Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಮುಡಾದಿಂದ ಅಕ್ರಮವಾಗಿ ಹಂಚಿಕೆಯಾಗಿರುವ ಎಲ್ಲಾ 4350 ನಿವೇಶನಗಳ ಹಂಚಿಕೆಯನ್ನು ರದ್ದುಗೊಳಿಸಿ; ಶಾಸಕ ಟಿ.ಎಸ್.ಶ್ರೀವತ್ಸ ಆಗ್ರಹ


ಮೈಸೂರು: ಈ ಹಿಂದಿನ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ 2019ರಿಂದ 2024ರ ತನಕ 50:50 ಅನುಪಾತದಲ್ಲಿ ಹಂಚಿಕೆ ಆಗಿರುವ 4350 ಬದಲಿ ನಿವೇಶನಗಳ ಹಂಚಿಕೆಯನ್ನೂ ಕೂಡಲೇ ರದ್ದುಪಡಿಸಬೇಕು’ ಎಂದು ಮೈಸೂರಿನ ಕೃಷ್ಣರಾಜ ಕ್ಷೇತ್ರದ ಶಾಸಕ ಟಿ.ಎಸ್. ಶ್ರೀವತ್ಸ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ಭಾನುವಾರ ತಮ್ಮ ಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಡಾದಲ್ಲಿ ಒಟ್ಟು 5 ಸಾವಿರ ಕೋಟಿ ರೂ ಮೌಲ್ಯದ 4350 ನಿವೇಶಗಳನ್ನು ಬದಲಿ ನಿವೇಶನಗಳನ್ನಾಗಿ ಹಂಚಿಕೆ ಮಾಡಿ ಭಾರೀ ಅಕ್ರಮ ಎಸಗಲಾಗಿದೆ. ಈ ನಿವೇಶನಗಳ ಹಂಚಿಕೆಯನ್ನೆಲ್ಲಾ ರದ್ದುಪಡಿಸಿ, ವಾಪಾಸ್ ಸರ್ಕಾರಕ್ಕೆ ತೆಗೆದುಕೊಂಡು ನಿವೇಶನವಿಲ್ಲದ ಸಾಮಾನ್ಯ ಜನರಿಗೆ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿ ನಾವು ಹೋರಾಟ ನಡೆಸಿದೆವು. ಇದರಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರ ಪತ್ನಿ ಪಾರ್ವತಿಯವರು ಪಡೆದಿದ್ದ 14 ನಿವೇಶನಗಳನ್ನು ಮುಡಾಗೆ ವಾಪಾಸ್ ನೀಡಿದರು. ಪ್ರಕರಣಕ್ಕೆ ಸಂಬAಧಿಸಿದAತೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದರೂ ಲೋಕಾಯುಕ್ತರ ಮುಂದೆ ಹಾಜರಾಗಿ ವಿZ್ಫರಣೆಯನ್ನು ಎದುರಿಸಿದರು. ಇಡೀ ಪ್ರಕರಣದಲ್ಲಿ ಸಿದ್ದರಾಮಯ್ಯನವರ ಕುಟುಂಬ ಕಪ್ಪು ಚುಕ್ಕೆ, ಪರಿತಾಪವನ್ನು ಎದುರಿಸುವಂತಾಯಿತು. ಇಡೀ ಕುಟುಂಬವನ್ನು ದಾರಿತಪ್ಪಿಸಿದ ಅಧಿಕಾರಿಗಳಿಗೆ ಇನ್ನೂ ಕೂಡ ಕಠಿಣ ಶಿಕ್ಷೆಯಾಗಿಲ್ಲ. ಯಾಕೇ ಅವರುಗಳನ್ನು ರಕ್ಷಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಪ್ರಶ್ನಿಸಿದರು. ‘ಮುಡಾ ಪ್ರಕರಣದಿಂದ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಕುಟುಂಬವೇ ತಲೆ ತಗ್ಗಿಸುವಂತೆ ಆಯಿತು. ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ ಅಕ್ರಮವಾಗಿ ನಿವೇಶನ ಹಂಚಿಕೆ ಮಾಡಿ ಮುಜುಗರಕ್ಕೆ ಕಾರಣರಾದ ಹಾಗೂ ಈ ಅಕ್ರಮದ ರುವಾರಿಗಳಾದ ಮಾಜಿ ಆಯುಕ್ತರಾದ ಡಿ.ಬಿ. ನಟೇಶ್ ಹಾಗೂ ದಿನೇಶ್ ಮೇಲೆ ಸರ್ಕಾರ ಕ್ರಮ ಏಕೆ ಕೈಗೊಂಡಿಲ್ಲ. ಅಧಿಕಾರಿಗಳಿಂದ ನಿಮಗೆ ಸಂದಾಯ ಆಗಿರುವ ಉಡುಗೊರೆಗಳ ಕಾರಣಕ್ಕೆ ಹಿಂದೇಟು ಹಾಕುತ್ತಿದ್ದೀರ’ ಎಂದು ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು.
ಡಾ.ಯತೀಂದ್ರ ಸಿದ್ದರಾಮಯ್ಯನವರು ನಗರಾಭಿವೃದ್ಧಿ ಸಚಿವರಾದ ಬಳಿಕ ಈಗ 1150 ಬದಲಿ ನಿವೇಶನಗಳ ಹಂಚಿಕೆ ರದ್ದುಮಾಡಿರುವ ಸರ್ಕಾದ ಆದೇಶ ಹೊರಡಿಸಿರುವುದು ಸ್ವಾಗತಾರ್ಹ. ಆದರೆ ರದ್ದುಪಡಿಸಲಾಗಿರುವ ನಿವೇಶನಗಳು ಯರ‍್ಯಾರಿಗೆ ಸೇರಿವೆ, ಅವುಗಳು ಎಲ್ಲೆಲ್ಲಿ ಇವೆ ಎಂಬ ಮಾಹಿತಿಯನ್ನು ಹೊರ ಹಾಕಿ ಬಹಿರಂಗಪಡಿಸಿಲ್ಲ. ಕೂಡಲೇ ಬಹಿರಂಗಗೊಳಿಸಬೇಕು. 2023ರ ಮಾರ್ಚ್ 14ರ ನಂತರದಲ್ಲಿ ಹಂಚಿಕೆ ಆಗಿರುವ ನಿವೇಶನಗಳನ್ನು ಮಾತ್ರ ರದ್ದುಮಾಡಿರುವುದು ಸರಿಯಲ್ಲ. 50:50 ಅನುಪಾತದಲ್ಲಿ ಬದಲಿ ನಿವೇಶನಗಳ ಹಂಚಿಕೆ ಜಾರಿಯಾದ ದಿನದಿಂದ ಆಗಿರುವ ಎಲ್ಲ ಹಂಚಿಕೆಗಳನ್ನೂ ವಾಪಸ್ ಪಡೆಯಬೇಕು’ ಎಂದು ಆಗ್ರಹಿಸಿದರು.
ಸಚಿವ ಡಾ. ಯತೀಂದ್ರ ಅವರು ಆಗಸ್ಟ್ 18ರಂದು ವಿಧಾನಸಭೆಯಲ್ಲಿ ನನ್ನ ಪ್ರಶ್ನೆಗೆ ನೀಡಿರುವ ಲಿಖಿತ ಉತ್ತರದಲ್ಲಿ, ಮುಡಾ ಅಕ್ರಮಗಳ ಕುರಿತು ರಚಿಸಿದ್ದ ಉನ್ನತ ಮಟ್ಟದ ತಾಂತ್ರಿಕ ಸಮಿತಿಯು ಇನ್ನೂ ಸರ್ಕಾರಕ್ಕೆ ವರದಿ ನೀಡಿಲ್ಲ ಎಂದುಹೇಳಿದ್ದರು. ಆದರೆ ಮರುದಿನವೇ ಇದೇ ಸಮಿತಿ ವರದಿ ಆಧರಿಸಿ ಅಕ್ರಮ ನಿವೇಶನಗಳ ಹಂಚಿಕೆ ರದ್ದು ಆದೇಶವನ್ನು ಹೊರಡಿಸಿದ್ದಾರೆ. ರಾತ್ರೋರಾತ್ರಿ ಸಮಿತಿ ವರದಿ ಸಮಿತಿ ವರದಿ ಸ್ವೀಕರಿಸಿ ಅದೇಶ ಹೊರಡಿಸಲು ಸಾಧ್ಯವೇ? ಸದನಕ್ಕೆ ತಪುö್ಪ ಮಾಹಿತಿ ನೀಡಿದ್ದು ಏಕೆ?’ ಎಂದು ಟಿ.ಎಸ್.ಶ್ರೀವತ್ಸ ಪ್ರಶ್ನಿಸಿದರು.
ಜ್ಞಾನ ಗಂಗಾ ಸಹಕಾರ ಸಂಘದಿAದ 848 ನಿವೇಶನಗಳನ್ನು ಹಂಚಿಕೆ ಮಾಡಿ, ಅಕ್ರಮವಾಗಿ ಖಾತೆ ಮಾಡಿಕೊಟ್ಟಿದ್ದಾರೆ. ಇದನ್ನೂ ಕೂಡಲೇ ರದ್ದುಪಡಿಸಬೇಕು. ಹಾಗೆನೇ ಚಾಮುಂಡೇಶ್ವರಿ ಸಂಘದವರು ದಟ್ಟಗಳ್ಳಿಯಲ್ಲಿ ಅಕ್ರಮವಾಗಿ ಹಂಚಿರುವ 48 ನಿವೇಶನಗಳನ್ನು ರದ್ದುಗೊಳಿಸಬೇಕು. ಅಲ್ಲಿಯ ತನಕ ನನ್ನ ಹೋರಾಟ ಮುಂದುವರಿಯುತ್ತದೆ. ಈಗಾಗಲೇ ನಾನು ಲೋಕಾಯುಕ್ತರಿಗೆ, ರಾಜ್ಯಪಾಲರಿಗೆ, ಹೈಕೋರ್ಟ್ ನ್ಯಾಯಾಧೀಶರಿಗೆ ದೂರು ನೀಡಿದ್ದೆನೆ, ಕಾನೂನು ಹೋರಾಟವನ್ನು ಕೂಡ ಮುಂದುವರಿಸುತ್ತೇನೆ ಎಂದು ತಿಳಿಸಿದರು.
ಬಿಜೆಪಿ ಅವಧಿಯಲ್ಲಿ ಅಕ್ರಮ ನಡೆದಿದ್ದರೆ ಅದನ್ನೂ ತನಿಖೆಗೆ ಒಳಪಡಿಸಿ. ನಮ್ಮ ಸ್ವಾಗತವಿದೆ’ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ನಗರಪಾಲಿಕೆಯ ಮಾಜಿ ಮೇಯರ್ ಶಿವಕುಮಾರ್, ಮಾಜಿ ಉಪಮೇಯರ್ ರೂಪಾ, ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಸುಬ್ಬಣ್ಣ, ನಗರ ಪ್ರಧಾನ ಕಾರ್ಯದರ್ಶಿ ಸೋಮಸುಂದರ್, ವಿಶ್ವೇಶ್ವರಯ್ಯ, ಕೆ.ಆರ್.ಕ್ಷೇತ್ರದ ಬಿಜೆಪಿ ಅಧ್ಯಕ್ಷ ಗೋಪಾಲರಾಜೇ ಅರಸ್, ನಗರ ವಕ್ತಾರ ಮೋಹನ್, ಮಾಧ್ಯಮ ಸಂಚಾಲಕ ಮಹೇಶ್ ರಾಜೇ ಅರಸ್, ಕೇಬಲ್ ಮಹೇಶ್ ಮತ್ತಿತರರು ಉಪಸ್ಥಿತರಿದ್ದರು.