
ಮೈಸೂರು: ಸ್ಥಳೀಯ ಮಾರುಕಟ್ಟೆಯಲ್ಲಿ ರೈತ ಉತ್ಪಾದಕ ಸಂಸ್ಥೆಗಳು ಬೇಡಿಕೆಗೆ ಅನುಗುಣವಾಗಿ ತಮ್ಮ ಉತ್ಪನ್ನಗಳನ್ನು ಯುಎಂಪಿ- ಆರ್‌ಇಎಂಎಸ್ ಡಿಜಿಟಲ್ ವೇದಿಕೆಯಡಿ ಸ್ಪರ್ಧಾತ್ಮಕ ರೀತಿಯಲ್ಲಿ ಮಾರಾಟ ಮಾಡುವುದರಿಂದ ಕೃಷಿ ವಹಿವಾಟಿಗೆ ಹೆಚ್ಚಿನ ವೇಗ ನೀಡಲು ಸಾಧ್ಯ ಎಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಉಪ ಕೃಷಿ ನಿರ್ದೇಶಕಿ ಮಮತಾ ಹೆಚ್.ಎನ್. ತಿಳಿಸಿದರು.
ಮೈಸೂರು ತಾಲೂಕಿನ ನಾಗನಹಳ್ಳಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಜಲಾನಯನ ಅಭಿವೃದ್ಧಿ ಹಾಗೂ ಕೃಷಿ ಇಲಾಖೆ, ರೈತ ಉತ್ಪಾದಕ ಸಂಸ್ಥೆಗಳ ಉತ್ಕೃಷ್ಟ ಕೇಂದ್ರ ಬೆಂಗಳೂರು, ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಮತ್ತು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಇವರ ಸಂಯುಕಾಶ್ರಯದಲ್ಲಿ ಆಯೋಜಿಸಲಾಗಿದ್ದ “ಕೃಷಿ ಮತ್ತು ಸಹೋದರ ಇಲಾಖೆಗಳ ಯೋಜನೆಗಳ ಅರಿವು ಹಾಗೂ ಯುಎಂಪಿ- ಆರ್‌ಇಎಂಎಸ್ ವೇದಿಕೆಯಡಿ ವ್ಯವಹಾರ ನಿರ್ವಹಣೆ ಮತ್ತು ಅಭಿವೃದ್ಧಿ” ಕುರಿÀ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೃಷಿ ಮಾರಾಟ ಇಲಾಖೆಯ ಜಂಟಿ ನಿರ್ದೇಶಕಿ ವಾಣಿಶ್ರೀ ಮಾತನಾಡಿ, ಕೃಷಿ ಮಾರುಕಟ್ಟೆ ಸಮಿತಿಯ ಚಟುವಟಿಕೆಗಳು ಮತ್ತು ಎಂ.ಎಸ್.ಪಿ. ಯೋಜನೆಯ ಬಗ್ಗೆ ವಿವರಿಸಿದರು ಹಾಗೂ ರೈತರೊಂದಿಗೆ ಚರ್ಚಿಸಿ, ಅವಶ್ಯಕ ಮಾಹಿತಿಯನ್ನು ಹಂಚಿಕೊAಡರು.
ರೈತ ಉತ್ಪಾದಕ ಸಂಸ್ಥೆಗಳ ಉತ್ಕೃಷ್ಟ ಕೇಂದ್ರದ ಹಿರಿಯ ಸಲಹೆಗಾರರಾದ ಜಯಣ್ಣ ವೈ.ಆರ್. ಮಾತನಾಡಿ, ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯ ಕಾರ್ಯದರ್ಶಿಗಳ ಎಸ್.ಎಲ್.ಇ.ಸಿ. ಸಭೆಯ ಸೂಚನೆಯ ಆಧಾರದ ಮೇಲೆ ಜಲಾನಯನ ಇಲಾಖೆ ಮತ್ತು ಅಔಇ-ಈPಔ ಸಹಯೋಗದೊಂದಿಗೆ ಜಿಲ್ಲಾ ಮಟ್ಟದಲ್ಲಿ ವಿವಿಧ ಇಲಾಖೆಗಳಿಂದ ರಚಿತವಾದ ಎಫ್‌ಪಿಒ ಗಳಿಗೆ ಆರ್‌ಇಎಂಎಸ್ ವೇದಿಕೆಯಲ್ಲಿ ಎಫ್‌ಪಿಒ ಗಳು ಹೆಚ್ಚು ವ್ಯವಹಾರ ಮಾಡಬೇಕೆಂದು ಮತ್ತು ಎಲ್ಲಾ ಸಂಬAಧಿತ ಇಲಾಖೆಗಳು ಸಹ ತಮ್ಮ ಇಲಾಖೆಯಲ್ಲಿ ರೈತರಿಗೆ & ಎಫ್‌ಪಿಒ ಗಳಿಗೆ ದೊರೆಯುವ ಸೌಲಭ್ಯಗಳ ಕುರಿತು ಅರಿವು ಮೂಡಿಸುವುದು ಈ ತರಬೇತಿಯ ಉದ್ದೇಶ ಎಂದು ವಿವರಿಸಿದರು.
ಸಹಾಯಕ ಕೃಷಿ ನಿರ್ದೇಶಕ (ಕೇಂದ್ರ) ಹರೀಶ್ ಮಾತನಾಡಿ, ಕೃಷಿ ಇಲಾಖೆಯಿಂದ ದೊರೆಯುವ ಸವಲತ್ತುಗಳ ಬಗ್ಗೆ ತಿಳಿಸಿದರು. ಬಸವರಾಜು ತಾಂತ್ರಿಕಾರಿ ಆರ್‌ಇಎಂಎಸ್ ರವರು ರಾಷ್ಟ್ರೀಯ ಇ ಮಾರುಕಟ್ಟೆಯ ವೇದಿಕೆಯಲ್ಲಿ ಎಫ್‌ಪಿಒ ಗಳ ವ್ಯವಹಾರ ಅಭಿವೃದ್ದಿ ಕುರಿತು ಸಂಕ್ಷಿಪ್ತ ಮಾಹಿತಿ ಹಂಚಿಕೊAಡರು. ಸಹಾಯಕ ತೋಟಗಾರಿಕೆ ನಿರ್ದೇಶಕ ಶರತ್‌ಪಾಲ್ ರವರು ತೋಟಗಾರಿಕೆ ಇಲಾಖೆಯಿಂದ ದೊರೆಯುವ ಸವಲತ್ತುಗಳ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲೆಯ ಎಲ್ಲಾ ರೈತ ಉತ್ಪಾದಕ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ಸದಸ್ಯರು ಭಾಗವಹಿಸಿ ಮಾಹಿತಿ ಪಡೆದಕೊಂಡರು.