
ಮೈಸೂರು: ವಿಶ್ವ ಪ್ರಸಿದ್ಧ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಮನರಂಜೆಯ ಮುನ್ಮ್ನಡಿಯಾದ ಯುವ ಸಂಭ್ರಮ ಈ ಬಾರಿ ಸೆ.28ರಿಂದ ಅಕ್ಟೋಬರ್ 5 ರವರೆಗೆ ನಡೆಯಲಿದೆ.
ಸ್ಥಳೀಯ ಕಾಲೇಜು ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿಕೊಡಲು ನಗರದ ಮಾನಸಗಂಗೋತ್ರಿಯ ಬಯಲು ರಂಗಮAದಿರದಲ್ಲಿ ನಡೆಸಿಕೊಂಡು ಬರುತ್ತಿರುವ ಯುವ ಸಂಭ್ರಮವನ್ನು ಈ ಬಾರಿ ಸೆ.28ರಿಂದ ಅಕ್ಟೋಬರ್ 5 ರವರೆಗೆ ವಿಶೇಷವಾಗಿ ಆಯೋಜಿಸಲು ಉಪ ಸಮಿತಿ ನಿರ್ಧರಿಸಿದ್ದು, ಮಹಾರಾಜ ಕಾಲೇಜು ಶತಮಾನೋತ್ಸವ ಸಭಾಂಗಣದಲ್ಲಿ ಸೋಮವಾರ ನಡೆದ ಸರ್ಕಾರಿ ಮತ್ತು ಖಾಸಗಿ ಕಾಲೇಜುಗಳ ಪ್ರಾಂಶುಪಾಲರ ಸಭೆಯನ್ನು ನಡೆಸಿ ಹಲವಾರು ಸಲಹೆಗಳನ್ನು ಸ್ವೀಕರಿಸಲಾಯಿತು. ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಕಾಲೇಜುಗಳ ಮುಖ್ಯಸ್ಥರು, ಪ್ರಾಂಶುಪಾಲರು ಹಲವು ವಿಚಾರಗಳನ್ನು ಸಮಿತಿ ಗಮನಕ್ಕೆ ತಂದರು.ಯುವ ಸಂಭ್ರಮದಲ್ಲಿ ಪಾಲ್ಗೊಳ್ಳುವ ತಂಡಗಳು ಮತ್ತು ವಿಜೇತ ತಂಡಗಳಿಗೆ ಕೊಡುವ ಭತ್ಯೆಯನ್ನು ಹೆಚ್ಚಿಸಬೇಕು. ಇವೆಂಟ್‌ಗಳನ್ನು ಕಡಿಮೆ ಮಾಡುವ ಜತೆಗೆ, ಮತ್ತಷ್ಟು ದಿನಗಳನ್ನು ಹೆಚ್ಚಿಸಬೇಕು ಎಂದು ಹೇಳಿದರು. ವಿದ್ಯಾರ್ಥಿಗಳು, ಸದಸ್ಯರು, ಮತ್ತಿತರರಿಗೆ ಗುಣಮಟ್ಟದ ಊಟ ನೀಡಬೇಕು. ಹಿಂದೆ ಕೆಲವರು ಊಟವನ್ನು ಬಿಸಾಡಿ ಹೋಗಿದ್ದಾರೆ. ಹಾಗಾಗಿ, ಶುಚಿ ಮತ್ತು ರುಚಿಯಾದ ಊಟ ಕೊಡುವ ಜತೆಗೆ, ವಾಷ್ ರೂಂಗಳಲ್ಲಿ ನೀರು ಒದಗಿಸಬೇಕು. ಪಾರ್ಕಿಂಗ್ ವ್ಯವಸ್ಥೆ, ಸ್ವಚ್ಛತೆಯನ್ನು ಕಾಪಾಡಬೇಕು ಎಂದು ಸಲಹೆ ನೀಡಿದರು.
ಎನ್‌ಎಸ್‌ಎಸ್ ಹಾಗೂ ಇತರೆ ಅಧಿಕಾರಿಗಳು, ಸ್ವಯಂಸೇವಕರು ಶಿಸ್ತಾಗಿ ನಡೆದುಕೊಳ್ಳಬೇಕು. ವೇದಿಕೆ ಮುಂಭಾಗ ಹಾಗೂ ವೇದಿಕೆ ಮೇಲೆ ಅಶಿಸ್ತು ಇಲ್ಲದಂತೆ ಗಮನಿಸಬೇಕು. ಗೌರವಧನ ಹೆಚ್ಚಿಸಬೇಕು. ಕೊರಿಯೋಗ್ರಾಫರ್‌ಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಥೀಮ್ ಬೇಷ್ ಮೇಲೆ ಅತ್ಯುತ್ತಮ ಕಾಲೇಜುಗಳನ್ನು ಆಯ್ಕೆ ಮಾಡಬೇಕು. ಕೊರಿಯೋಗ್ರಾಫರ್‌ಗಳನ್ನು ಬಳಸಿಕೊಳ್ಳಬೇಕು. ಕಾರ್ಯಕ್ರಮಗಳು ಪುನರಾವರ್ತನೆ ಆಗದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಲಾಯಿತು. ಇವೆಂಟ್‌ಗಳನ್ನು ಕಡಿಮೆ ಮಾಡಿ ಹೆಚ್ಚು ದಿನ ಅವಕಾಶ ನೀಡಿದರೆ ಗುಣಮಟ್ಟದ ಜತೆಗೆ ಎಲ್ಲರಿಗೂ ಅವಕಾಶ ಸಿಗುವಂತೆ ಮಾಡಬೇಕು. ಒಂದೊAದು ದಿನ ಜಾಸ್ತಿ ಆಯ್ಕೆ ಮಾಡಿದಷ್ಟು ಪುನರಾವರ್ತನೆಗೆ ದಾರಿಯಾಗಲಿದೆ ಎನ್ನುವ ಸಲಹೆಯನ್ನು ಸಮಿತಿ ಪರಿಗಣಿಸಿ ಕ್ರಮದ ಭರವಸೆ ನೀಡಿತು. ಯುವ ಸಂಭ್ರಮ ಉಪ ಸಮಿತಿ ಉಪ ವಿಶೇಷಾಧಿಕಾರಿ ಆರ್.ಐಶ್ವರ್ಯ, ಮೈಸೂರು ವಿವಿ ಪ್ರಭಾರ ಕುಲಸಚಿವ ಪ್ರೊ.ಎಸ್.ಜೆ.ಮಂಜುನಾಥ್, ಪ್ರಾದೇಶಿಕ ಶಿಕ್ಷಣ ಇಲಾಖೆ ಪ್ರಾದೇಶಿಕ ನಿರ್ದೇಶಕರಾದ ಎಸ್.ಪ್ರತಿಮಾ, ಡಿಡಿಪಿಯು ಸಿ.ನಾಗಮ್ಮ, ಪ್ರಾದೇಶಿಕ ಶಿಕ್ಷಣ ಇಲಾಖೆ ಸಹಾಯಕ ನಿರ್ದೇಶಕ ನಾಗೇಂದ್ರಪ್ರಸಾದ್, ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶಕ ಟಿ.ರಾಮಚಂದ್ರ, ಸಮಿತಿ ಕಾರ್ಯಾಧ್ಯಕ್ಷರಾದ ಪ್ರತಿಭಾ, ಸಹ ಕಾರ್ಯದರ್ಶಿಗಳಾದ ಪ್ರೊ.ಕೆ.ವೆಂಕಟೇಶ್, ಪ್ರೊ.ಎಂ.ಎಸ್.ಸಪ್ನಾ, ಪೂರ್ಣಶ್ರೀ, ಕಾರ್ಯದರ್ಶಿ ಮೈತ್ರಿ, ಸಮನ್ವಯಾಧಿಕಾರಿ ಆರ್.ನಿಂಗರಾಜು ಮತ್ತಿತರರು ಹಾಜರಿದ್ದರು