
ಮೈಸೂರು; ನಗರದ ಸರಸ್ವತಿಪುರಂನ ವಿಜಯವಿಠ್ಠಲ ಪದವಿಪೂರ್ವ ಕಾಲೇಜಿನಲ್ಲಿ ಸಂಸ್ಕೃತೋತ್ಸವವನ್ನು ಸಂಭ್ರಮದಿAದ ಆಚರಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಹೆಚ್. ಸತ್ಯಪ್ರಸಾದ್ರವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಬಳಿಕ ಮಾತನಾಡಿ, ಸಂಸ್ಕೃತವು ಅತ್ಯಂತ ಪುರಾತನ ಭಾಷೆಯಾಗಿದ್ದು ಬಹು ಭಾಷೆಗಳ ತಾಯಿಯಾಗಿದೆ. ಸಂಸ್ಕೃತ ಕೇವಲ ಒಂದು ಭಾಷೆಯಲ್ಲ, ಅದು ಭಾರತದ ಜ್ಞಾನ, ಸಂಸ್ಕೃತಿ ಮತ್ತು ಪರಂಪರೆಯ ಪ್ರತಿಬಿಂಬ ಎಂದು ತಿಳಿಸಿದರು.
ಸಾವಿರಾರು ವರ್ಷಗಳ ಭಾರತೀಯ ಚಿಂತನೆ, ಸಾಹಿತ್ಯ, ವಿಜ್ಞಾನ, ಗಣಿತ, ಆಯುರ್ವೇದ, ವ್ಯಾಕರಣ ಸಂಸ್ಕೃತದ ಮೂಲಕ ನಮಗೆ ದೊರೆತಿದೆ. ವೇದಗಳು, ಉಪನಿಷತ್ತು, ರಾಮಾಯಣ, ಮಹಾಭಾರತ, ಗೀತೆ ಸಂಸ್ಕೃತದೊAದಿಗೆ ಅವಿನಾಭಾವ ಸಂಬAಧವನ್ನು ಹೊಂದಿವೆ. ಕಾಳಿದಾಸ, ಭಾಸ ಮುಂತಾದ ಸಾಹಿತಿಗಳು ತಮ್ಮ ಕೃತಿಗಳ ಮೂಲಕ ಸಂಸ್ಕೃತ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಇಂದಿಗೂ ಪ್ರಸ್ತುತವಾಗಿರುವ ಸಂಸ್ಕೃತ ಭಾಷೆಯಲ್ಲಿ ಹಲವಾರು ಸಂಶೋಧನೆಗಳು ನಿರಂತರವಾಗಿ ನಡೆಯುತ್ತಿವೆ. ಶಬ್ದಗಳ ಸ್ಪಷ್ಟ ಉಚ್ಛಾರಣೆಗಾಗಿ ಸಂಸ್ಕೃತ ಭಾಷೆಯ ಅರಿವು ಅತ್ಯಾವಶ್ಯಕ. ಇದೇ ಸಂದರ್ಭದಲ್ಲಿ ಸಂಸ್ಕೃತ ಮತ್ತು ಗಣಿತ ಎಂಬ ವಿಷಯವಾಗಿ ಉಪನ್ಯಾಸ ನೀಡಿದ ಸತ್ಯಪ್ರಸಾದ್ ಅವರು ಸಂಸ್ಕೃತ ಮತ್ತು ಗಣಿತ ಒಂದಕ್ಕೊAದು ಪೂರಕವಾಗಿದೆ ಎಂದು ಹೇಳಿದರು.
ವಿದ್ಯಾರ್ಥಿಗಳು ಸಂಸ್ಕೃತ ಭಾಷೆಯನ್ನು ಆಸಕ್ತಿಯಿಂದ ಅಧ್ಯಯನ ಮಾಡಿ ಜ್ಞಾನವನ್ನು ಗಳಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಉತ್ಸಾ ಶ್ರೀನಾಥ್ , ಉಪನ್ಯಾಸಕಿ ಗೀತಾ ಮತ್ತಿತರರು ಉಪಸ್ಥಿತರಿದ್ದರು.