Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಕಬಿನಿ – ಕಾವೇರಿ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಬಿಡಲು ಆಗ್ರಹಿಸಿ ರೈತರಿಂದ ಪ್ರತಿಭಟನೆ


ಮೈಸೂರು; ಕಾವೇರಿ-ಕಬಿನಿ ಜಲಾಶಯ ವ್ಯಾಪ್ತಿಯ ಅಚ್ಚುಕಟ್ಟು ಪ್ರದೇಶಗಳಲ್ಲಿನ ನಾಲೆಗಳಿಗೆ ಕೂಡಲೇ ನೀರು ಹರಿಸುವಂತೆ ಆಗ್ರಹಿಸಿ ನಗರದಲ್ಲಿ ಸೋಮವಾರ ರೈತರು ಪ್ರತಿಭಟನೆ ನಡೆಸಿದರು.
ನಗರದ ಸಿದ್ಧಾರ್ಥನಗರದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಮುಂದೆ ಜಮಾಯಿಸಿದ ಪ್ರತಿಭಟನಾಕಾರರು ಕೆಲಕಾಲ ಪ್ರತಿಭಟನಾ ಧರಣಿ ನಡೆಸಿ ನಾನಾ ಘೋಷಣೆಗಳನ್ನು ಕೂಗಿದರು.
ಈ ವೇಳೆ ಮಾತನಾಡಿದ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್, ಕಬಿನಿ ಜಲಾಶಯ ಭರ್ತಿಯಾಗಿ 25 ದಿನಗಳು ಕಳೆದಿದೆ. ಅಚ್ಚುಕಟ್ಟು ಭಾಗದ ರೈತರ ಬೆಳೆಗಳಿಗೆ ನೀರು ಬಿಡಬೇಕಾದ ರಾಜ್ಯ ಸರ್ಕಾರ, ತಮಿಳುನಾಡಿಗೆ ನೀರನ್ನು ಹರಿಸಿದ ಕಾರಣ, ತುಂಬಿದ ಜಲಾಶಯ 10 ಅಡಿಗಳಷ್ಟು ಖಾಲಿಯಾಗಿದೆ. ಈಗ ರೈತರನ್ನು ಮರೆಮಾಚಿ ನಿರ್ಧಾರ ಕೈಗೊಳ್ಳಲು ಬೆಂಗಳೂರಿನಲ್ಲಿ ಸಭೆ ಕರೆದಿದ್ದಾರೆ. ಇದು ರೈತ ದ್ರೋಹಿ ಕಾರ್ಯವಾಗಿದೆ ಎಂದು ರಾಜ್ಯ ಸರ್ಕಾರವನ್ನು ಕಟುವಾಗಿ ಟೀಕಿಸಿದರು.
ಕಬಿನಿ ಕಾವೇರಿ ಜಲಾಶಯ ಕಟ್ಟಿರುವುದು ರಾಜ್ಯದ ರೈತರ ಹಿತ ಶಕ್ತಿಗಾಗಿ ಎಂಬುದನ್ನು ಮರೆತು, ರಾಜ್ಯ ಸರ್ಕಾರ ತಮಿಳುನಾಡಿನ ನೀರುಗಂಟಿ ಕೆಲಸ ಮಾಡುತ್ತಿದೆ. ರೈತರ ಬೆಳೆಗಳಿಗೆ ನೀರು ಹರಿಸಲು ನಿರ್ಧಾರ ಕೈಗೊಳ್ಳಬೇಕು. ಕೂಡಲೇ ತಮಿಳುನಾಡಿಗೆ ಬಿಡುತ್ತಿರುವ ನೀರು ನಿಲ್ಲಿಸಬೇಕು. ಜಲಾಶಯ ಖಾಲಿಯಾಗುವುದನ್ನು ತಪ್ಪಿಸಬೇಕು, ಇಲ್ಲದಿದ್ದರೆ ರೈತರೇ ಕಬಿನಿ ಜಲಾಶಯ ವಶಕ್ಕೆ ಪಡೆಯಬೇಕಾಗುತ್ತದೆ ಎಂದು ಎಚ್ಚರಿಸಿದರು
ರೈತ ಮುಖಂಡ ಹತ್ತಳ್ಳಿ ದೇವರಾಜ್ ಮಾತನಾಡಿ, ಕಬಿನಿ ಅಚ್ಚುಕಟ್ಟು ಭಾಗದಲ್ಲಿ ನೀರಾವರಿ ಸಲಹ ಸಮಿತಿ ಸಭೆ ನಡೆಸಲು ಜಿಲ್ಲಾ ಮಂತ್ರಿಗಳಿಗೆ ಸಭಾಂಗಣ ಸಿಗಲಿಲ್ಲವೇ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಲಕ್ಷಿ÷್ಮಕಾಂತ ರೆಡ್ಡಿ ಮನವಿ ಸ್ವೀಕರಿಸಿ ಮಾತನಾಡಿ, ಇಂದು ನಾನು ಬೆಂಗಳೂರಿನ ಸಭೆಗೆ ಹೋಗುತ್ತಿದ್ದೇನೆ. ಪ್ರತಿಭಟನ ನಿರತ ರೈತರ ಅಭಿಪ್ರಾಯವನ್ನ ಸಭೆಯ ಮುಂದೆ ಮಂಡಿಸುತ್ತೇನೆ ಎಂದು ತಿಳಿಸಿದರು
ಪ್ರತಿಭಟನೆಯಲ್ಲಿ ಮುಖಂಡರುಗಳಾದ ಬರಡನಪುರ ನಾಗರಾಜ್, ಕಿರಗಸೂರು ಶಂಕರ್, ನೀಲಕಂಠಪ್ಪ,ವರಕೂಡ ನಾಗೇಶ, ಪೈಲ್ವಾನ್ ವೆಂಕಟೇಶ್, ಕೆ.ಜಿ.ಗುರುಸ್ವಾಮಿ, ಕುರುಬೂರು ಸಿದ್ದೇಶ್, ಗೌರಿಶಂಕರ ಪ್ರದೀಪ್, ಬಿ.ಪಿ.ಪರಶಿವಮೂರ್ತಿ, ಸಾತಗಳ್ಳಿ ಬಸವರಾಜ,
ಕೋಟೆ ಸುನೀಲ್, ಕೆಂಡಗಣಪ್ಪ, ಅಂಬಳೆ ಮಂಜುನಾಥ್, ವಾಚ್ ಕುಮಾರ್, ಕಾಟೂರು ನಾಗೇಶ್, ಹೆಗ್ಗೊಟ್ಟಾರ ಶಿವಸ್ವಾಮಿ, ನಂಜುAಡಸ್ವಾಮಿ, ಮಂಜು, ಮಾರ್ಬಳ್ಳಿ ಶಿವಣ್ಣ, ಮಹೇಶ್, ಮಿಲಿಟರಿ ಕುಮಾರ್, ನಂಜುAಡ, ಉಮೇಶ್, ಮಾರ್ಬಳ್ಳಿ ಬಸವರಾಜ, ಬರಡನಪುರ ಮಹೇಶ್ ಸೇರಿದಂತೆ ನೂರಾರು ಮಂದಿ ರೈತರು ಭಾಗವಹಿಸಿದ್ದರು.