
ಮೈಸೂರು; ರಂಗಯಾನಟ್ರಸ್ಟ್ ಕಾಲೇಜು ವಿದ್ಯಾರ್ಥಿಗಳಿಗೆ ನಡೆಸಿದ ಒಂದು ತಿಂಗಳ ರಂಗ ಕಾರ್ಯಾಗಾರವನ್ನು ಕೇಂದ್ರ ಸಂಸ್ಕೃತಿ ಸಚಿವಾಲಯ ಮತ್ತು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಸಹಯೋಗದೊಂದಿಗೆ ಆಯೋಜಿಸಿ, ಅದರಲ್ಲಿ ಸಿದ್ದಗೊಂಡ ನಾಟಕಗಳನ್ನು ಮೈಸೂರಿನ ಹಿರಿಯರಂಗಕರ್ಮಿ ಬಿ.ಎಂ ರಾಮಚಂದ್ರಅವರ ಹೆಸರಿನಲ್ಲಿ“ಬಣ್ಣದ ಮಾಂತ್ರಿಕ ಬಿ.ಎಂ.ರಾಮಚ0ದ್ರ ವಿದ್ಯಾರ್ಥಿ ನಾಟಕೋತ್ಸವವನ್ನು ನಗರದ ಕಲಾಮಂದಿರದಲ್ಲಿರುವ ಕಿರುರಂಗಮ0ದಿರದಲ್ಲಿ ಆಯೋಜಿಸಲಾಗಿತ್ತು.
ವಿದ್ಯಾರ್ಥಿಗಳಿಂದ, ವಿದ್ಯಾರ್ಥಿಗಳಿಗಾಗಿ, ವಿದ್ಯಾರ್ಥಿಗಳಿಗೋಸ್ಕರ ಎಂಬ ಶೀರ್ಷಿಕೆಯಡಿಆಯೋಜನೆಗೊಂಡಿದ್ದ ಈ ನಾಟಕೋತ್ಸವದಲ್ಲಿ ಮೈಸೂರಿನ ಸರ್ಕಾರಿ ಪದವಿ ಪೂರ್ವಕಾಲೇಜುಒಂಟಿಕೊಪ್ಪಲು, ಸರ್ಕಾರಿ ಪದವಿ ಪೂರ್ವಕಾಲೇಜುಮಂಚೇಗೌಡನಕೊಪ್ಪಲು, ಮಹಾರಾಜಕಾಲೇಜು, ಹಾರ್ಡ್ವಿಕ್ಪದವಿ ಪೂರ್ವಕಾಲೇಜು, ಎಂ.ಐ.ಟಿ ಪ್ರಥಮದರ್ಜೆಕಾಲೇಜು, ಎಸ್.ಡಿ.ಎಂ ಮಹಿಳಾ ಮಹಾವಿದ್ಯಾಲಯ ಹಾಗೂ ಕುವೆಂಪುನಗರದ ಸರ್ಕಾರಿಪ್ರಥಮದರ್ಜೆ ಕಾಲೇಜುಗಳ ಸಹಕಾರ ದಿಂದ ಒಟ್ಟು 120 ಹೊಸ ಯುವ ಕಲಾವಿದರು ರಂಗಭೂಮಿಗೆ ಪಾದಾರ್ಪಣೆ ಮಾಡಿದರು.
ಒಟ್ಟು 5 ದಿನಗಳ ನಾಟಕೋತ್ಸವದಲ್ಲಿ ಮೊದಲ ದಿನ ಸುಂದರೇಶ್ ಮತ್ತು ತಂಡದವರಿAದ ವಿವಿಧ ಜಾನಪದ ಕಲಾ ಪ್ರಕಾರಗಳ ಮೆರವಣಿಗೆಯ ಮೂಲಕ ಕಾರ್ಯಕ್ರಮದ ಅತಿಥಿಗಳನ್ನು ವೇದಿಕೆಗೆ ಕರೆತರಲಾಯಿತು, ಕಾರ್ಯಕ್ರಮದಲ್ಲಿ ಮೈಸೂರಿನ ಹೆಸರಂತ ನೃತ್ಯಸಂಸ್ಥೆಗಳ ನೂರಕ್ಕೂ ಹೆಚ್ಚು ಮಕ್ಕಳು ಬಿ.ಎಂ ರಾಮಚಂದ್ರ ಅವರಿಗೆ ಏಕಕಾಲದಲ್ಲಿ ನೃತ್ಯ ನಮನವನ್ನು ಸಲ್ಲಿಸಿದರು. ನಚಿತರ ಅಂತರಾಷ್ಟಿಯ ನೃತ್ಯಕಲಾವಿದೆ ಡಾ.ವಸುಂದರಾ ದೊರೆಸ್ವಾಮಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು, ಕನ್ನಡ ಮತ್ತು ಸಂಸೃತಿಇಲಾಖೆಯ ನಿಕಟಪೂರ್ವಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ, ಧಾರವಾಡದ ಹಿರಿಯರಂಗ ನಿರ್ದೇಶಕಡಾ.ಶಶಿಧರ ನರೇಂದ್ರ ಅವರಿಗೆ ರಂಗಗೌರವ ಸಲ್ಲಿಸಲಾಯಿತು.ವೇದಿಕೆಯಲ್ಲಿ ಶ್ರೀಚಿದ್ರೂಪಾನಂದ ಸರಸ್ವತಿ,ಗೀತಾ ಮೋಂಟಡ್ಕ, ಡಾ.ಭುವನೇಶ್ವರಿ ಮತ್ತು ಸಂಸ್ಥೆಯ ಅಧ್ಯಕ್ಷ ವಿಕಾಸ್ಚಂದ್ರ ಉಪಸ್ಥಿತರಿದ್ದರು.ನಂತರ ಪುನೀತ್ ನಿರ್ದೇಶನದ ಜ್ಞಾತಪರ್ವ ನಾಟಕ ಪ್ರದರ್ಶನ ಕಂಡಿತು.
ಆನ0ದಎ0.ಎ0 ನಿರ್ದೇಶನದ ಹೊರೆಯಾಲ ದೊರೆಸ್ವಾಮಿ ಅವರ “ಪೆದ್ದರಊರಿನ ಮಿಡಿಚಂಭಟ್ಟ” ನಾಟಕವನ್ನು ಮೈಸೂರಿನ ಮಹಾರಾಜಕಾಲೇಜು ವಿದ್ಯಾರ್ಥಿಗಳ ರಂಗ ಪ್ರಸ್ತುತಿಯ ಬಳಿಕ ಏಕತಾರಿತಂಡದ ಸದಸ್ಯರು ರಂಗಗೀತೆಗಳ ಕಾರ್ಯಕ್ರಮ ನಡೆಸಿಕೊಟ್ಟರು.ನಂತರ ಮೈಸೂರಿನ ಎಂ.ಐ.ಟಿಕಾಲೇಜು ವಿದ್ಯಾರ್ಥಿಗಳು ವಿರೋಜನ್ರಾಜೇಅರಸ್ ನಿರ್ದೇಶನದಲ್ಲಿ “ಕಿತ್ತಳೆ ಬಣ್ಣದಕೂದಲು” ನಾಟಕ ಪ್ರದರ್ಶನ ಕಂಡಿತು.ಕಾರ್ಯಕ್ರಮದಲ್ಲಿ ಮೈಸೂರಿನ ಹಿರಿಯರಂಗಕರ್ಮಿ ಸುಮತಿ, ಮಹಾರಾಜಕಾಲೇಜು ಪ್ರಾಂಶುಪಾಲರಾದಡಾ.ವಿ.ಶಣ್ಮುಗA, ಎಂ.ಐ.ಟಿಕಾಲೇಜು ಪ್ರಾಂಶುಪಾಲ ಪ್ರೊ.ಅರವಿಂದ್ ಜಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಲಾಮಂದಿರದ ಸುಚಿತ್ರ ಕಲಾ ಗ್ಯಾಲರಿಯಲ್ಲಿ ನೇಪಥ್ಯಕಲಾವಿದರಕೊಡುಗೆ, ಸವಾಲುಗಳು, ಸಾಮಾಜಿಕಜವಾಬ್ದಾರಿ, ಬದ್ದತೆ ಹಾಗೂ ಶಿಕ್ಷಣದಲ್ಲಿ ರಂಗಭೂಮಿಯ ವಿಸ್ತಾರ ಎಂಬ ವಿಷಯದಲ್ಲಿ ವಿಚಾರ ಸಂಕಿರಣಆಯೋಜನೆಗೊAಡಿತ್ತು, ಕಾರ್ಯಕ್ರಮವನ್ನು ಹಿರಿಯರಂಗ ನಿರ್ದೇಶಕ ಸಿ.ಬಸವಲಿಂಗಯ್ಯ ಉದ್ಘಾಟಿಸಿದರು. ಬಳ್ಳಾರಿಯ ಡಾ.ಅಣ್ಣಜಿಕೃಷ್ಣರೆಡ್ಡಿ, ಡಾ.ಭುವನೇಶ್ವರಿ, ಅರುಣ್ ಮೂರ್ತಿ, ಮನಸಾ ಮುಸ್ತಫಾ ಮತ್ತುಅಶ್ವಥ್ಕದಂಬ ತಮ್ಮ ವಿಚಾರ ಮಂಡಿಸಿದರು.ವೇದಿಕೆಯಲ್ಲಿ ಕನ್ನಡ ಮತ್ತು ಸಂಸ್ಕೃತಿಇಲಾಖೆಯ ಜ0ಟಿ ನಿರ್ದೇಶಕಿ ನಿರ್ಮಲ ಮಠಪತಿ, ಹಿರಿಯ ರಂಗಕರ್ಮಿಗಳದ ಬಿ.ಎಂ ರಾಮಚಂದ್ರ, ರಾಜಶೇಖರಕದಂಬ, ಗೀತಾ ಮೋಂಟಡ್ಕ, ವಿಕಾಸ್ಚಂದ್ರ ಉಪಸ್ಥಿತರಿದ್ದರು.
ಮೈಸೂರಿನ ವಿವಿಧ ನೃತ್ಯ ಸಂಸ್ಥೆಗಳು ನೃತ್ಯ ವೈವಿಧ್ಯಕರ್ಯಕ್ರಮವನ್ನು ನಡೆಸಿಕೊಟ್ಟರು ಸಂಜೆಡಾ.ಎಚ್.ಎಸ್ ವೆಂಕಟೇಶಮೂರ್ತಿಅವರ “ಚಿತ್ರಪಟ” ನಾಟಕವನ್ನು ಯಶೋಪ್ರಿಯಾ ನಿರ್ದೇಶನದಲ್ಲಿಎಸ್.ಡಿ.ಎಂ ಮಹಿಳಾ ಮಹಾವಿದ್ಯಾಲಯ ವಿದ್ಯಾರ್ಥಿಗಳು ಅಭಿನಯಿಸಿದರು. ರಾಜೇಂದ್ರಕಾರ0ತರ ಮುದ್ದಣ್ಣನ ಪ್ರಮೋಷನ್ ಪ್ರಸಂಗ ನಾಟಕವನ್ನು ವಿವೇಕ್ಎಚ್.ಜಿಅವರ ನಿರ್ದೇಶನದಲ್ಲಿ ಮೈಸೂರಿನಹಾರ್ಡ್ವಿಕ್ ಪದವಿ ಪೂರ್ವಕಾಲೇಜು ವಿದ್ಯಾರ್ಥಿಗಳು ಅಭಿನಯಿಸಿದರು, ಎಐ ಗಂಡ ಬ್ಲೂಟಿಕ್ ಹೆಂಡತಿ ನಾಟಕ ಪ್ರದರ್ಶನಕಂಡಿತು. ಹ್ಯಾಟಿರಮೇಶ್ಅವರ “ಮಕ್ಕಳ ರಾಜ್ಯ” ನಾಟಕವನ್ನು ಶಂಕರ್ಆರ್ ಕೆ ನಿರ್ದೇಶನದಲ್ಲಿ ಸರ್ಕಾರಿ ಪದವಿ ಪೂರ್ವಕಾಲೇಜು ಮಂಚೇಗೌಡನಕೊಪ್ಪಲು ವಿದ್ಯಾರ್ಥಿಗಳು ಅಭಿನಯಿಸಿದರು ನಂತರ ಜಯ0ತ್ಕಾಯ್ಕಿಣಿ ಅವರ ಸೇವಂತಿ ಪ್ರಸಂಗ ನಾಟಕವನ್ನು ಅರ್ಚನಾ ಪರಮೇಶ್ವರ ಹೆಗಡೆಅವರ ನಿರ್ದೇಶನದಲ್ಲಿಸರ್ಕಾರಿ ಪದವಿ ಪೂರ್ವಕಾಲೇಜುಒಂಟಿಕೊಪ್ಪಲು ವಿದ್ಯಾರ್ಥಿಗಳು ಅಭಿನಯಿಸಿದರು. ಬಳಿಕ ಬಿ.ಎಂ ರಾಮಚಂದ್ರಅವರು ನಡೆದುಬಂದ ಹಾದಿಯನ್ನು ಮೊಲಕು ಹಾಕುವ “ ರಾಮಣ್ಣರ ನೆನಪಿನ ಪುಟಗಳು” ಕಾರ್ಯಕ್ರಮದ ನಂತರನಡೆದ ಸಮರೋಪ ಸಮಾರಂಭದಲ್ಲಿಪ್ರೊ.ರಾಜಪ್ಪ ದಳವಾಯಿ ಸಮಾರೋಪ ನುಡಿಗಳನ್ನಾಡಿದರು ವೇದಿಕೆಯಲ್ಲಿ ಕನ್ನಡ ಮತ್ತು ಸಂಸ್ಕೃತಿಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಂ.ಡಿ ಸುದರ್ಶನ್, ಹಿರಿಯರಂಗ ಕರ್ಮಿ ಜನಾರ್ಧನ್ (ಜನ್ನಿ) ರಂಗಸಮಾಜ ಸದಸ್ಯ ಸುರೇಶ್ ಬಾಬು, ಶ್ರೀಕಂಠಯ್ಯ, ಮಂಜುಳಾ, ಬಿ.ಎಂ ರಾಮಚಂದ್ರ, ಗೀತಾ ಮೋಂಟಡ್ಕ, ಡಾ.ಭುವನೇಶ್ವರಿ, ಸಂಸ್ಥೆಯ ಅಧ್ಯಕ್ಷ ಶ್ರೀ ವಿಕಾಸ್ಚಂದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.



