
ಮೈಸೂರು; ಇಲ್ಲಿನ ಎಂ.ಬಿ.ಹಳ್ಳಿ ರಸ್ತೆ, ನಿರ್ಮಾಣ್ ನಗರ, ಜಂತಗಳ್ಳಿಯಲ್ಲಿರುವ ಕಲ್ಪವೃಕ್ಷಕ್ಷೇತ್ರ ಶ್ರೀರಾಘವೇಂದ್ರಸ್ವಾಮಿ ಮಠದಲ್ಲಿ ೩೫೫ನೇ ರಾಯರಉತ್ತರರಾಧನೆ ಮಹೋತ್ಸವ ಸಡಗರಿಂದ ನಡೆಯಿತು. ಇದರ ಅಂಗವಾಗಿ ಶ್ರೀರಾಘವೇಂದ್ರಸ್ವಾಮಿಯವರಿಗೆ ಪಂಚಾಮೃತಅಭಿಷೇಕ, ವಿಶೇಷ ಹೂವಿನ ಅಲಂಕಾರ, ಮಹಾಮಂಗಳಾರತಿ ನೆರವೇರಿಸಲಾಯಿತು. ಬಳಿಕ ಭಕ್ತಾಧಿಗಳಿಗೆ ಪ್ರಸಾದ ವಿನಿಯೋಗನಡೆಯಿತು. ನಂತರ ರಾಯರ ಮೆರವಣಿಗೆಯನ್ನು ಕಲ್ಪವೃಕ್ಷಕ್ಷೇತ್ರದ ಪ್ರಮುಖ ರಸ್ತೆಗಳಲ್ಲಿ ಅತ್ಯಂತ ಯಶಸ್ವಿಯಾಗಿ ನೆರವೇರಿಸಲಾಯಿತು. ನೂರಾರು ಮಂದಿ ಭಕ್ತರು ಭಾಗವಹಿಸಿದ್ದರು.