
ಮೈಸೂರು; ‘ಗ್ರೇಟ್ ಮೈಂಡ್ಸ್ಚೆಸ್ಅಕಾಡೆಮಿ’ ಆಯೋಜಿಸಿದ್ದ ಚೆಸ್ ಸ್ಪರ್ಧೆಯಲ್ಲಿ ಮೈಸೂರಿನ ವಿಜಯ ವಿಠ್ಠಲ ವಿದ್ಯಾಶಾಲೆ’ಯ ವಿದ್ಯಾರ್ಥಿಗಳು ಪ್ರಮುಖ ಸ್ಥಾನಗಳನ್ನು ಗಳಿಸಿ ಶಾಲೆಗೆ ಕೀರ್ತಿತಂದಿದ್ದಾರೆ.
ಆರನೇತರಗತಿಯ ಅದ್ವಿತ್ ಎಂ. ಡಿ. ದ್ವಿತೀಯ ಸ್ಥಾನವನ್ನು ಪಡೆದುಕೊಂಡರೆ, ಚಿರಂತ್ಆತ್ರೇಯ ಪಿ. ತೃತೀಯ ಸ್ಥಾನವನ್ನು ಗಳಿಸಿ ತಮ್ಮ ಅತ್ಯುತ್ತಮ ವ್ಯೂಹಾತ್ಮಕಚಿಂತನೆ ಮತ್ತು ಸ್ಪರ್ಧಾತ್ಮಕ ಮನೋಭಾವವನ್ನು ಪ್ರದರ್ಶಿಸಿದ್ದಾರೆ.
ಐದನೇತರಗತಿಯ ವಿಭಾಗದಲ್ಲಿ ರಾಘವೇಂದ್ರ ಹರ್ಷಿಲ್ ಸಿ. ಎಲ್. ಪ್ರಥಮ ಸ್ಥಾನವನ್ನು ಪಡೆದು ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ, ಹಾಗೆಯೇ ಅಭಿನವ್ಎಸ್. ಪಂಚಮ ಸ್ಥಾನವನ್ನು ಗಳಿಸಿ ಗಮನಾರ್ಹ ಸಾಧನೆ ಮಾಡಿದ್ದಾರೆ.