Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ವೈಟ್ ಟಾಪಿಂಗ್ ರಸ್ತೆ ಕಾಮಗಾರಿಗೆ ಶಾಸಕ ತನ್ವೀರ್ ಸೇಠ್ ಚಾಲನೆ


ಮೈಸೂರು ; ನಗರದ ಹೊರವಲಯದಲ್ಲಿರುವ ಮಣಿಪಾಲ್ ವೃತ್ತದಿಂದ ಮಿಲಿನಿಯಂ ವೃತ್ತದ ತನಕ 2.2ಕಿಮೀ ವೈಟ್ ಟಾಪಿಂಗ್ ರಸ್ತೆಗೆ ಎನ್‌ಆರ್ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಅವರು ಶನಿವಾರ ಭೂಮಿಪೂಜೆ ಸಲ್ಲಿಸಿ, ಕಾಮಗಾರಿಗೆ ಚಾಲನೆ ನೀಡಿದರು.
ಬಳಿಕ ಮಾತನಾಡಿ, ನಗರದಲ್ಲಿ ವಾಹನ ದಟ್ಟಣೆ ಹೆಚ್ಚಾಗಿರುವ ಕಾರಣದಿಂದ 12 ಪ್ರಮುಖ ರಸ್ತೆಗಳಿಗೆ ವೈಟ್ ಟ್ಯಾಪಿಂಗ್ ಕಾಂಕ್ರಿಟ್ ರಸ್ತೆಗೆ ಲೋಕೋಪಯೋಗಿ ಇಲಾಖೆ ಮೂಲಕ ಕಾಮಗಾರಿ ನಡೆಸಲು ಸರ್ಕಾರ ಅನುದಾನ ಬಿಡುಗಡೆ ಮಾಡಿದೆ.
ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೇ ಇದರ ಸಾಮೂಹಿಕ ಶಂಕುಸ್ಥಾಪನೆ ನಡೆದಿತ್ತು, ತಾಂತ್ರಿಕ ವರದಿ ಸಿದ್ದವಾದ ನಂತರ ದಸರಾ ಹಬ್ಬಕ್ಕೂ ಮುನ್ನ ಅಭಿವೃದ್ಧಿಪಡಿಸಬಹುದಾದ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದ್ದು, ಇದರಲ್ಲಿ ಎನ್‌ಆರ್ ಕ್ಷೇತ್ರದ ಮೂರು ರಸ್ತೆಗಳಿಗೆ ವೈಟ್ ಟ್ಯಾಪಿಂಗ್ ಮಾಡಲಾಗುತ್ತಿದೆ. ಪ್ರಮುಖವಾಗಿ ಇಂದು ಭೂಮಿಪೂಜೆ ನಡೆದಿರುವ ಮಣಿಪಾಲ್ ವೃತ್ತದಿಂದ ಮಿಲಿನಿಯಂ ವೃತ್ತದವರೆಗಿನ 2.2 ಕಿಮೀ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದ್ದು, ಈ ಕಾಮಗಾರಿಯನ್ನು ದಸರಾ ಹಬ್ಬಕ್ಕೂ ಮುನ್ನ ಮುಗಿಸಿ ಸಾರ್ವಜನಿಕರ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದರು.
ವೈಟ್ ಟಾಪಿಂಗ್ ರಸ್ತೆಗಳಿಗೆ ಒಟ್ಟು 121 ಕೋಟಿ ರೂ ಮೀಸಲು ಇಡಲಾಗಿದೆ, 67 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ, ಯಾವುದೇ ಸಮಸ್ಯೆ ಇಲ್ಲದ ನಿರ್ವಹಣೆ ವೆಚ್ಚ ಕಡಿಮೆಯಾಗಿ ರಸ್ತೆಗಳ ಬಾಳಿಕೆ ಮತ್ತು ಸಂಚಾರ ಗುಣಮಟ್ಟ ಉತ್ತಮವಾಗಿರುತ್ತದೆ. ಅದರಂತೆ ಮೈಸೂರು ನಗರದ ವ್ಯಾಪ್ತಿಯಲ್ಲಿನ ಅಧಿಕ ವಾಹನ ದಟ್ಟಣೆ ಇರುವ ಪ್ರಮುಖ ರಸ್ತೆಗಳನ್ನು ಗುರುತಿಸಿ, ಸದರಿ ರಸ್ತೆಗಳ ಧೀರ್ಘಬಾಳಿಕೆಯ ಉದ್ದೇಶದಿಂದ ಮೈಸೂರು ನಗರ ವ್ಯಾಪ್ತಿಯಲ್ಲಿನ ಪ್ರಮುಖ 12 ರಸ್ತೆಗಳಲ್ಲಿ ಒಟ್ಟು 46.088 ಕಿಮೀ ಉದ್ದಕ್ಕೆ ರೂ.393.85 ಕೋಟಿಗಳ ವೆಚ್ಚದಲ್ಲಿ ವೈಟ್ ಟಾಫಿಂಗ್ ಮಾಡಿ ರಸ್ತೆ ಅಭಿವೃದ್ಧಿ ಪಡಿಸುವ
ಕಾಮಗಾರಿಯನ್ನು ಕೈಗೊಳ್ಳಲು ಲೋಕೋಪಯೋಗಿ ಇಲಾಖೆಗೆ ವಹಿಸಲಾಗಿರುತ್ತದೆ ಎಂದು ಹೇಳಿದರು.
ವೈಟ್‌ಟಾಪಿಂಗ್ ಕಾಮಗಾರಿಯಲ್ಲಿ ವೈಟ್ ಟಾಪಿಂಗ್ ಕ್ಯಾರೇಜ್-ವೇ, ಮುಂದಿನ ದಿನಗಳಲ್ಲಿ ಒಳಚರಂಡಿ ನೀರು ಸರಬರಾಜು ಹಾಗೂ, ವಿದ್ಯುತ್ ಕೇಬಲ್‌ಗಳನ್ನು ಅಳವಡಿಸಲು ರಸ್ತೆಗೆ ಹೊಂದಿಕೊAಡAತೆ ಪೇವರ್ ಬ್ಲಾಕ್ ಅಳವಡಿಸಿ ಬಫರ್ ಜೋನ್ ಪ್ರಾವಧಾನ, ಪಾದಚಾರಿಗಳ ಸುಗಮ ಸಂಚಾರಕ್ಕೆ ಪುಟ್ ಪಾತ್ ಅಭಿವೃದ್ಧಿ ಕಾಮಗಾರಿ, ಮಳೆ ನೀರು ಸರಾಗವಾಗಿ ಹರಿಯಲು ಆರ್.ಸಿ.ಸಿ ಚರಂಡಿ ಮತ್ತು ಕಲ್ವರ್ಟ್ ನಿರ್ಮಾಣ, ರಸ್ತೆಯ ವಿಭಜಕಗಳಲ್ಲಿ ಪಾರಂಪರಿಕ ವಿದ್ಯುತ್ ದೀಪ ಅಳವಡಿಸುವುದು, ಹಾಲಿ ಇರುವ ರಸ್ತೆಯ ನೀರು ಸರಬರಾಜು ವ್ಯವಸ್ಥೆ ಹಾಗೂ ಒಳಚರಂಡಿಯ ಕೊಳವೆ ಮಾರ್ಗಗಳನ್ನು ಸ್ಥಳಾಂತರಿಸುವುದು ಇತ್ಯಾದಿಗಳು ಈ ಕಾಮಗಾರಿಯಲ್ಲಿವೆ ಎಂದರು.
ಈ ಸಂದರ್ಭದಲ್ಲಿ ಅಜೀಜ್ ಸೇಠ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಎಕ್ಬಾಲ್, ಕೆಪಿಸಿಸಿ ಸಂಯೋಜಕ ಶೌಕತ್ ಅಲಿಖಾನ್, ಮಜೀದ್ ಅಹಮದ್, ನಬಿಜಾನ್, ಮುಖಂಡರಾದ ನೂರ್ ಅಹಮದ್, ಅಬ್ದುಲ್ ವಸೀಂ, ಇರ್ಫಾನ್, ಸೈಯದ್ ಫಾರೂಖ್, ಅಫ್ತಾಬ್ ಅಫು, ಅಕ್ಮಲ್, ಶಾಕಿರಾ ಬೇಗಂ, ಎನ್.ಮಾದೇಗೌಡ, ಪ್ರದೀಪ್ ಚಂದ್ರ ಇತರರು ಇದ್ದರು.