Skip to main content

3Kaala News

ಸುಭಾಷಿತ 

ನಾವು ಮಾಡುವ ಕೆಲಸದಲ್ಲಿ ಸಂಪೂರ್ಣ ಶ್ರದ್ಧೆ ಮತ್ತು ಭಕ್ತಿ ಇದ್ದಾಗ ಮಾತ್ರ ಯಶಸ್ಸು ಒಲಿಯುತ್ತದೆ. ಅರ್ಧಮನಸ್ಸಿನಿಂದ ಮಾಡುವ ಕೆಲಸ ಎಂದಿಗೂ ಪರಿಪೂರ್ಣ ಫಲ ನೀಡಲಾರದು.

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ವಿಬಿ ಜಿ ರಾಮ್ ಜಿ ಬಲಗೊಳಿಸಲು ಜಾಬ್ ಕಾರ್ಡ್ ಮೇಳಜಿಲ್ಲೆಯಾದ್ಯಂತ 255 ಗ್ರಾಮ ಪಂಚಾಯಿತಿಗಳಲ್ಲೂ ಅಭಿಯಾನ ಆರಂಭ

ಮೈಸೂರು: ಪ್ರತಿ ಕುಟುಂಬಕ್ಕೆ ಉದ್ಯೋಗ ಭದ್ರತೆ ನೀಡುವ ಉದ್ದೇಶದೊಂದಿಗೆ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಅಜೀವಿಕ ಮಿಷನ್(ಗ್ರಾಮೀಣ)(ವಿಬಿಜಿರಾಮ್ ಜಿ) ಅನ್ನು ಮತ್ತಷ್ಟು ಬಲಪಡಿಸಿ ವಿಸ್ತರಿಸಲು ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲೂ ಜಾಬ್ ಕಾರ್ಡ್ ಮೇಳ ಆರಂಭವಾಗಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸೂಚನೆ ಮೇರೆಗೆ ಜಿಲ್ಲಾ ಪಂಚಾಯಿತಿ ನಿರ್ದೇಶನದಲ್ಲಿ ಜಿಲ್ಲೆಯ 255 ಗ್ರಾಮ ಪಂಚಾಯಿತಿಗಳಲ್ಲಿ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಅಜೀವಿಕ ಮಿಷನ್(ಗ್ರಾಮೀಣ)(ವಿಬಿ ಜಿ ರಾಮ್ ಜಿ) ಜಾಬ್ ಕಾರ್ಡ್ ಮೇಳ ನಡೆಸಲು ಮುಂದಾಗಿದೆ.
ಅಭಿಯಾನದ ಉದ್ದೇಶ: ಸದರಿ ಯೋಜನೆಯಡಿಯಲ್ಲಿ ಲಭ್ಯವಿರುವ ಅನೂಕೂಲಗಳ ಬಗ್ಗೆ ಜಾಗೃತಿ ಮೂಡಿಸಿ ಗ್ರಾಮೀಣ ಜನರ ಭಾಗವಹಿಸುವಿಕೆ ಹೆಚ್ಚಿಸುವುದು. ಗ್ರಾಮೀಣ ಜನರ ಜೀವನೋಪಾಯಕ್ಕೆ ಭದ್ರತೆ ಒದಗಿಸುವುದು. ಜಲಸಂರಕ್ಷಣೆ, ಅಂತರ್ಜಲ, ಮರುಪೂರಣ ಹಾಗೂ ದೀರ್ಘಕಾಲೀನ ಜೀವನೋಪಾಯಕ್ಕೆ ಆದ್ಯತೆ ನೀಡುವ ಮೂಲಕ ಬರ ನಿರ್ವಹಣೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಪಡಿಸಲಾಗುವುದು. ಸ್ವಗ್ರಾಮದಲ್ಲೇ ಉದ್ಯೋಗಾವಕಾಶ ಕಲ್ಪಿಸುವ ಮೂಲಕ ನಗರಗಳಿಗೆ ವಲಸೆ ಹೋಗುವುದನ್ನು ತಡೆಯುವುದು ಮೇಳದ ಉದ್ದೇಶವಾಗಿದೆ.
ಹೇಗಿರುತ್ತೇ ಮೇಳ: ಪ್ರತಿ ಮನೆ ಮನೆಗೂ ಭೇಟಿ ನೀಡಿ ಹಾಗೂ ಬೇಡಿಕೆಗಳ ಸ್ವೀಕರಿಸುವುದು. ಈವರೆಗೂ ನೋಂದಣಿಯಾಗದ ದುರ್ಬಲವರ್ಗದ ಕುಟುಂಬಗಳಿಗೆ ರೋಜ್ಗಾರ್ ಗ್ಯಾರಂಟಿ ಕಾರ್ಡ್ ವಿತರಣೆ ವಿತರಿಸುವುದು. ವಿಶೇಷಚೇತನರಿಗೆ ಹಾಗೂ ಲಿಂಗತ್ವ ಅಲ್ಪಸಂಖ್ಯಾತರಿಗೆ ಪ್ರತ್ಯೇಕ ರೋಜ್ಗಾರ್ ಗ್ಯಾರಂಟಿ ಕಾರ್ಡ್ ನೀಡುವುದು. ಸ್ಥಳದಲ್ಲೇ ಜಾಬ್ ಕಾರ್ಡ್ ನವೀಕರಣ, ಇ-ಕೆವೈಸಿ ಅಪ್ಡೇಟ್ ಮಾಡುವುದು. ಅಕುಶಲ ಕೆಲಸದ ಬೇಡಿಕೆ ಸ್ವೀಕೃತಿ ಮಾಡುವುದು. ವಿಬಿಜಿರಾಮ್ ಜಿ ಯೋಜನೆ ಕುರಿತು ಜಾಗೃತಿ ಮೂಡಿಸಲಾಗುವುದು.

ಬಾಕ್ಸ್
ಪ್ರತಿದಿನಕ್ಕೆ 382ರೂ. ದರದಲ್ಲಿ ಕೂಲಿ ನೀಡುವ ಜತೆಗೆ ಜಾಬ್ ಕಾರ್ಡ್ ಮೂಲಕ ಪ್ರತಿ ಕುಟುಂಬಕ್ಕೆ 125 ದಿನಗಳ ಕೆಲಸ ನೀಡುವ ದಿಸೆಯಲ್ಲಿ ಪ್ರತಿ ಮನೆ ಮನೆಗೆ ಭೇಟಿ ನೀಡುವುದು ಅಭಿಯಾನದ ಮೊದಲ ಆದ್ಯತೆಯಾಗಿದೆ. ಪ್ರತಿ ಕುಟುಂಬಕ್ಕೆ ಉದ್ಯೋಗ ಭದ್ರತೆ ನೀಡುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಕಾರದೊಂದಿಗೆ ಜಾಬ್ ಕಾರ್ಡ್ ಮೇಳವನ್ನು ಮೈಸೂರು ಜಿಲ್ಲೆಯಾದ್ಯಂತ ಎಲ್ಲಾ ಗ್ರಾಮ ಪಂಚಾಯಿತಿಯಲ್ಲಿ ಯಶಸ್ವಿಯಾಗಿ ನಡೆಸಲಾಗುತ್ತಿದೆ.
-ಎಸ್. ಯುಕೇಶ್ ಕುಮಾರ್, ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ, ಜಿ.ಪಂ, ಮೈಸೂರು.

ಬಾಕ್ಸ್
ಸಮಾನ ಕೂಲಿಯೊಂದಿಗೆ ಸಮಾನವೇತನ ನೀಡುವ ದಿಸೆಯಲ್ಲಿ ಜಿಲ್ಲೆಯ 255 ಗ್ರಾಮ ಪಂಚಾಯಿತಿಗಳಲ್ಲಿಯೂ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಅಜೀವಿಕ ಮಿಷನ್(ಗ್ರಾಮೀಣ)(ವಿಬಿ ಜಿ ರಾಮ್ ಜಿ) ಜಾಬ್ ಕಾರ್ಡ್ ಮೇಳ ಪ್ರಾರಂಭಗೊAಡಿವೆ. ಗ್ರಾಮೀಣ, ದುರ್ಬಲ ಜನರ ಜೀವನೋಪಾಯ ಭದ್ರತೆ ಒದಗಿಸಲು ಸಹಕಾರಿಯಾಗಲಿದೆ. ಜತೆಗೆ ಗ್ರಾಮೀಣ ಭಾಗ ಜನರ ಆರ್ಥಿಕ ಜೀವನ ಸುಧಾರಣೆಯೊಂದಿಗೆ ಜಲ ಸಂರಕ್ಷಣೆ ಪ್ರಮುಖ ದ್ಯೇಯವಾಗಿದೆ.
-ಭೀಮಪ್ಪ ಕ.ಲಾಳಿ, ಉಪಕಾರ್ಯದರ್ಶಿ(ಅಭಿವೃದ್ಧಿ), ಜಿಪಂ, ಮೈಸೂರು.