Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ರಾಹುಲ್ ಗಾಂಧಿ ಈ ದೇಶದಲ್ಲಿ ಇರುವುದಕ್ಕೆ ನಾಲಾಯಕ್: ಸಚಿವ ಸೋಮಣ್ಣ


ಮೈಸೂರು; ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಮ್ಮ ದೇಶದಲ್ಲಿ ಇರುವುದಕ್ಕೆ ನಾಲಾಯಕ್ ಆಗಿದ್ದಾರೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ವಾಗ್ದಾಳಿ ನಡೆಸಿದರು.
ಪೊಲೀಸ್ ಠಾಣೆಯಲ್ಲಿ ಅಮಿತ್ ಶಾ ಫೋಟೋ ನೋಡಿ ರಾಹುಲ್‌ಗಾಂಧಿ ಕಿಡಿಕಾರಿರುವುದಕ್ಕೆ ಪ್ರತಿಕ್ರಿಯಿಸಿ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,
ರಾಹುಲ್ ಗಾಂಧಿಗೆ ಈ ದೇಶದ ಇತಿಹಾಸ, ಸಂಸ್ಕöÈತಿ ಏನು ಗೊತ್ತಿಲ್ಲ, ಈ ದೇಶದ ನಡೆದು ಬಂದ ಹಾದಿ, ಒಕ್ಕೂಟದ ವ್ಯವಸ್ಥೆ ಗೊತ್ತಿಲ್ಲ. ಕ್ಷÄಲ್ಲಕ ಮನೋಭಾವದ ವ್ಯಕ್ತಿಯಾಗಿದ್ದಾರೆ. 10 ದಿನ ಭಾರತದಲ್ಲಿ 20 ದಿನ ವಿದೇಶದಲ್ಲಿರುತ್ತಾರೆ. ಇಂತಹ ನಾಲಾಯಕ್‌ಗಳ ಬಗ್ಗೆ ಮಾತನಾಡೋದು ವ್ಯರ್ಥ. ರಾಹುಲ್ ಗಾಂದಿಯವರೇ ü ತಾತ,ಅಜ್ಜಿ, ಅಪ್ಪನ ಫೋಟೋ ಹಾಕಿಲ್ವಾ?
ರಾಜ್ಯದಲ್ಲಿ ಸಿದ್ದರಾಮಯ್ಯ, ಡಿಕೆಶಿವಕುಮಾರ್ ಅವರ ಫೋಟೋ ಹಾಕಿಲ್ವಾ ?. ಇಡೀ ದೇಶದಲ್ಲಿ ನಕ್ಸಲಿಸಂನ್ನು ನಿರ್ಮೂಲನೆ ಮಾಡಿದ
ಅಮಿತ್ ಶಾ ದೇಶದ ಗೃಹ ಮಂತ್ರಿ ಅವರ ಫೋಟೋ ಬಿಟ್ಟು ರಾಹುಲ್ ಗಾಂಧಿ ಫೋಟೋ ಹಾಕ್ತಾರಾ?
ರಾಹುಲ್ ಗಾಂಧಿ ವಿರುದ್ಧ ಕಿಡಿಕಾರಿದರು.
ಕಾಂಗ್ರೆಸ್‌ನವರು ಮಾಡಿರುವ ಪಾಪದ ಕೆಲಸಗಳನ್ನು ಕಳೆದು, ದೇಶವನ್ನು ಈಗ ವಿಕಸಿತ ಭಾರತದತ್ತ ಪ್ರಧಾನಿ ನರೇಂದ್ರ ಮೋದಿಯವರು ತೆಗೆದುಕೊಂಡು ಹೋಗುತ್ತಿದ್ದಾರೆ. 25 ಕೋಟಿ ಜನರು ಬಡತನದಿಂದ ಮುಕ್ತರಾಗಿ ಮೇಲೆ ಬಂದಿದ್ದಾರೆ. 16 ಕೋಟಿ ಜನರಿಗೆ ಶುದ್ಧವಾದ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ರೈಲ್ವೆ ಇಲಾಖೆಯನ್ನು ರಾಷ್ಟçದ ಸಂಪತ್ತಾಗಿ ಮಾಡಲಾಗಿದೆ. 2047ಕ್ಕೆ ವಿಕಸಿತ ಭಾರತ ಹೇಗಿರಬೇಕೆಂಬ ನಿಟ್ಟಿನಲ್ಲಿ ಸಕಲ ಪ್ರಯತ್ನಗಳನ್ನೂ ಮಾಡಲಾಗಿದೆ. ಇದನ್ನು ತಡೆದುಕೊಳ್ಳಲಾಗದ ಕ್ಷÄಲ್ಲಕ ಮನೋಭಾವದ ರಾಹುಲ್‌ಗಾಂಧಿ ಇಲ್ಲಸಲ್ಲದ ಆರೋಪ, ಟೀಕೆಗಳನ್ನು ಮಾಡುತ್ತಿದ್ದಾರೆ. ಅವರಿನ್ನೂ ಕೂಡ ಪ್ರಬುದ್ಧರಂತೆ ವರ್ತಿಸುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ಕೇಂದ್ರದ ಯೋಜನೆಗಳ ಅನುಷ್ಠಾನಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರಿಂದ ಸಹಕಾರ; ಕೇಂದ್ರ ಸಚಿವ ವಿ.ಸೋಮಣ್ಣ
ಮೈಸೂರು; ಕರ್ನಾಟಕದಲ್ಲಿ ಕೇಂದ್ರದ ಯೋಜನೆಗಳ ಅನುಷ್ಠಾನಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತುಂಬಾ ಸಹಕಾರ ನೀಡುತ್ತಿದ್ದಾರೆ’ ಎಂದು ಕೇಂದ್ರ ರೈಲ್ವೆ ಸಚಿವ ವಿ.ಸೋಮಣ್ಣ ಮೆಚ್ಚುಗೆ ವ್ಯಕ್ತಪಡಿಸಿದರು.
ಸೋಮವಾರ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಡಿ.ಕೆ. ‘ಶಿವಕುಮಾರ್ ಇಂದ್ರಲೋಕ ಸೃಷ್ಟಿಸುವ ಮಾತನಾಡಿದ್ದಾರೆ. ಎರಡು ತಿಂಗಳು ಕಾಯೋಣ. ಯಾವ ಲೋಕ ಸೃಷ್ಟಿಸುತ್ತಾರೆಯೋ ಗೊತ್ತಾಗುತ್ತದೆ. ನಾವೇನೂ ಅವರ ಕಾಲೆಳೆಯುವುದಿಲ್ಲ. ಅದನ್ನು ಮಾಡುವವರು ಆ ಪಕ್ಷದಲ್ಲೇ ಇದ್ದಾರೆ. ಬುದ್ಧಿವಂತರು, ಕೆಲಸ ಮಾಡುವರಿಗೆ ಕಾಂಗ್ರೆಸ್‌ನಲ್ಲಿ ಜಾಗವಿಲ್ಲ. ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ 15 ನಿಮಿಷದಲ್ಲಿ ಕಿತ್ತು ಹಾಕಿದ್ದಾರೆ. ಇದು ಕಾಂಗ್ರೆಸ್ ಮನಸ್ಥಿತಿ. ಡಿಕೆಶಿ ಒಳ್ಳೆಯ ಕೆಲಸ ಮಾಡಿದರೆ ಮೆಚ್ಚುತ್ತೇವೆ. ತಪುö್ಪ ದಾರಿ ಹಿಡಿದರೆ ಟೀಕಿಸುತ್ತೇವೆ’ ಎಂದರು.
‘ದೇಶದಾದ್ಯAತ ಕುಡಿಯುವ ನೀರಿನ ಯೋಜನೆಗಾಗಿಯೇ 7.50 ಲಕ್ಷ ಕೋಟಿ ಅನುದಾನ ನೀಡಿದ್ದೇವೆ. ಪ್ರತಿ ಹಳ್ಳಿಯಲ್ಲೂ ಶಾಶ್ವತ ಕುಡಿಯುವ ನೀರು ಕಲ್ಪಿಸುವ ವ್ಯವಸ್ಥೆಯನ್ನು ಕೆಲವೇ ವರ್ಷಗಳಲ್ಲಿ ಮಾಡಲಾಗುವುದು’ ಎಂದು ತಿಳಿಸಿದರು.
ಉಳ್ಳಾಲವರೆಗಿನ ಮಂಗಳೂರು ಪ್ರದೇಶವನ್ನು ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದಿಂದ ನೈರುತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ವರ್ಗಾಯಿಸುವ ಮೂಲಕ, ಕರ್ನಾಟಕಕ್ಕೆ ಆರ್ಥಿಕವಾಗಿ ಅನುಕೂಲ ಆಗುವಂತೆ ಮಾಡಿದ್ದೇವೆ. ಸಾವಿರಾರು ಕೋಟಿ ರೂಪಾಯಿ ಕೇರಳದ ಪಾಲಾಗುವುದನ್ನು ತಪ್ಪಿಸಿದ್ದೇವೆ’ ಎಂದು ತಿಳಿಸಿದರು.
‘ಕಳೆದ 23 ವರ್ಷಗಳಿಂದ ಸಾವಿರಾರು ಕೋಟಿ ರೂಪಾಯಿ ಆದಾಯವನ್ನು ಕೇರಳ ಮಾಡಿಕೊಂಡಿದೆ. ಈಗ ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕಕ್ಕೆ ನ್ಯಾಯ ಒದಗಿಸಿದ್ದಾರೆ. ‘ತಾಂತ್ರಿಕ ಸಮಿತಿಯ ವರದಿ ಆಧರಿಸಿ ಈ ಕ್ರಮ ಕೈಗೊಂಡಿದ್ದೇವೆ’. ಕಳೆದುಕೊಂಡಿದ್ದನ್ನು ಪಡೆದುಕೊಳ್ಳುವ ಕೆಲಸ ಮಾಡಿದ್ದೇವೆ. ಇದರಿಂದ ಕೇರಳಕ್ಕೆ ಯಾವ ತೊಂದರೆಯೂ ಆಗುವುದಿಲ್ಲ. ಅಲ್ಲಿನ ಸಚಿವರು, ಮುಖ್ಯಮಂತ್ರಿ ಏಕಿಷ್ಟು ವಿರೋಧ ವ್ಯಕ್ತಪಡಿಸುತ್ತಿದ್ದಾರೆಯೋ ತಿಳಿಯುತ್ತಿಲ್ಲ. ನಮ್ಮ ಹಕ್ಕನ್ನು ನಾವು ಪಡೆದುಕೊಂಡಿದ್ದೇವೆ. ಇದರಲ್ಲಿ ಕೇರಳಕ್ಕೆ ಅನ್ಯಾಯ ಆಗುವುದೆಲ್ಲಿಂದ ಬಂತು? ಯಾವ ರಾಜ್ಯಕ್ಕೂ ನಾವು ಅನ್ಯಾಯ ಮಾಡಿಲ್ಲ’ ಎಂದು ಕೇಳಿದರು.
ರೈಲ್ವೆ ಸಚಿವವಾಗಿ ಈ ಕೆಲಸ ನಿರ್ವಹಿಸಿದ್ದು ನನಗೆ ತೃಪ್ತಿ ನೀಡಿದೆ. ಇದರಿಂದ ಕನ್ನಡಿಗರಿಗೆ ಹೆಚ್ಚು ಕೆಲಸ ಸಿಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.