತೆರಳಿದ್ದವರು ಮುಂಜಾನೆ ಆದರೂ ಬರಲಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಬೆಳಗ್ಗೆ ಮಹಿಮಾದಾಸ್ ಫೋನ್ ಮಾಡಿ, ಹಸುಗಳನ್ನು ಹುಡುಕಿದರೂ ಸಿಗದಿದ್ದರಿಂದ ಕಾಡಿನ ಮಧ್ಯೆ ಒಂದು ಬಂಡೆ ಬಳಿ ಮಲಗಿದ್ದೆವು. ಮಧ್ಯರಾತ್ರಿ ತನಗೆ ಎಚ್ಚರವಾಗಿ ನಿದ್ರೆ ಬಂದಿರಲಿಲ್ಲ, ಉಳಿದ ಮೂವರು ಮಲಗಿದ್ದರು. ಅಂದಾಜು ಸುಮಾರು 5 ರ ಸುಮಾರಿಗೆ ಅರಣ್ಯ ಸಿಬ್ಬಂದಿ ಮಲಗಿದ್ದ ಮೂವರ ಮೇಲೂ ಗುಂಡು ಹಾರಿಸಿದ್ದು ಎಲ್ಲರೂ ಸ್ಥಳದಲ್ಲೇ ಮೃತಪಟ್ಟರು, ತಾನು ಅಲ್ಲಿಂದ ಓಡಿ ತಪ್ಪಿಸಿಕೊಂಡೆ ಎಂದು ತಿಳಿಸಿದನು. ಅದಾದ ಬಳಿಕ, ನಾನು ಸಂಬAಧಿಕರಿಗೆ ಮೃತಪಟ್ಟ ಮಾಹಿತಿ ತಿಳಿಸಿದ್ದು, ಮಲಗಿದ್ದವರನ್ನು ಕೊಲೆ ಮಾಡಿದ್ದು ಅರಣ್ಯ ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ. ದೂರಿನಲ್ಲಿ ಅರಣ್ಯ ಸಿಬ್ಬಂದಿ ಅಥವಾ ಅರಣ್ಯಾಧಿಕಾರಿಗಳ ಹೆಸರನ್ನು ಉಲ್ಲೇಖಿಸಿಲ್ಲ.
ಮೂವರು ಗುಂಡೇಟಿಗೆ ಬಲಿಯಾದ ಪ್ರಕರಣವನ್ನು ಸಮರ್ಥಿಸಿಕೊಂಡ ಅರಣ್ಯ ಇಲಾಖೆಯ ಅಧಿಕಾರಿಗಳು;
ಮೂವರು ಗುಂಡೇಟಿಗೆ ಬಲಿಯಾದ ಪ್ರಕರಣವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ. ಈ ಕುರಿತು
ಅರಣ್ಯ ಇಲಾಖೆ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಕಾವೇರಿ ವನ್ಯಜೀವಿ ವಿಭಾಗದ ಹನೂರು ವನ್ಯಜೀವಿ ವಲಯದ ಅರಣ್ಯ ಪ್ರದೇಶದಲ್ಲಿ ಕಳ್ಳಬೇಟೆಗಾರರ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ ಅರಣ್ಯ ಸಿಬ್ಬಂದಿ ಗುಂಡು ಹಾರಿಸಿದ್ದು, ಮೂವರು ಕಳ್ಳಬೇಟೆಗಾರರು ಮೃತಪಟ್ಟಿದ್ದಾರೆ. ಮತ್ತೋರ್ವ ಆರೋಪಿ ಕಾಡಿನಲ್ಲಿ ತಲೆಮರೆಸಿಕೊಂಡಿದ್ದಾನೆ ಎಂದು ಅರಣ್ಯ ಇಲಾಖೆ ತಿಳಿಸಿದೆ.
ಹನೂರು ವನ್ಯಜೀವಿ ವಲಯದ ಶಾಗ್ಯ ಶಾಖೆಯ ಹೊಳೆಮುರಿದಟ್ಟಿ ಗಸ್ತು ವ್ಯಾಪ್ತಿಯ ಚಿಕ್ಕಲ್ಲೂರು ಮೀಸಲು ಅರಣ್ಯಕ್ಕೆ ಕಳ್ಳನಾಡಬಂದೂಕುಧಾರಿಗಳು ನುಸುಳಿ ವನ್ಯಪ್ರಾಣಿಗಳ ಬೇಟೆಗೆ ಮುಂದಾಗಿರುವ ಬಗ್ಗೆ ಅರಣ್ಯ ಇಲಾಖೆಗೆ ಖಚಿತ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಎರಡು ತಂಡಗಳನ್ನು ರಚಿಸಿ ಕಾರ್ಯಾಚರಣೆ ನಡೆಸಲಾಗಿತ್ತು.
ಕಾರ್ಯಾಚರಣೆ ವೇಳೆ ಗಣಿಗಲೆ ಮರದ ವಾಚ್ಟವರ್ನಲ್ಲಿದ್ದ ಸಿಬ್ಬಂದಿ, ಗೋಮಡಿನಹಳ್ಳ ಹಾಗೂ ಸೀರನಮಡ ಅರಣ್ಯ ಪ್ರದೇಶಗಳಲ್ಲಿ ಟಾರ್ಚ್ ಬೆಳಕಿನ ಸಹಾಯದಿಂದ ಕೆಲವರು ಸಂಚರಿಸುತ್ತಿರುವುದನ್ನು ಗಮನಿಸಿ ಗಸ್ತು ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ನಂತರ ಕರಿಕಲ್ಲು ಒಡ್ಡು ಎತ್ತರದ ಅರಣ್ಯ ಪ್ರದೇಶದಲ್ಲಿ ಸಿಬ್ಬಂದಿ ಶೋಧ ಕಾರ್ಯ ನಡೆಸಿದ್ದರು.
ಬೆಳಗಿನ ಜಾವ ದಾಳಿ;
ಆಗಸ್ಟ್ 15ರಂದು ಬೆಳಗ್ಗೆ ಸುಮಾರು 5ರಿಂದ 5.30ರ ವೇಳೆಗೆ ಕಲ್ಲುಬಂಡೆ ಹಾಗೂ ಪೊದೆಗಳ ನಡುವೆ ಅಡಗಿದ್ದ ಕಳ್ಳಬೇಟೆಗಾರರು ಅರಣ್ಯ ಸಿಬ್ಬಂದಿ ಮೇಲೆ ಏಕಾಏಕಿ ದಾಳಿ ನಡೆಸಲು ಮುಂದಾದರು ಎಂದು ಇಲಾಖೆ ತಿಳಿಸಿದೆ. ಸಿಬ್ಬಂದಿ ಶರಣಾಗುವಂತೆ ಸೂಚಿಸಿದರೂ, ಆರೋಪಿಗಳು ನಾಡಬಂದೂಕಿನಿAದ ದಾಳಿ ಮಾಡಲು ಯತ್ನಿಸಿದ ಹಿನ್ನೆಲೆಯಲ್ಲಿ ಆತ್ಮರಕ್ಷಣೆಗಾಗಿ ಸಿಬ್ಬಂದಿ ಗುಂಡು ಹಾರಿಸಿದ್ದಾರೆ ಎಂದು ಅರಣ್ಯ ಇಲಾಖೆ ಹೇಳಿದೆ.
ಗುಂಡಿನ ದಾಳಿ ಬಳಿಕ ನರಳಾಟದ ಶಬ್ದ ಕೇಳಿಬಂದ ಹಿನ್ನೆಲೆಯಲ್ಲಿ ಸಿಬ್ಬಂದಿ ಟಾರ್ಚ್ ಬೆಳಕಿನಲ್ಲಿ ಪರಿಶೀಲಿಸಿದಾಗ ಮೂವರು ಗಾಯಗೊಂಡಿರುವುದು ಕಂಡುಬAದಿದೆ. ಮತ್ತೋರ್ವ ಆರೋಪಿ ಸ್ಥಳದಿಂದ ಪರಾರಿಯಾಗಿ ಕಾಡಿನಲ್ಲಿ ತಲೆಮರೆಸಿಕೊಂಡಿದ್ದಾನೆ.
ಗಾಯಗೊAಡ ಮೂವರನ್ನು ಕೂಡಲೇ ಕೊಳ್ಳೇಗಾಲದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ವೈದ್ಯಾಧಿಕಾರಿಗಳು ಪರಿಶೀಲಿಸಿ ಮೂವರೂ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ. ಮೃತದೇಹಗಳನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಮೃತಪಟ್ಟವರ ವಿವರ;
- ಅಂತೋಣಿಸ್ವಾಮಿ (50) ಮರಿಮಂಗಲ ಗ್ರಾಮದ ನಿವಾಸಿ, ಕೃಷಿಕ.
- ಜಾನ್ ರೋಸ್ ಪೀಟರ್ (42) ಜಗನ್ನಾಥದೊಡ್ಡಿ ಗ್ರಾಮದ ನಿವಾಸಿ, ಕೃಷಿಕ.
- ಕುಮಾರ್ (33) ಲಾಸರ್ದೊಡ್ಡಿ ಗ್ರಾಮದ ನಿವಾಸಿ, ಹಿಟಾಚಿ ಆಪರೇಟರ್.
ತಲೆಮರೆಸಿಕೊಂಡ ಆರೋಪಿ: ಮಹಿಮದಾಸ್ (45), ಮರಿಯಮಂಗಲ ಗ್ರಾಮದ ನಿವಾಸಿ. ಈತ ಕೃಷಿಕನಾಗಿದ್ದು, ಘಟನೆ ಬಳಿಕ ಕಾಡಿನಲ್ಲಿ ಪರಾರಿಯಾಗಿದ್ದಾನೆ ಎಂದು ಇಲಾಖೆ ತಿಳಿಸಿದೆ.
ಶಸ್ತಾçಸ್ತç, ಮಾಂಸ ಸೇರಿದಂತೆ ವಸ್ತುಗಳ ವಶ ;
ಘಟನಾ ಸ್ಥಳದಿಂದ ಎರಡು ನಾಡಬಂದೂಕುಗಳು (Sಃಒಐ), ಸುಮಾರು 20 ಕೆ.ಜಿ. ಪ್ರಾಣಿಯ ಮಾಂಸ, ನಾಡಬಂದೂಕಿಗೆ ಬಳಸುವ ಗುಂಡುಗಳು ಹಾಗೂ ಮದ್ದಿನ ಪೌಡರ್, ಚಾಕು, ಮೊಬೈಲ್ ಫೋನ್ಗಳು, ತಲೆ ಬ್ಯಾಟರಿ, ಚಾರ್ಜರ್ ಸೇರಿದಂತೆ ಹಲವು ವಸ್ತುಗಳನ್ನು ಅರಣ್ಯ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ.
ಇದಲ್ಲದೆ, ಅಡುಗೆಗೆ ಬಳಸುವ ಪಾತ್ರೆಗಳು, ಸ್ಟೀಲ್ ತಟ್ಟೆ, ಚಮಚ, ಅಕ್ಕಿ, ಈರುಳ್ಳಿ, ಟೊಮ್ಯಾಟೊ, ಉಪುö್ಪ, ಬಿಸ್ಕೆಟ್, ಬೆಲ್ಲ, ಧನಿಯಾ ಪುಡಿ ಸೇರಿದಂತೆ ವಿವಿಧ ಸಾಮಗ್ರಿಗಳೂ ಪತ್ತೆಯಾಗಿವೆ. ಇವುಗಳನ್ನು ಸರ್ಕಾರದ ಪರ ಅಮಾನತ್ತುಪಡಿಸಿಕೊಳ್ಳಲಾಗಿದೆ.
ವನ್ಯಜೀವಿ ಕಾಯ್ದೆಯಡಿ ಪ್ರಕರಣ;
ಘಟನೆಗೆ ಸಂಬAಧಿಸಿದAತೆ ವನ್ಯಜೀವಿ (ಸಂರಕ್ಷಣಾ) ಕಾಯ್ದೆ 1972ರ ವಿವಿಧ ಸೆಕ್ಷನ್ಗಳಡಿ ವನ್ಯಜೀವಿ ಅಪರಾಧ ವರದಿ ಸಂಖ್ಯೆ 01/2026-27 ದಾಖಲಿಸಲಾಗಿದೆ.
ಪ್ರಕರಣದ ಪ್ರಾಥಮಿಕ ಮಾಹಿತಿಯನ್ನು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಹಾಗೂ ಮುಖ್ಯ ವನ್ಯಜೀವಿ ಪರಿಪಾಲಕರು, ಚಾಮರಾಜನಗರ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಹನೂರು ಪೊಲೀಸ್ ಅಧಿಕಾರಿಗಳಿಗೆ ನೀಡಲಾಗಿದೆ.
ಕಳ್ಳಬೇಟೆಗಾರರು ಶರಣಾಗುವಂತೆ ಸಿಬ್ಬಂದಿ ಮನವೊಲಿಸಲು ಪ್ರಯತ್ನಿಸಿದರೂ ಅವರು ದಾಳಿ ಮಾಡಲು ಮುಂದಾದ ಹಿನ್ನೆಲೆಯಲ್ಲಿ, ಅರಣ್ಯ ಸಿಬ್ಬಂದಿಗಳ ಆತ್ಮರಕ್ಷಣೆ, ಅರಣ್ಯ ಸಂಪತ್ತು ಹಾಗೂ ವನ್ಯಜೀವಿಗಳ ಸಂರಕ್ಷಣೆಯ ಉದ್ದೇಶದಿಂದಲೇ ಗುಂಡು ಹಾರಿಸಲಾಗಿದೆ ಎಂದು ಕಾವೇರಿ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ತಿಳಿಸಿದ್ದಾರೆ.
ಘಟನೆಯ ಕುರಿತು ಅರಣ್ಯ ಇಲಾಖೆ ಮುಂದಿನ ತನಿಖೆ ಹಾಗೂ ಕಾನೂನು ಕ್ರಮ ಕೈಗೊಂಡಿದೆ ಎಂದು ಹೇಳಿದ್ದಾರೆ.
ಘಟನೆ ಬಗ್ಗೆ ಕೂಲಂಕಷ ತನಿಖೆ; ಐಜಿಪಿ ಬೋರಲಿಂಗಯ್ಯ
ಮೈಸೂರು; ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕಾವೇರಿ ವನ್ಯಜೀವಿಧಾಮದ ಶಾಗ್ಯ ಅರಣ್ಯದಲ್ಲಿ ನಡೆದಿರುವ ಗುಂಡಿನ ದಾಳಿಯಲ್ಲಿ ಮೂವರು ಬಲಿಯಾಗಿರುವ ಘಟನೆ ಸಂಬAಧ ಕೂಲಂಕಷ ತನಿಖೆ ನಡೆಸಿ, ಸತ್ಯಾಸತ್ಯತೆಯನ್ನು ಬೆಳಕಿಗೆ ತರಲಾಗುವುದು ಎಂದು ದಕ್ಷಿಣ ವಲಯ ಐಜಿಪಿ ಡಾ.ಎಂ.ಬಿ.ಬೋರಲಿAಗಯ್ಯ ತಿಳಿಸಿದರು.
ಹನೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು , ಮೃತ ಆಂತೋಣಿಸ್ವಾಮಿ ಪತ್ನಿ ಲೂರ್ದಾಮೇರಿ ಅರಣ್ಯಾಧಿಕಾರಿಗಳ ವಿರುದ್ಧ ದೂರು ಕೊಟ್ಟಿದ್ದು, ಮಲಗಿದ್ದವರ ಮೇಲೆ ಗುಂಡು ಹಾರಿಸಲಾಗಿದೆ ಎಂದು ತಿಳಿಸಿದ್ದಾರೆ. ಅರಣ್ಯ ಇಲಾಖೆಯು ಆತ್ಮರಕ್ಷಣೆಗಾಗಿ ಪ್ರತಿದಾಳಿ ನಡೆಸಿರುವುದಾಗಿ ತಿಳಿಸಿದೆ. ಈ ಎರಡೂ ಆಯಾಮಗಳಲ್ಲಿ ತನಿಖೆ ನಡೆಸಿ, ಸಾಕ್ಷಾ÷್ಯಧಾರಗಳ ಮೂಲಕ ತನಿಖೆ ನಡೆಸಲಿದ್ದು, ಸತ್ಯಾಸತ್ಯತೆ ತಿಳಿಯಲಿದೆ ಎಂದರು.
ಮೃತಪಟ್ಟವರ ಮೇಲೆ ಈ ಹಿಂದೆ ಕಳ್ಳ ಬೇಟೆ ಪ್ರಕರಣಗಳು ಇದ್ದವಾ ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ. ಎರಡು ಚೀಲಗಳಲ್ಲಿ ಮಾಂಸವನ್ನು ವಶಕ್ಕೆ ಪಡೆದಿದ್ದು, ಯಾವ ಮಾಂಸ ಎಂಬುದು ಇನ್ನು ತಿಳಿದಿಲ್ಲ ಎಂದು ಹೇಳಿದರು.