Skip to main content

3Kaala News

ಸುಭಾಷಿತ 

ನಾವು ಮಾಡುವ ಕೆಲಸದಲ್ಲಿ ಸಂಪೂರ್ಣ ಶ್ರದ್ಧೆ ಮತ್ತು ಭಕ್ತಿ ಇದ್ದಾಗ ಮಾತ್ರ ಯಶಸ್ಸು ಒಲಿಯುತ್ತದೆ. ಅರ್ಧಮನಸ್ಸಿನಿಂದ ಮಾಡುವ ಕೆಲಸ ಎಂದಿಗೂ ಪರಿಪೂರ್ಣ ಫಲ ನೀಡಲಾರದು.

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ರಕ್ಷಾ ಬಂಧನ ಆಚರಣೆ


ಮೈಸೂರು ; ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಶುಕ್ರವಾರ ಮೈಸೂರಿನ ಹೂಟಗಳ್ಳಿ ಕೆಎಚ್‌ಬಿ ಕಾಲೋನಿಯ ಸುದರ್ಶನ ವಿದ್ಯಾ ಸಂಸ್ಥೆಯಲ್ಲಿ ರಕ್ಷಾ ಬಂಧನವನ್ನು ಶಿಕ್ಷಕರಿಗೆ ರಕ್ಷೆ ಕಟ್ಟುವ ಮೂಲಕ ಸಡಗರಿಂದ ಆಚರಿಸಲಾಯಿತು..
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿಯ ಮೈಸೂರು ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ಮೋನಿಕಾ ಎಂ , ರಕ್ಷಾ ಬಂಧನವು ಸಹೋದರ-ಸಹೋದರಿಯರ ನಡುವಿನ ಪ್ರೀತಿ, ನಂಬಿಕೆ ಮತ್ತು ರಕ್ಷಣೆಯ ಬಾಂಧವ್ಯವನ್ನು ಸಾರುವ ಪವಿತ್ರ ಹಬ್ಬವಾಗಿದೆ. ಈ ದಿನ ಸಹೋದರಿ ಸಹೋದರನ ಕೈಗೆ ರಾಖಿ ಕಟ್ಟಿ ಅವನ ಸುಖ, ಶಾಂತಿ ಮತ್ತು ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತಾಳೆ. ಸಹೋದರನು ಸಹ ತನ್ನ ಸಹೋದರಿಯನ್ನು ಸದಾ ರಕ್ಷಿಸುವ ಭರವಸೆಯನ್ನು ನೀಡುತ್ತಾನೆ ಎಂದರು.
ರಾಖಿಯ ಈ ಪವಿತ್ರ ದಾರವು ಕೇವಲ ಒಂದು ಆಚರಣೆಯಲ್ಲ, ಪರಸ್ಪರ ಗೌರವ, ಕಾಳಜಿ ಮತ್ತು ಜವಾಬ್ದಾರಿಯ ಸಂಕೇತವಾಗಿದೆ. ರಕ್ಷಾ ಬಂಧನವು ಕುಟುಂಬ ಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸಿ, ಪ್ರೀತಿ ಮತ್ತು ಸೌಹಾರ್ದತೆಯ ಸಂದೇಶವನ್ನು ಸಮಾಜಕ್ಕೆ ಸಾರುತ್ತದೆ ಎಂದು ಹೇಳಿದರು
ಈ ಸಂದರ್ಭದಲ್ಲಿ ಸುದರ್ಶನ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಸುರೇಶ್ ಕುಮಾರ್ , ಮುಖ್ಯೋಪಾಧ್ಯಾಯನಿ ವಿನುತಾ, ಪ್ರವೀಣ್ ಎಂ ಜಿ, ಜಿಲ್ಲಾ ಮಹಿಳಾ ಮೋರ್ಚ ಪ್ರಧಾನ ಕಾರ್ಯದರ್ಶಿ ರಶ್ಮಿ, ಖಜಾಂಚಿ ಗೀತಾ, ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷ ಅನಿತಾ, ವತ್ಸಲಾ , ಮಣಿಯಮ್ಮ, ಸುಧಾಮಣಿ ಹಾಜರಿದ್ದರು.