Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಗಾಯಿತ್ರಿ ಜಪ ಅನುಷ್ಠಾನ ಆಚರಣೆಯಿಂದ ಬದುಕಿನಲ್ಲಿ ಸಾಧನೆ ಸನ್ಮಾರ್ಗ ದೊರಕುತ್ತದೆ : ಎಚ್.ವಿ.ರಾಜೀವ್


ಮೈಸೂರು: ಗಾಯಿತ್ರಿ ಜಪ ಅನುಷ್ಠಾನ ಆಚರಣೆಯಿಂದ ಬದುಕಿನಲ್ಲಿ ಸಾಧನೆ ಸನ್ಮಾರ್ಗ ದೊರಕುತ್ತದೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ಹೇಳಿದರು.
ಬುಧವಾರ ನಗರದ ಕೆ.ಆರ್.ಮೊಹಲ್ಲಾದ ಕೆ ಎನ್ ಅಗ್ರಹಾರದಲ್ಲಿರುವ ಹಳೆ ನಾಡು ಸೋಸಲೆ ಕರ್ನಾಟಕ ಬ್ರಾಹ್ಮಣ ಸಂಘ ವತಿಯಿಂದ
ಏರ್ಪಡಿಸಿದ್ದ ಸಾಮೂಹಿಕ ಋಗ್ವೇದ ಉಪಾಕರ್ಮ ಆಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಗಾಯತ್ರಿ ಮಂತ್ರ, ಅತ್ಯಂತ ಪ್ರಭಾವಶಾಲಿಯಾದದು, ತೇಜಸ್ಸು, ಬುದ್ಧಿಶಕ್ತಿ ಮತ್ತು ಚಿತ್ತವೃತ್ತಿಯನ್ನು ಪಾವನಗೊಳಿಸುವುದೇ ಗಾಯತ್ರಿ ಮಂತ್ರ. ಗಾಯತ್ರಿ ಮಂತ್ರದಿAದ ಉತ್ತಮ ಸಂಸ್ಕಾರ ಸಿಗುತ್ತದೆ ಎಂದರು.
“ಬ್ರಹ್ಮ ಪವಿತ್ರವಾದ ಸೂರ್ಯನಾರಾಯಣನಿಂದ ಉದ್ಭವಿಸಲ್ಪಟ್ಟ ಗಾಯತ್ರಿ ಮಂತ್ರ, ಅತ್ಯಂತ ಪ್ರಭಾವಶಾಲಿಯಾದುದು. ಈ ಮಂತ್ರವು `ನನಗೆ ತೇಜಸ್ಸನ್ನು ಕೊಡು, ನನ್ನ ಬುದ್ಧಿಶಕ್ತಿಯನ್ನು ಅರಳಿಸು, ಮತ್ತು ಚಿತ್ತವೃತ್ತಿಯನ್ನು ಪಾವನಗೊಳಿಸು’ ಎನ್ನುವ ಅರ್ಥದೊಂದಿಗೆ ಎಲ್ಲರಿಗೂ ಶುಭವಾಗಲಿ ಎನ್ನುವ ಪರ್ಯಾಯ ಸಂದೇಶವನ್ನು ನೀಡುತ್ತದೆ. ಸ್ವಸ್ಥಿಕ ಮುದ್ರೆಯಲ್ಲಿ ಅಡ್ಡಗೆರೆ ಮತ್ತು ಉದ್ದಗೆರೆಯು ಸಮಾನವಾಗಿದ್ದು, ಕ್ರಮವಾಗಿ ಧರ್ಮದ ಪಾಲನೆ ಮತ್ತು ಬ್ರಹ್ಮಜ್ಞಾನದ ಸಂಪಾದನೆ ಎತ್ತರಕ್ಕೆ ಬೆಳೆಯಲಿ ಎಂದು ತಿಳಿಸುತ್ತದೆ. ಪ್ರತಿದಿನದ ಸೂರ್ಯೋದಯವನ್ನು ನೋಡಿ ಅನುಭವಿಸಿದರೆ, ಅದೇ ಶುಭಘಳಿಗೆಯಾಗಿ ಪವಿತ್ರವೆನಿಸುವುದು.” ಎಂದು ಹೇಳಿದರು
ಇದೇ ಸಂದರ್ಭದಲ್ಲಿ ಹಳೆ ನಾಡು ಸೋಸಲೆ ಕರ್ನಾಟಕ ಬ್ರಾಹ್ಮಣ ಸಂಘ ಅಧ್ಯಕ್ಷ ಟಿ.ಸತೀಶ, ಉಪಾಧ್ಯಕ್ಷ ಓಂ ಪ್ರಕಾಶ್,ಕಾರ್ಯದರ್ಶಿ ಆರ್.ಮಹೇಶ್ ಕುಮಾರ್,ಖಜಾಂಚಿ ನಾಗರಾಜ್, ಸಹ ಕಾರ್ಯದರ್ಶಿ ಶಂಕರ್ ನಾರಾಯಣ್ , ನಿರ್ದೇಶಕರಾದ ಜಯಶ್ರೀ, ಶಿವರಾಮು, ಸುಮತಿ ಮುರಳಿ ಕೃಷ್ಣ, ಸುದರ್ಶನ್, ಗೋವಿಂದ್ ರಾವ್ ಹಾಗೂ ಮ್ಯಾನೇಜರ್ ಪ್ರವೀಣ್ ಕುಮಾರ್, ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಹಾಜರಿದ್ದರು.