
ಮೈಸೂರು: ತಪ್ಪು ಮಾಡದೆ ಅಮಾನತುಗೊಂಡಿರುವ ರಮ್ಮನಹಳ್ಳಿ ಪಟ್ಟಣ ಪಂಚಾಯಿತಿಯ ಅಮಾಯಕ ನಾಲ್ವರು ಅಧಿಕಾರಿಗಳನ್ನು ರಕ್ಷಿಸುವಂತೆ ಆಗ್ರಹಿಸಿ ಹಾಗೂ ಇದರ ಹಿಂದಿನ ಸೂತ್ರಧಾರಿ ಕಂದಾಯ ನಿರೀಕ್ಷಕ ಮಂಜುನಾಥ್‌ರನ್ನು ಕೂಡಲೆ ಬಂಧಿಸುವAತೆ ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ, ಸಮಾಜ ರಕ್ಷಣಾ ಸೇನೆ, ನೇತೃತ್ವದಲ್ಲಿ ರಮ್ಮನಹಳ್ಳಿ ಗ್ರಾಮಸ್ಥರು ಮೈಸೂರಿನ ಜಿಲ್ಲಾಧಿಕಾರಿ ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ರಮ್ಮನಹಳ್ಳಿ ಪಟ್ಟಣ ಪಚಾಯಿತಿ ವ್ಯಾಪ್ತಿಯ ಹಂಚ್ಯಾ ಗ್ರಾಮ ಸರ್ವೆ ನಂಬರ್ 292 ರ ಸರ್ಕಾರಿ ಖರಾಬು ಜಮೀನಿಗೆ ಸಂಬAಧಿಸಿದAತೆ ದುರುದ್ದೇಶಪೂರಿತವಾಗಿ ರಮ್ಮನಹಳ್ಳಿ ಪಂಚಾಯಿತಿ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಏಕಾಏಕಿ ಅಮಾನತು ಕ್ರಮ ಕೈಗೊಳ್ಳಲಾಗಿದೆ. ಆದರೆ ಅಮಾನಿತಿನಲ್ಲಿ ಪ್ರಸ್ತಾಪಿಸಲಾಗಿರುವ ಪಿಐಡಿ ನಂಬರಿನ ನಿವೇಶನಕ್ಕೂ, ಸಂಬAಧಪಟ್ಟ ಭೌತಿಕ ಸರ್ಕಾರಿ ಜಾಗಕ್ಕೂ ಯಾವುದೇ ಸಂಬAಧವಿಲ್ಲ. ಹೀಗಿದ್ದರೂ ಅಧಿಕಾರಿಗಳನ್ನು ಅಮಾನತುಗೊಳಿಸಿರುವುದು ದೋಷಪೂರಿತ ನಿರ್ಧಾರ ಎಂದು ಪ್ರತಿಭಟನಾಕಾರರು ಆರೋಪಿಸಿದರು.
1992-93ರ ಅವಧಿಯಲ್ಲಿ ಶ್ರೀ ಜಯಚಾಮರಾಜೇಂದ್ರ ಗೃಹ ನಿರ್ಮಾಣ ಸಹಕಾರ ಸಂಘವು ಸದರಿ ಸರ್ಕಾರಿ ಖರಾಬು ಜಾಗದ ಪಕ್ಕದಲ್ಲಿ ಬಡಾವಣೆಯನ್ನು ನಿರ್ಮಿಸಿ ನಿವೇಶನಗಳನ್ನು ರಚಿಸಿದ್ದು. ಇದಕ್ಕೆ ಹಂಚ್ಯಾ ಗ್ರಾಮ ಪಂಚಾಯಿತಿಯಲ್ಲಿ ಡಿಮ್ಯಾಂಡ್ ರಿಜಿಸ್ಟರ್ ಹಾಗೂ ಖಾತೆ ಪ್ರಕ್ರಿಯೆ ನಡೆದಿದೆಯೆ ಹೊರತು, ಅಮಾನತುಗೊಂಡಿರುವ ರಮ್ಮನಹಳ್ಳಿ ಪಟ್ಟಣ ಪಂಚಾಯಿತಿಯ ಅಧಿಕಾರಿಗಳಾದ ರವಿಕೀರ್ತಿ, ಪುಷ್ಪವತಿ, ರಾಮಸ್ವಾಮಿ ಹಾಗೂ ಸಿದ್ದಯ್ಯ ಯಾವುದೇ ಈ-ಖಾತೆಯನ್ನು ಸೃಜಿಸಿಲ್ಲ. ಇವರ ಮೇಲಿನ ವೃತ್ತಿ ವೈಷಮ್ಯದಿಂದ ಕಂದಾಯ ನಿರೀಕ್ಷಕ ಮಂಜುನಾಥ್ ತನ್ನ ಪ್ರಭಾವ ಬೀರಿ ಸುಳ್ಳು ವರದಿಯನ್ನು ಸೃಷ್ಟಿಸಿ ಅಮಾಯಕರ ಅಮಾನತಿಗೆ ಕಾರಣರಾಗಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.
ಜಿಲ್ಲಾಡಳಿತದಿಂದ ಸರಿಯಾದ ಸ್ಥಳ ಪರಿಶೀಲನೆ ನಡೆಸದೇ ಹಾಗೂ ಜಾಗದ ಭೌತಿಕ ಸ್ಥಿತಿಯನ್ನು ಪರಿಶೀಲಿಸದೇ ಸುಳ್ಳು ವರದಿ ಆಧರಿಸಿ ಅಮಾನತು ಆದೇಶ ನೀಡಲಾಗಿದೆ. ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ತಪುö್ಪ ಮಾಡಿಲ್ಲ ಎಂದು ಒಂದು ವರದಿಯಲ್ಲಿ ಹೇಳಲಾಗಿದ್ದರೆ, ಮತ್ತೊಂದೆಡೆ ತಪುö್ಪ ಮಾಡಿದ್ದಾರೆ ಎಂಬ ರೀತಿಯ ನಿರ್ಣಯ ಕೈಗೊಳ್ಳಲಾಗಿದೆ. ಈ ರೀತಿಯ ದ್ವಂದ್ವಾತ್ಮಕ ನಿಲುವಿನ ಆಧಾರದಲ್ಲಿ ಅಮಾನತು ಮಾಡಿರುವುದು ಸರಿಯಲ್ಲ ಎಂದು ಪ್ರತಿಭಟನಾಕಾರರು ಆಕ್ಷೇಪಿಸಿದರು.
ಅಕ್ರಮ ನಡೆದಿದ್ದರೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿ. ಆದರೆ ತನಿಖೆ ನಡೆಸದೇ ಅಧಿಕಾರಿಗಳನ್ನು ಏಕಾಏಕಿ ಅಮಾನತು ಮಾಡಿರುವುದು ಸರಿಯಲ್ಲ. ಅಮಾನತು ಆದೇಶವನ್ನು ಕೂಡಲೇ ವಾಪಸ್ ಪಡೆದು, ಪ್ರಕರಣದ ಕುರಿತು ನ್ಯಾಯಯುತ ತನಿಖೆ ನಡೆಸಬೇಕು” ಎಂದು ಸಂಘಟನೆಗಳ ಮುಖಂಡರು ಆಗ್ರಹಿಸಿದ್ದಾರೆ.
ಇದೇ ವೇಳೆ ಸರ್ಕಾರಿ ಜಮೀನನ್ನು ಖಾಸಗಿಯವರಿಗೆ ಅಕ್ರಮ ಖಾತೆ ಮಾಡಿರುವ ಆರೋಪದ ಮೇಲೆ ಅಮಾನತಾಗಿರುವ ಕಂದಾಯ ನಿರೀಕ್ಷಕ ಮಂಜುನಾಥ್ ಮೇಲೆ ಈಗಾಗಲೇ ಮೈಸೂರು ದಕ್ಷಿಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದರೂ ಇದೂವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದರ ಪರಿಣಾಮ ಮಂಜುನಾಥ್ ಇನ್ನಷ್ಟು ಸರ್ಕಾರಿ ಜಮೀನನ್ನು ಖಾಸಗಿ ವ್ಯಕ್ತಿಗಳಿಗೆ ಅಕ್ರಮ ಖಾತೆ ಮಾಡಿಕೊಟ್ಟಿದ್ದಾರೆ. ಆದ್ದರಿಂದ ಭ್ರಷ್ಟ ಅಧಿಕಾರಿ ಮಂಜುನಾಥ್‌ರನ್ನು ಈ ಕೂಡಲೆ ಬಂಧಿಸುವAತೆ ಒತ್ತಾಯಿಸಿದ ಪ್ರತಿಭಟನಾಕಾರರು, ಇಲ್ಲದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಬೆಲವತ್ತ ರಾಮಚಂದ್ರ, ಸಮಾಜ ರಕ್ಷಣಾ ಸೇನೆಯ ರಾಜ್ಯಾಧ್ಯಕ್ಷ ಹನುಮಂತರಾಜು, ಉಪಾಧ್ಯಕ್ಷ ಶರತ್ ಕುಮಾರ್, ರಮ್ಮನಹಳ್ಳಿ ಗ್ರಾಮದ ಮುಖಂಡರಾದ ನಾಗರಾಜು, ರಮೇಶ್, ಸುರೇಶ್, ಚೆಲುವಯ್ಯ, ಗೋವಿಂದ, ಸಿದ್ದು, ಚೆನ್ನಯ್ಯ ಹಾಗು ಇನ್ನಿತರರು ಪಾಲ್ಗೊಂಡಿದ್ದರು