ಶಾಖಾ ಗ್ರಂಥಾಲಯ ಆಗಸ್ಟ್ 31 ರಂದು ಸಾರ್ವಜನಿಕ ಸೇವೆಗೆ ಲಭ್ಯ
ಮೈಸೂರು: ಗ್ರಂಥಾಲಯ ಪಿತಾಮಹ, ಪದ್ಮಶ್ರೀ ಡಾ. ಎಸ್.ಆರ್. ರಂಗನಾಥನ್ ಅವರ ಜನ್ಮದಿನದ ಅಂಗವಾಗಿ ಆಯೋಜಿಸಲಾಗಿರುವ ಕಾರ್ಯಕ್ರಮದ ಹಿನ್ನೆಲೆಯಲ್ಲಿ, ಆಗಸ್ಟ್ 31 ರಂದು ಮೈಸೂರು ನಗರ ಕೇಂದ್ರ ಗ್ರಂಥಾಲಯದ ವ್ಯಾಪ್ತಿಯ ಪೀಪಲ್ಸ್ ಪಾರ್ಕ್ ಶಾಖಾ ಗ್ರಂಥಾಲಯದಲ್ಲಿ ಮಾತ್ರ ಬೆಳಿಗ್ಗೆ 10 ರಿಂದ ಸಂಜೆ 5.30 ಗಂಟೆಯವರೆಗೆ ಸಾರ್ವಜನಿಕ ಓದುಗರ ಸೇವೆಗೆ ತೆರೆದಿರಲಿದೆ.
ಸೋಮವಾರ ವಾರದ ರಜಾ ದಿನವಾಗಿದ್ದರೂ, ಇಲಾಖಾ ಆಯುಕ್ತರ ನೂತನ ಆದೇಶದನ್ವಯ ಪೀಪಲ್ಸ್ ಪಾರ್ಕ್ ಶಾಖಾ ಗ್ರಂಥಾಲಯದಲ್ಲಿ ಮಾತ್ರ ಸಾರ್ವಜನಿಕ ಸೇವೆ ಲಭ್ಯವಿರಲಿದ್ದು, ಮೈಸೂರು ನಗರದ ಉಳಿದ ಎಲ್ಲಾ ಶಾಖಾ ಹಾಗೂ ಸೇವಾ ಕೇಂದ್ರ ಗ್ರಂಥಾಲಯಗಳಿಗೆ ಯಥಾ ರೀತಿ ವಾರದ ರಜೆ ಇರಲಿದೆ.
ಮೊದಲು ಎಲ್ಲಾ ಶಾಖಾ ಗ್ರಂಥಾಲಯಗಳು ತೆರೆದಿರುತ್ತವೆ ಎಂದು ಪ್ರಕಟಿಸಲಾಗಿತ್ತು. ಪ್ರಸ್ತುತ ಪರಿಷ್ಕೃತ ಆದೇಶ ಹೊರಬಿದ್ದಿದ್ದು, ಸಾರ್ವಜನಿಕ ಓದುಗರು ಈ ಬದಲಾವಣೆಯನ್ನು ಗಮನಿಸಿ ಪೀಪಲ್ಸ್ ಪಾರ್ಕ್ ಶಾಖಾ ಗ್ರಂಥಾಲಯದ ಸೇವೆಯ ಸದುಪಯೋಗ ಪಡೆದುಕೊಳ್ಳಬೇಕಾಗಿ ನಗರ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕರಾದ ಮಂಜುನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
--°C
Mysore, IN
Loading...