Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಗುಂಡೇಟಿಗೆ ಬಲಿಯಾದ ಮೂವರ ಅ0ತ್ಯಕ್ರಿಯೆ; ಮೃತರ ಕುಟುಂಬಗಳಿಗೆ ಶಾಸಕರಿಂದ ತಲಾ 15 ಲಕ್ಷರೂ ಪರಿಹಾರ ವಿತರಣೆ


ಉದ್ದೇಶ ಪೂರ್ವಕವಾಗಿ ಮೂವರನ್ನು ಗುಂಡಿಟ್ಟು ಕೊಂದಿಲ್ಲ ಎಂದು ಸಾಬೀತುಪಡಿಸಲು ಅರಣ್ಯ ಇಲಾಖೆಯ ಅಧಿಕಾರಿಗಳ ಕಸರತ್ತು

ಹನೂರು; ತಾಲೂಕಿನ ಕಾವೇರಿ ವನ್ಯಜೀವಿಧಾಮದ ಶಾಗ್ಯ ಬೀಟ್‌ನಲ್ಲಿ ನಡೆದ ಶೂಟೌಟ್ ಪ್ರಕರಣದಲ್ಲಿ ಮೃತಪಟ್ಟ ಮೂವರ ಕುಟುಂಬಗಳಿಗೆ ಹನೂರು ಕ್ಷೇತ್ರದ ಶಾಸಕ ಎಂ.ಆರ್.ಮAಜುನಾಥ್ ಅವರು ಇಂದು ಪರಿಹಾರ ವಿತರಿಸಿದ್ದಾರೆ.
ಭಾನುವಾರ ಪ್ರತಿಭಟನಾನಿರತರಿಗೆ ನೀಡಿದ್ದ ಭರವಸೆಯಂತೆ
ಹನೂರು ತಾಲೂಕಿನ ತೋಮಿಯಾರ್ ಪಾಳ್ಯ ಗ್ರಾಮದ ಕುಮಾರ್, ಗ್ರಾಮದ ಸಮೀಪವಿರುವ ಮರಿಯಮಂಗಲ ಗ್ರಾಮದ ಅಂತೋಣಿ ಸಾಮಿ ಹಾಗೂ ಪೀಟರ್ ಅವರ ಮನೆಗಳಿಗೆ ತೆರಳಿ ಸರ್ಕಾರದಿಂದ 5 ಲಕ್ಷ ರೂ. ಮತ್ತು ವೈಯಕ್ತಿಕವಾಗಿ 10 ಲಕ್ಷ ರೂ. ಸೇರಿಸಿ ತಲಾ 15 ಲಕ್ಷ ರೂ. ಪರಿಹಾರವನ್ನು ಶಾಸಕರು ವಿತರಿಸಿದರು. ಬಳಿಕ ಮಾತನಾಡಿ, ಈ ಪ್ರಕರಣದ ತನಿಖೆ ನಡೆಯುತ್ತಿದೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿಯೂ ಭರವಸೆ ನೀಡಿದರು.
ಮೃತರ ಅಂತ್ಯಕ್ರಿಯೆ: ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಗುಂಡೇಟಿಗೆ ಬಲಿಯಾಗಿದ್ದ ಮೂವರ ಶವಗಳ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕಳೆದ ತಡರಾತ್ರಿ ಶವಗಳನ್ನು ಗ್ರಾಮಕ್ಕೆ ತರಲಾಯಿತು. ತೋಮಿಯಾರ್ ಪಾಳ್ಯದ ಚರ್ಚ್ನಲ್ಲಿ ಮೂವರ ಮೃತದೇಹಗಳನ್ನು ಇಟ್ಟು ಚರ್ಚ್ನ ಪಾದ್ರಿ ಕೆ.ಚಾರ್ಲ್್ಸ ಅವರ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಲಾಯಿತು. ಬಳಿಕ ಕ್ರೆöÊಸ್ತ ಸಂಪ್ರದಾಯದAತೆ ಸ್ವಗ್ರಾಮಗಳಲ್ಲಿ ಅಂತ್ಯಕ್ರಿಯೆ ನೆರವೇರಿತು ಎಂದು ಕುಟುಂಬ ಮೂಲಗಳಿಂದ ತಿಳಿದು ಬಂದಿದೆ.
ಸ್ಥಳ ಮಹಜರು, ವಶಕ್ಕೆ ಪಡೆದ ವಸ್ತುಗಳು ರಿವೀಲ್: ಕೊಳ್ಳೇಗಾಲ ಉಪ ವಿಭಾಗಧಿಕಾರಿ ದಿನೇಶ್ ಕುಮಾರ್ ಮೀನಾ ಅವರು ಶೂಟೌಟ್ ನಡೆದ ಸ್ಥಳಕ್ಕೆ ಎರಡು ದಿನ ಭೇಟಿ ಕೊಟ್ಟು, ಮಹಜರು ನಡೆಸಿದ್ದಾರೆ. ಅರಣ್ಯ ಇಲಾಖೆ ಹಲವು ಸಾಕ್ಷಿಗಳನ್ನು ತನಿಖಾಧಿಕಾರಿಗೆ ಸಲ್ಲಿಸಿದೆ.
ಘಟನೆ ನಡೆದ ಬಳಿಕ ವಶಕ್ಕೆ ಪಡೆಯಲಾಗಿದ್ದ 30 ಕೆ.ಜಿ.ಯಷ್ಟು ಜಿಂಕೆ ಮಾಂಸ, ಒಂಟಿ ನಳಿಕೆಯ ಎರಡು ನಾಡ ಬಂದೂಕು, ಹೆಡ್ ಟಾರ್ಚ್ಗಳು, ಧರಿಸಿದ ಚಪ್ಪಲಿಗಳು, ಅಡುಗೆ ಮಾಡಲು ತರಲಾಗಿದ್ದ ಪಾತ್ರೆ, ಸಾಂಬಾರ ಪದಾರ್ಥಗಳು, ಚಾಕು ಹಾಗು ಬ್ಯಾಗ್‌ಗಳನ್ನು ಸಾಕ್ಷಿಯಾಗಿ ತನಿಖಾಧಿಕಾರಿಗೆ ಸಲ್ಲಿಸಲಾಗಿದೆ. ಆ ಮೂಲಕ ಶೂಟೌಟ್ ಪ್ರಕರಣ ಉದ್ದೇಶಪೂರ್ವಕವಲ್ಲ ಎಂಬುದನ್ನು ಸಾಬೀತುಪಡಿಸಲು ಅರಣ್ಯ ಇಲಾಖೆಯ ಅಧಿಕಾರಿಗಳು ಕಸರತ್ತು ನಡೆಸಿದ್ದಾರೆ.
ಘಟನೆ ಹಲವು ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದ್ದು, ಮರಣೋತ್ತರ ವರದಿ ಬಂದ ನಂತರ ಸಂಪೂರ್ಣ ತನಿಖಾ ವರದಿ ಸಲ್ಲಿಸಲಿದ್ದಾರೆ.
ಅರಣ್ಯ ಜೀಪ್ ಧ್ವಂಸಕ್ಕೆ ಯತ್ನಿಸಿದ ಐವರ ವಿರುದ್ಧ ಎಫ್‌ಐಆರ್ ದಾಖಲು;
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕಾವೇರಿ ವನ್ಯಜೀವಿಧಾಮ ಕೌದಳ್ಳಿ ವಲಯ ಆಗಸ್ಟ್ 15ರಂದು ರಾತ್ರಿ ಅರಣ್ಯ ಇಲಾಖೆ ಜೀಪ್ ನ್ನು ಧ್ವಂಸ ಮಾಡಲು ಯತ್ನಿಸಿ, ಕೊಲೆ ಬೆದರಿಕೆ ಹಾಕಿದ ಆರೋಪದಡಿ ಐವರ ವಿರುದ್ಧ ಜೀಪ್ ಚಾಲಕ ಅರುಣ್ ಕುಮಾರ್ ಅವರು ರಾಮಾಪುರ ಠಾಣೆಯ ಪೊಲೀಸರಿಗೆ ದೂರು ನೀಡಿದ್ದಾರೆ.
ಹನೂರು ತಾಲ್ಲೂಕಿನ ಕುರಟ್ಟಿ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್.ಪಿ.ಎಸ್. ಕ್ಯಾಂಪ್ ನಿವಾಸಿಗಳಾದ ವೆಂಕಟೇಶ್, ಚಿನ್ನಿ ಪ್ರಕಾಶ್, ಪಚ್ಚಿಮುತ್ತು, ಮಾಳಶೆಟ್ಟಿ ಮತ್ತು ಮತ್ತೊಬ್ಬ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ.
ಆರ್‌ಎಫ್‌ಒ ಅವರ ಜೀಪ್ ಚನ್ನೂರು ಗ್ರಾಮದ ಕಡೆಗೆ ಗಸ್ತು ಮಾಡಿ ಹೊಸಳ್ಳಿ ಗ್ರಾಮದ ಕಡೆಗೆ ತೆರಳುತ್ತಿದ್ದಾಗ ನಾಲ್ಕು ಜನರು ಎರಡು ದ್ವಿಚಕ್ರ ವಾಹನಗಳಲ್ಲಿ ಬಂದು ಅಡ್ಡ ನಿಲ್ಲಿಸಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಕೆಳಗೆ ಇಳಿಯುತ್ತಿದ್ದಂತೆ, ಆರೋಪಿಗಳು ಅವರನ್ನು ಸುತ್ತುವರಿದು ಅಸಭ್ಯವಾಗಿ ಮಾತನಾಡಿದ್ದಾರೆ. ಜೀಪ್ ಮೇಲೆ ಕಲ್ಲು ಎಸೆದು, ಜೀಪಿನ ಟಾರ್ಪಾಲ್ ಹರಿದು ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬAಧ ರಾಮಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.