
ಮೈಸೂರು: ಪ್ರಾದೇಶಿಕ ಶಿಕ್ಷಣ ಸಂಸ್ಥೆ (ಆರ್ ಐಇ), ಮೈಸೂರಿನ ಆವರಣದಲ್ಲಿರುವ ಪಿಎಂ ಶ್ರೀ ಪ್ರಯೋಗಿಕ ಶಾಲೆಯನ್ನು ಕೇಂದ್ರೀಯ ವಿದ್ಯಾಲಯವಾಗಿ ಪರಿವರ್ತಿಸುವ ಪ್ರಸ್ತಾವನೆಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮೈಸೂರು ಘಟಕ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಈ ಕುರಿತು ಎನ್ಸಿಇಜರ್ಟಿ ನಿರ್ದೇಶಕರಿಗೆ ಆರ್ ಐಇ ಮೈಸೂರಿನ ಪ್ರಾಂಶುಪಾಲರ ಮೂಲಕ ಮೈಸೂರು ವತಿಯಿಂದ ಮನವಿ ಸಲ್ಲಿಸಲಾಯಿತು.
ಆರ್ ಐಇ ಮೈಸೂರಿನ ಪಿಎಂ ಶ್ರೀ ಪ್ರಯೋಗಿಕ ಶಾಲೆಯು ಶಿಕ್ಷಕರ ತರಬೇತಿ, ನವೀನ ಬೋಧನಾ ವಿಧಾನಗಳ ಪ್ರದರ್ಶನ, ಶೈಕ್ಷಣಿಕ ಪ್ರಯೋಗಗಳು ಹಾಗೂ ಸಂಶೋಧನಾ ಚಟುವಟಿಕೆಗಳಿಗೆ ಮಹತ್ವದ ವೇದಿಕೆಯಾಗಿದೆ. ಇಂತಹ ಶೈಕ್ಷಣಿಕ ಉದ್ದೇಶ ಹೊಂದಿರುವ ಸಂಸ್ಥೆಯನ್ನು ಕೇಂದ್ರೀಯ ವಿದ್ಯಾಲಯವಾಗಿ ಪರಿವರ್ತಿಸುವುದರಿಂದ ಅದರ ಮೂಲ ಉದ್ದೇಶಕ್ಕೆ ಧಕ್ಕೆಯಾಗುವ ಸಾಧ್ಯತೆ ಇದೆ ಎಂದು ಎಬಿವಿಪಿ ಅಭಿಪ್ರಾಯಪಟ್ಟಿದೆ.
ಮೈಸೂರಿನಲ್ಲಿ ಈಗಾಗಲೇ ಒಂದು ಕೇಂದ್ರೀಯ ವಿದ್ಯಾಲಯ ಕಾರ್ಯನಿರ್ವಹಿಸುತ್ತಿದ್ದು, ಹೆಚ್ಚುವರಿ ಕೇಂದ್ರೀಯ ವಿದ್ಯಾಲಯದ ಅಗತ್ಯವಿದ್ದಲ್ಲಿ ಹೊಸ ಕೇಂದ್ರೀಯ ವಿದ್ಯಾಲಯವನ್ನು ಪ್ರತ್ಯೇಕ ಸೂಕ್ತ ಸ್ಥಳದಲ್ಲಿ ಸ್ಥಾಪಿಸುವುದನ್ನು ಎಬಿವಿಪಿ ಸ್ವಾಗತಿಸುತ್ತದೆ. ಆದರೆ, ಆರ್ ಐಇ.ಮೈಸೂರಿನ ಪಿಎಂ ಶ್ರೀ ಪ್ರಯೋಗಿಕ ಶಾಲೆಯನ್ನು ಅದಕ್ಕಾಗಿ ಬಳಸುವುದನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದೆ.
ಆರ್ ಐಇನ ಮೈಸೂರಿನ ಶೈಕ್ಷಣಿಕ ವಾತಾವರಣ, ಪ್ರಯೋಗಿಕ ಶಾಲೆಯ ಉದ್ದೇಶ ಹಾಗೂ ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, ಸಂಬAಧಪಟ್ಟ ಅಧಿಕಾರಿಗಳು ಈ ಪ್ರಸ್ತಾವನೆಯನ್ನು ತಕ್ಷಣ ಮರುಪರಿಶೀಲಿಸಬೇಕು ಎಂದು ಂಃಗಿP ಮೈಸೂರು ಆಗ್ರಹಿಸಿದೆ.
ಈ ಮನವಿಗೆ ಸೂಕ್ತ ಸ್ಪಂದನೆ ದೊರೆಯದಿದ್ದಲ್ಲಿ, ಂಃಗಿP ಮೈಸೂರು ವತಿಯಿಂದ ಪ್ರಜಾಸತ್ತಾತ್ಮಕ ರೀತಿಯಲ್ಲಿ ಬಲಿಷ್ಠ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಎಬಿವಿಪಿ ಮೈಸೂರು ಜಿಲ್ಲಾ ಸಂಚಾಲಕ ನಂದನ್ ಕುಮಾರ್ ಹೆಚ್. ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ವಿಭಾಗ ಸಂಘಟನ ಕಾರ್ಯದರ್ಶಿ ಶಿವಕುಮಾರ್, ವಿಭಾಗ ಕಾರ್ಯಾಲಯ ಕಾರ್ಯದರ್ಶಿ ಮಹದೇವಸ್ವಾಮಿ , ನಗರ ಖೇಲ್ ಪ್ರಮುಖರಾದ ಗೌರವ್, ಕಾರ್ಯಕರ್ತರಾದ ತೇಜಸ್, ರಾಜೇಶ್, ವಿಜಯ್, ಶ್ರೀ ವತ್ಸಾವ್, ಮೌಲಿಕ, ರಶ್ಮಿ ಹಾಗೂ ಮಿಥಿಲ ಉಪಸ್ಥಿತರಿದ್ದರು .